ಕವಿ ಗವಿಸಿದ್ಧ ಎನ್. ಬಳ್ಳಾರಿ ಸ್ಮರಣೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕೊಪ್ಪಳ : ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಮತ್ತು ತಳಮಳ ಪ್ರಕಾಶನ ಕೊಪ್ಪಳದ ವತಿಯಿಂದ ನಾಡಕವಿ ಖ್ಯಾತಿಯ ಕವಿ ಗವಿಸಿದ್ಧ ಎನ್. ಬಳ್ಳಾರಿಯವರ ೧೩ ನೆಯ ವರ್ಷದ ಸ್ಮರಣೆ ಮತ್ತು ಮಹೇಶ ಬಳ್ಳಾರಿಯವರ ೬ ನೆಯ ಕೃತಿ ’ಕಲ್ಲು ಲಿಂಗವಾದ ದಿನ’ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ದಿ. ೦೩-೦೯-೨೦೧೭, ರವಿವಾರ ಕೊಪ್ಪಳದ ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಮುಂಜಾನೆ ೧೦.೩೦ ಕ್ಕೆ ಆಯೋಜಿಸಲಾಗಿದೆ. ಹೆಸರಾಂತ ಕವಿ ಹಾವೇರಿಯ ಸತೀಶ ಕುಲಕರ್ಣಿಯವರು ’ಕಲ್ಲು ಲಿಂಗವಾದ ದಿನ’ ಕೃತಿಯನ್ನು ಬಿಡುಗಡೆ ಮಾಡಿ ಗವಿಸಿದ್ಧ ಎನ್. ಬಳ್ಳಾರಿಯವರ ಬಗ್ಗೆ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗಂಗಾವತಿಯ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವೀರಭದ್ರಪ್ಪ ಗೊಂಡಬಾಳ ಮತ್ತು ಕೊಪ್ಪಳ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಬಳ್ಳೊಳ್ಳಿಯವರು ಆಗಮಿಸಲಿದ್ದಾರೆ. ವೇದಿಕೆ ಪರವಾಗಿ ಎಚ್.ಎಸ್. ಪಾಟೀಲ, ಅಲ್ಲಮಪ್ರಭು ಬೆಟ್ಟದೂರ ಮತ್ತು ಪ್ರಕಾಶ ಬಳ್ಳಾರಿ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮಕ್ಕೆ ಗವಿಸಿದ್ಧ ಎನ್. ಬಳ್ಳಾರಿಯವರ ಅಭಿಮಾನಿಗಳು, ಸಾಹಿತ್ಯ ಬಳಗ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

Please follow and like us:
error