ಕವಿ ಗವಿಸಿದ್ಧ ಎನ್.ಬಳ್ಳಾರಿ ಸ್ಮರಣೆ

 

ಕೊಪ್ಪಳ ಮಾ.೧೧: ಕವಿ ಗವಿಸಿದ್ಧ ಎನ್.ಬಳ್ಳಾರಿ ಸ್ಮರಣೆ ಕಾರ್ಯಕ್ರಮ ಭಾಗ್ಯನಗರದ ‘ಅವ್ವ’ ಸದನದಲ್ಲಿ ದಿ:೧೪-೦೩-೨೦೨೧ ಸಂಜೆ ೫.೪೫ ಕ್ಕೆ ನಡೆಯಲಿದ್ದು ಡಿ.ರಾಮಣ್ಣ ಹಾಲ್ಮೊಸರುಕೇರಿ ಅವರು ಗವಿಸಿದ್ಧ ಎನ್.ಬಳ್ಳಾರಿ ಕಾವ್ಯ ಕುರಿತು ಮಾತನಾಡಲಿದ್ದಾರೆ. ೧೫ ಜನ ಕವಿಗಳು ಗವಿಸಿದ್ಧ ಅವರ ಕವಿತೆಗಳನ್ನು ವಾಚಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಎಚ್.ಎಸ್.ಪಾಟೀಲ ವಹಿಸಲಿದ್ದಾರೆ. ಎ.ಎಂ.ಮದರಿ ಅವರು ಗವಿಸಿದ್ಧ ಅವರ ಕುರಿತು ಮಾತನಾಡಲಿದ್ದಾರೆ. ಸಾಹಿತ್ಯಾಸಕ್ತರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಗವಿಸಿದ್ಧ ಎನ್.ಬಳ್ಳಾರಿ ವೇದಿಕೆ ಶಕ್ತಿ ಶಾರದೆಯ ಮೇಳ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ ಸಂಘಟನೆಗಳ ಪರವಾಗಿ ಅಲ್ಲಮಪ್ರಭು ಬೆಟ್ಟದೂರು ಕೋರಿದ್ಧಾರೆ

Please follow and like us:
error