ಕಳ್ಳತನ ಪ್ರಕರಣ ಬೇದಿಸಿದ ಪೋಲಿಸರು

ಕೊಪ್ಪಳ : ಒಂದೇ ಗ್ರಾಮದ 5 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂರು ಜನ ಆರೋಪಿಗಳನ್ನು ಕೊಪ್ಪಳ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮದ ಪರಸಪ್ಪ, ಖಾಸೀಂಸಾಬ ಸೇರಿದಂತೆ ಓರ್ವ ಬಾಲಕನ್ನು ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತರಿಂದ 1 ಲಕ್ಷ 78 ಸಾವಿರ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಕೊಳ್ಳಲಾಗಿದೆ. ಕಳೆದ ನವಂಬರ 11 ರಂದು ಇದೇ ಬಳೂಟಗಿ ಗ್ರಾಮದಲ್ಲಿ ಹಗಲು ಹೊತ್ತಿನಲ್ಲೇ ಪ್ರತ್ಯೇಕ 5 ಮನೆಗಳಲ್ಲಿ ಸರಣಿ ಕಳ್ಳತನವಾಗಿತ್ತು. ಈ ಬಗ್ಗೆ ತೀವ್ರ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಸಫಲರಾಗಿದ್ದು, ಎಸ್ಪಿ ರೇಣುಕಾ ಸುಕುಮಾರ್ ತಮ್ಮ ಸಿಬ್ಬಂದಿಗಳ ಕಾರ್ಯಕ್ಕೆ ಶ್ಲಾಘೀಸಿದ್ದಾರೆ.

Please follow and like us:
error