ಕಲ್ಮಠ ಸ್ವಾಮಿ ವಿರುದ್ದ ಹೋರಾಟ : ಕೇಸ್ ದಾಖಲು

ಗಂಗಾವತಿ : ಗಂಗಾವತಿ ಕಲ್ಮಠ ಸ್ವಾಮಿಯ ವಿಡಿಯೋ , ಪೋಟೊ ವೈರಲ್ ಪ್ರಕರಣದಲ್ಲಿ ಸ್ವಾಮಿಯ ವಿರುದ್ದ ಹೋರಾಡುತ್ತಿರುವ ಅಶೋಕಸ್ವಾಮಿ ಹಾಗೂ ಮಲ್ಲಿಕಾರ್ಜುನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಅಪ್ರಾಪ್ತ ವಯಸ್ಸಿನ ಮಗಳು ಮತ್ತು ತನ್ನ ಮೇಲೆ ಸುಳ್ಳು ಸುದ್ದಿ ಹಾಕಿದ್ದಾರೆ ಎಂದು ಆರೋಪ ಮಾಡೊರುವ ವಿಡಿಯೋದಲ್ಲಿದ್ದ ಮಹಿಳೆ ಬಸಲಿಂಗಮ್ಮ. ಅಕ್ರಮ ಸಂಬಂದ ಎಂದು ಸುಳ್ಳು ಮಾಹಿತಿಯನ್ನು , ಸುದ್ದಿಯನ್ನು ಸಾಮಾಜಿಕ ತಾಣಗಳಲ್ಲಿ ಅಶೋಕಸ್ವಾಮಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಕಲಂ ೩೫೪,೫೦೪,೫೦೬ ಸಹಿತ ೩೪ ಐಪಿಸಿ ಹಾಗೂ ೨೩(೪) ಪೋಕ್ಸೋ ಕಾಯ್ದೆಯನ್ವಯ ಪ್ರಕರಣ ದಾಖಲು…

ಗಂಗಾವತಿ ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.