You are here
Home > Koppal News > ಕಲೆಯ ದೇಹಕ್ಕೆ ಜೀವ ತುಂಬಿ ಬಾವ ಬೆಸೆದಾಗ ಮಾತ್ರ ಅಭಿನಯ ಸಾಧ್ಯ-ಬಿನ್ನಾಳ

ಕಲೆಯ ದೇಹಕ್ಕೆ ಜೀವ ತುಂಬಿ ಬಾವ ಬೆಸೆದಾಗ ಮಾತ್ರ ಅಭಿನಯ ಸಾಧ್ಯ-ಬಿನ್ನಾಳ


ಎಂ.ಪರಶುರಾಮಪ್ರಿಯರಿಗೆ ಸಿಜಿಕೆ ರಂಗಪುರಸ್ಕಾರ ಪ್ರಶಸ್ತಿ ಪ್ರದಾನ
ಕೊಪ್ಪಳ : ರಂಗಕಲೆ ಎನ್ನುವುದು ನೋಡುವುದಕ್ಕೆ ಸುಂದರವಾಗಿ ಕಂಡರೂ ಅದರಲ್ಲಿ ಹೊಕ್ಕು ನೋಡಿದಾಗ ಕಲೆ ಎನ್ನುವುದು ಒಂದು ಕಾಡು ಕಗ್ಗಲ್ಲು ಎನ್ನುವುದು ಅರಿವಾಗುತ್ತೆ. ಕಲೆ ಎಂಬ ದೇಹಕ್ಕೆ ಜೀವ ತುಂಬಿ ಜೀವಕ್ಕೆ ಬಾವ ಬೆಸೆದಾಗ ಮಾತ್ರ ಅದೊಂದು ಅಭಿನಯವಾಗುತ್ತೆ ಎಂದು ಕವಿ,ಪತ್ರಕರ್ತ ಬಸವರಾಜ ಬಿನ್ನಾಳ ಹೇಳಿದರು.
ಅವರಿಂದು ಕೊಪ್ಪಳದ ಬಹಾದ್ದೂರ ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಭಾಸ್ ಚಂದ್ರಭೋಸ್ ವೇದಿಕೆಯಲ್ಲಿ ಕರ್ನಾಟಕ ಬೀದಿ ನಾಟಕ ಅಕಾಡೆಮಿ ಬೆಂಗಳೂರು ಆರ್ಟ್ ಫೌಂಡೇಷನ್, ಅವಿರತ ಪುಸ್ತಕ ಹಾಗೂ ಕನ್ನಡನೆಟ್.ಕಾಂ ಕವಿಸಮೂಹ ಜೀವಯಾನ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸೇವಾ ಸಂಸ್ಥೆಯ ಸಹಯೋಗದಲ್ಲಿ ಸಿಜಿಕೆ ಬೀದಿ ರಂಗ ದಿನಾಚರಣೆ, ಸಿಜಿಕೆ ರಂಗಪುರಸ್ಕಾರ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಂಪತ್ತಿಗೆ ಸವಾಲ್ ನಾಟಕದ ಸಂಭಾಷಣೆ ಹೇಳುವುದರ ಮೂಲಕ ಕಾರ?ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ತಮ್ಮ ಅಭಿನಯದ ಮೂಲಕ, ನಾಟಕಗಳ ಮೂಲಕ ಕನ್ನಡ ನಾಡಿನಲ್ಲಿ ಶ್ರೇಯಸ್ಸನ್ನು ಗಳಿಸಿ ಜಾಗೃತಿ ಮೂಡಿಸಿ ರಂಗಕಲೆಯ ಬಗ್ಗೆ ಸಾಕಷ್ಟು ಆಸಕ್ತಿ ಹುಟ್ಟಿಸಿದ ಅನೇಕ ಖ್ಯಾತ ಕವಿಗಳು ಈ ಕನ್ನಡ ಮಣ್ಣಿನಲ್ಲಿ ಹುಟ್ಟಿ ಬೆಳೆದಿದ್ದಾರೆ ಅವರೆಲ್ಲರ ಪ್ರೇರಣೆಯಿಂದ ಇವತ್ತು ರಂಗಭೂಮಿ ಜೀವಂತವಾಗಿದೆ . ಅಂತಹ ಮಹನೀಯರಲ್ಲಿ ಸಿಜಿಕೆಯವರೂ ಒಬ್ಬರು. ಅಂಗವಿಕಲರಾ ಗಿದ್ದರೂ ಸಹ ಈ ನಾಡಿನಲ್ಲಿ ಶೋಷಿತ ಸಮುದಾಯಗಳ ಮೇಲೆ ನಡೆಯುವಂತಹ ದೌರ್ಜನ್ಯವನ್ನ ನಾಟಕಗಳ ಮೂಲಕ ಹೊರತಂದು ಸಮಾಜದ ವಿರುದ್ದ ಹೋರಾಟ ಮಾಡಿದವರು. ಬೀದಿ ನಾಟಕಗಳ ಮೂಲಕ ಜಾಗೃತಿಯನ್ನು ಹುಟ್ಟು ಹಾಕಿದವರೇ ಸಿಜಿಕೆ. ಅವರನ್ನು ಸ್ಮರಿಸಿಕೊಂಡು ರಂಗದಿನವನ್ನು ಕೊಪ್ಪಳ ಜಿಲ್ಲೆಯಲ್ಲಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಇದಕ್ಕಾಗಿ ಸಂಘಟಕರನ್ನು ಅಭಿನಂದನಿಸುತ್ತೇನೆ ಎಂದರು.
ಗಂಗಾವತಿಯ ರಂಗಕರ್ಮಿ,ಸಂಘಟಕ,ನಟ ಪತ್ರಕರ್ತ ಎಂ.ಪರಶುರಾಮಪ್ರಿಯರಿಗೆ ಈ ಸಾಲಿನ ಸಿಜಿಕೆ ರಂಗಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕವಿ ಚಾಂದಪಾಷಾ ಕಿಲ್ಲೆದಾರ? ಮಾತನಾಡಿ ಹತ್ತಾರು ವರ್ಷಗಳಿಂದ ರಂಗಸೇವೆಯಲ್ಲಿ ತೊಡಗಿರುವ ಇಂತಹ ನಟ ನಿರ್ದೇಶಕರನ್ನು ಗುರುತಿಸಿ ಪ್ರಶಸ್ತಿ ನಿಡಿ ಗೌರವಿಸುತ್ತಿರುವುದು ಶ್ಲಾಘನೀಯ ಕೆಲಸ ನಮ್ಮ ಜಿಲ್ಲೆಯ ಪ್ರತಿಭೆಗಳಿಗೆ ಸೂಕ್ತ ಮಾನ ಸನ್ಮಾನಗಳು ಸಿಗಬೇಕು ಎಂದು ಆಗ್ರಹಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಕೆ.ಮುದ್ಧಾಬಳ್ಳಿ ರಂಗಭೂಮಿಗೆ ಎಂ.ಪರಶುರಾಮಪ್ರಿಯರ ಕೊಡುಗೆ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತಿ ವಿದ್ಯಾಮಂದಿರದ ಅಧ್ಯಕ್ಷ ಎ.ಎಚ್.ಅತ್ತನೂರು ವಹಿಸಿದ್ದರು. ಪತ್ರಕರ್ತ ಮೌಲಾಹುಸೇನ ಬುಲ್ಡಿಯಾರ? ವೇದಿಕೆಯ ಮೇಲಿದ್ದರು ಸ್ವಾಗತ ಮತ್ತು ನಿರೂಪಣೆಯನ್ನು ಎಚ್.ವಿ.ರಾಜಾಬಕ್ಷಿ ಮಾಡಿದರು. ಪ್ರಾಸ್ತಾವಿಕವಾಗಿ ಸಿರಾಜ್ ಬಿಸರಳ್ಳಿ ಮಾತನಾಡಿದರು. ಪ್ರಾರ್ಥನೆಯನ್ನು ವಿದ್ಯಾರ್ಥಿನಿ ರಾಧಾ ಮಾಡಿದರು. ಇದೇ ಸಂದರ್ಭದಲ್ಲಿ ಎಂ.ಪರಶುರಾಮಪ್ರಿಯರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. . ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಕರು ಕಾರ?ಯಕ್ರಮದಲ್ಲಿ ಭಾಗವಹಿಸಿದ್ದರು.

Top