fbpx

ಕರ್ನಾಟಕ ವಿಧಾನಸಭಾ ಚುನಾವಣೆ – ಒಳ ಹೊರಗೆ : ಸಂವಾದ ಕಾರ್ಯಕ್ರಮ

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಕೊಪ್ಪಳ
ಕೊಪ್ಪಳ : ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಕರ್ನಾಟಕದ ಕೆಲವೆಡೆಗಳಲ್ಲಿ ‘ಕರ್ನಾಟಕ ವಿಧಾನಸಭಾ ಚುನಾವಣೆ : ಒಳ ಹೊರಗೆ’ ಎಂಬ ಸರಣಿ ಕಾರ್ಯಕ್ರಮಗಳನ್ನುನಡೆಸುತ್ತಿದೆ. ಇದರ ಅಂಗವಾಗಿ ೨ನೇ ಕಾರ್ಯಕ್ರಮವನ್ನು ಕೊಪ್ಪಳದ ಸಾಹಿತ್ಯ ಭವನದಲ್ಲಿ ಇದೇ ರವಿವಾರ ಜೂನ್ ೨೪ರಂದು ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಂಡಿದೆ. ಕಾರ?ಯಕ್ರಮದಲ್ಲಿ ಪ್ರಜಾಪ್ರಭುತ್ವ ಕುರಿತು ರಾಜಕೀಯ ವಿಶ್ಲೇಷಕರು, ಕೃಷಿ ವಿಶ್ವವಿದ್ಯಾಲಯ,ರಾಯಚೂರಿನ ವಿಶೇಷಾಧಿಕಾರಿಗಳಾದ ಪ್ರೊ : ಮುಜಾಫರ್ ಅಸ್ಸಾದಿ , ಚುನಾವಣೆ – ಮಹಿಳಾ ಅನುಭವ ಕುರಿತು ರಾಜ್ಯ ಮಹಿಳಾ ಆಯೋಗ ಸದಸ್ಯೆ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮಾಲತಿ ನಾಯಕ್,ಯಲಬುರ್ಗಾ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷೆ ಮಹಾದೇವಿ ಕಂಬಳಿ ಮಾತನಾಢಲಿದ್ದಾರೆ. ರಾಜ್ಯ ವಕೀಲರ ಪರಿಷತ್ ಸದಸ್ಯೆ ಸಂದ್ಯಾ ಮಾದಿನೂರ ಮಹಿಳಾ ಮೀಸಲಾತಿ ಕುರಿತು ಮಾತನಾಡಲಿದ್ದಾರೆ. ಕಾರ?ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಡಾ.ಎಚ್.ಎಸ್.ಅನೂಪಮಾ ಮಾಡಲಿದ್ದು ಕಾರ್ಯಕ್ರಮದ ಸಂಯೋಜನೆಯನ್ನು ವಿಜಯಲಕ್ಷ್ಮಿ ಕೊಟಗಿಯವರು ಮಾಡಲಿದ್ದಾರೆ. ಜಿಲ್ಲೆಯ ವಿವಿದೆಡೆಯಿಂದ ಮತ್ತು ಹೊರಜಿಲ್ಲೆಗಳಿಂದ ಸಮಾನ ಮನಸ್ಕರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಇಡಿಯ ಭಾರತದ, ಅಷ್ಟೇ ಅಲ್ಲ ವಿಶ್ವದ ಗಮನವನ್ನೇ ಸೆಳೆದ ಕರ್ನಾಟಕ ವಿಧಾನಸಭಾ ಚುನಾವಣೆ ಇತ್ತೀಚಿಗಷ್ಟೇ ಮುಗಿದಿದೆ. ಜನಮತ ಪ್ರಜಾತಂತ್ರದ ಜೀವಾಳ, ನಿಜ ಆದರೆ ದೊರೆತಿರುವ ಜನಮತ ನಿಜವಾಗಿಯೂ ಜನರ ಅಭಿಮತವೋ ? ಜನರು ಯಾವುದೇ ಒಂದು ಪಕ್ಷಕ್ಕೆ ಬಹುಮತ ನೀಡಲಿಲ್ಲ ಏಕೆ ? ದಿನದಿಂದ ದಿನಕ್ಕೆ ಚುನಾವಣೆ ರಾಜಕೀಯವೇಕೆ ಪ್ರಜಾಪ್ರಭುತ್ವ ಆಶಯಗಳಿಂದ ದೂರ ಸಾಗುತ್ತಿದೆ? ದಿನದಿಂದ ದಿನಕ್ಕೆ ಚುನಾವಣಾ ರಾಜಕೀಯವೇಕೆ ಮಹಿಳೆಯರನ್ನು ನಿರ್ಲಕ್ಷಿಸುತ್ತಿದೆ ? ಮಹಿಳೆಯರೇಕೆ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದಾರೆ ? ಹಣ-ಜಾತಿ- ಕುಟುಂಬ ಹಿನ್ನೆಲೆ ಇಲ್ಲದವರೇಕೆ ಸೆಣಸಿ ಗೆಲ್ಲಲು ವಿಫಲರಾಗುತ್ತಿದ್ದಾರೆ ? ಸ್ವಾತಂತ್ರಕ್ಕಾಗಿ ಜೀವ ಸವೆಸಿದವರು, ಸಂವಿಧಾನ ಕರ್ತೃಗಳು ಬಯಸಿದ ದಿಸೆಯಲ್ಲಿ ನಮ್ಮ ಸಮಾಜ, ಸರಕಾರಗಳು ಸಾಗುತ್ತಿವೆಯೆ? ಒಬ್ಬ ಪ್ರಜೆಯಾಗಿ, ಒಬ್ಬ ಮಹಿಳೆಯಾಗಿ, ಒಬ್ಬ ಅಧಿಕಾರಿಯಾಗಿ, ಒಬ್ಬ ರಾಜಕಾರಣಿಯಾಗಿ, ಹೋರಾಟಗಾರರಾಗಿ ಚುನಾವಣೆಯ ನನ್ನ ಅನುಭವಗಳೇನು ? ಚುನಾವಣೆ, ಫಲಿತಾಂಶ ಕುರಿತ ನನ್ನ ಅನಿಸಿಕೆ , ಆಶಯಗಳೇನು ? ಎನ್ನುವ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಭಾಗವಹಿಸಲು ಸಂಘಟಕರಾದ ವಾಣಿ ಪೆರಿಯೋಡಿ ಕೋರಿದ್ದಾರೆ.

ಸಂಪರ್ಕ : ವಾಣಿ ಪೆರಿಯೋಡಿ : ೯೪೪೮೪೮೧೩೪೦

Please follow and like us:
error
error: Content is protected !!