ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯ ಸಮ್ಮೇಳನ ನಡೆಸಲು ಸಿದ್ಧತೆ

ಡಿ.೮, ಮತ್ತು ೯ ರಂದು ಕೊಪ್ಪಳದಲ್ಲಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯ ಸಮ್ಮೇಳನ ನಡೆಸಲು ಸಿದ್ಧತೆ

ಕೊಪ್ಪಳ : ಈ ವರ್ಷದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನವನ್ನು ಕೊಪ್ಪಳದಲ್ಲಿ ಜರುಗಿಸಲು ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಗಿದ್ದು, ಕೊಪ್ಪಳ-ಬಳ್ಳಾರಿ ಜಿಲ್ಲೆಗಳ ಸಂಘದ ಸಹಯೋಗದಲ್ಲಿ ನಡೆಸಲು ಸಿದ್ಧತೆಯನ್ನು ಕೈಗೊಳ್ಳಲಾಗಿದೆ.

ರಾಜ್ಯಾಧ್ಯಕ್ಷ ಎನ್.ರಾಜು ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಂಗಳೂರಿನ ಸಂಘದ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಬರುವ ಡಿಸಂಬರ್ ೮ ಮತ್ತು ೯ ರಂದು ಎರಡು ದಿನಗಳ ಕಾಲ ಕೊಪ್ಪಳದಲ್ಲಿ ನಡೆಸಲು ನಿರ್ಣಯಿಸಲಾಗಿದೆ, ಯಶಸ್ವಿಯಾಗಿ ಸಮ್ಮೇಳನವನ್ನು ನಡೆಸಿಕೊಡಲು ಈ ಭಾಗದ ಸಂಘದ ಪದಾಧಿಕಾರಿಗಳ ಸಭೆ ಕರೆದು ಸ್ಥಳ ನಿಗದಿ ಪಡಿಸಲಾಗುವುದು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಸಾಧಿಕಲಿ ತಿಳಿಸಿದ್ದಾರೆ,

ಮೊದಲುನಿಂದಲ್ಲೂ ಸಹ ನಮ್ಮ ಜಿಲ್ಲೆಯಲ್ಲಿ ರಾಜ್ಯ ಸಮ್ಮೇಳನಕ್ಕೆ ಬೇಡಿಕೆಯನ್ನು ಇಡಲಾಗಿತ್ತು, ಅದಕ್ಕೆ ರಾಜ್ಯಾಧ್ಯಕ್ಷ ರಾಜು ಎನ್ ಅವರು ಒಪ್ಪಿಕೊಂಡಿದ್ದಾರೆ, ಇದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನಡೆಯುವದರಿಂದ ಇದರಿಂದ ಈ ಪ್ರದೇಶದ ಪತ್ರಕರ್ತರಿಗೆ ಹೆಚ್ಚು ಜಾಗೃತಿಗೆ ಹಾಗೂ ಪತ್ರಿಕೋದ್ಯಮದ ಬೆಳವಣಿಗೆಗೆ ಸಹಯಕವಾಗಲಿದೆ, ಜಿಲ್ಲೆಯ ಹಿರಿಯ ಪತ್ರಕರ್ತರಾದ ಹೆಚ್.ಎಸ್.ಹರೀಶ್ ಅವರನ್ನು ರಾಜ್ಯ ಸಂಘಕ್ಕೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಲಾಯಿತು, ಉಳಿದಂತೆ ಸಮ್ಮೇಳನದ ಸಿದ್ಧತೆಗೆ ಪೂರ್ವಭಾವಿ ಸಭೆಯನ್ನು ಜರುಗಿಸಲಾಗುತ್ತದೆ ಎಂದಿದ್ದಾರೆ.

ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಜಿಲ್ಲಾಧ್ಯಕ್ಷ ಎಂ. ಸಾಧಿಕಲಿ, ಪದಾಧಿಕಾರಿಗಳಾದ ಹೆಚ್.ಎಸ್.ಹರೀಶ್, ಜಿ.ಎಸ್.ಗೋನಾಳ, ಎಂ.ಎನ್.ದೊಡ್ಡಮನಿ, ಪ್ರಶಾಂತ ಪಾಟೀಲ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Please follow and like us:
error