ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೆತ್ರದ ಮತದಾರರ ಪಟ್ಟಿ ಸಿದ್ಧತೆ : ವೇಳಾಪಟ್ಟಿ ಪ್ರಕಟ

ಕೊಪ್ಪಳ  : ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೆತ್ರದ ಮತದಾರರ ಪಟ್ಟಿ ಸಿದ್ಧತೆ ಕುರಿತು ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗವು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೆÃತ್ರದ ಮತದಾರರ ಪಟ್ಟಿ ಸಿದ್ಧಪಡಿಸಲು ವೇಳಾಪಟ್ಟಿಯನ್ನು ಪ್ರಕಟಿಸಿದೆ.  ನಮೂನೆ-19ರಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಲು ನವೆಂಬರ್. 06 ಕೊನೆಯ ದಿನವಾಗಿದ್ದು, ನ. 23 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.  ಹಕ್ಕು ಮತ್ತು ಆಕ್ಷೆÃಪಣೆಗಳನ್ನು ಸಲ್ಲಿಸಲು ನ. 23 ರಿಂದ ಡಿಸೆಂಬರ್ 09 ರವರೆಗೆ ಕಾಲಾವಕಾಶ ನೀಡಲಾಗಿದ್ದು, ಡಿಸೆಂಬರ್. 30 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.
ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವ ಶಿಕ್ಷಕರು ತಹಶೀಲ್ದಾರ ಕಚೇರಿಗಳಿಂದ ನಮೂನೆ-19ನ್ನು ಪಡೆದು ಅದರೊಂದಿಗೆ ಅನುಬಂಧ-2 ರಲ್ಲಿ ಸೇವಾ ವಿವರಗಳನ್ನು ಕಚೇರಿ ಅಥವಾ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಿಸಿ ಅರ್ಜಿ ಸಲ್ಲಿಸಬೇಕು.  ನೋಂದಾಯಿಸಿಕೊಳ್ಳುವ ಶಿಕ್ಷಕರು ಆ ಕ್ಷೆÃತ್ರದ ಸಾಮಾನ್ಯ ನಿವಾಸಿಯಾಗಿರಬೇಕು.  ಅರ್ಹತಾ ದಿನಾಂಕ 01-11-2019 ರಿಂದ 06 ವರ್ಷ ಮುಂಚಿತ ಅವಧಿಯಲ್ಲಿ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1950ರ ಕಲಂ 27(3) ರಡಿಯಲ್ಲಿ ರಾಜ್ಯ ಸರ್ಕಾರವು ಭಾರತ ಚುನಾವಣಾ ಆಯೋಗದ ಸಹಮತಿಯೊಂದಿಗೆ ದೃಢೀಕರಿಸಲಾದ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿರಬೇಕು.  ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಇವರ ಕಚೇರಿಯಿಂದ ಸ್ವಿÃಕೃತವಾದ ನೋಂದಾಯಿತ ಶಿಕ್ಷಣ ಸಂಸ್ಥೆಗಳ ಪಟ್ಟಿಯು ತಹಶೀಲ್ದಾರ ಕಚೇರಿಗಳಲ್ಲಿ ಲಭ್ಯವಿದ್ದು, ಆಸಕ್ತರು ಪರಿಶೀಲಿಸಿಕೊಳ್ಳಬಹುದು

Please follow and like us:
error