ಕರ್ತವ್ಯಲೋಪ : ನಗರ ಠಾಣೆಯ ಪಿಐ ಅಮಾನತ್ತು

. ಕೊಪ್ಪಳ : ಕರ್ತವ್ಯಲೋಪದ ಹಿನ್ನೆಲೆಯಲ್ಲಿ ನಗರ ಠಾಣೆಯ ಪಿಐ ಮೌನೇಶ್ವರ ಪಾಟೀಲ್ ರನ್ನು ಅಮಾನತ್ತು ಮಾಡಿ ಎಸ್ ಪಿ ಜಿ.ಸಂಗೀತಾರವರು ಆದೇಶ ಹೊರಡಿಸಿದ್ದಾರೆ

ಮೌನೇಶ್ವರ ಮಾಲಿಪಾಟೀಲ್ , ಪಿ.ಐ. , ಕೊಪ್ಪಳ ನಗರ ಪೊಲೀಸ್ ಠಾಣೆಗೆ ಸಂಬಂದಿಸಿದ ಸಿ.ಸಿ.ನಂ. 273/2016 , 274/2016 , 275/2016 , 276/2016 , 07/2017 04/2017 , 06/2017 , 66/2017 , 68/2017 , ಮತ್ತು 212/2017 ರನ್ವಯ ವಿ 3 ಕೇರ್ ಲೈಫ್ ಕೇರ್ ಕಂಪನಿಯ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ 3 ನೇ ಆರೋಪಿತನಾದ ಮಧುಸೂಧನ ತಂದೆ ಪ್ರಭಂಜನರಾವ್ ವಿರಾಪುರ ಸಾ : ಬಳ್ಳಾರಿ ಇವನನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರ ಪಡಿಸುವಲ್ಲಿ ಕರ್ತವ್ಯ ವಿಮುಖತೆ ಪ್ರದರ್ಶಿಸಿದ್ದು , ಅಲ್ಲದೇ ಪ್ರಕರಣದ ಆರೋಪಿಯು ನೀರಿಕ್ಷಣಾ ಜಾಮೀನು ಪಡೆದುಕೊಳ್ಳುವ ಬಗ್ಗೆ ಮತ್ತು ನಿರೀಕ್ಷಣಾ ಜಾಮೀನು ಪಡೆದುಕೊಂಡ ಬಗೆಗಿನ ಮಾಹಿತಿಯು ಸದರಿ ಪಿ.ಐ. ರವರಿಗೆ ತಿಳಿದಿದ್ದರೂ ಸಹಿತ ಸದರಿ ವಿಷಯವನ್ನು ಮೇಲಾಧಿಕಾರಿಗೆ ಮಾಹಿತಿಯನ್ನು ನೀಡದೆ . ಕರ್ತವ್ಯ ಲೋಪವೆಸಗಿದ್ದು ಇರುತ್ತದೆ . ಅಲ್ಲದೇ ಮಾನ್ಯ ನ್ಯಾಯಾಲಯದಿಂದ ಹಲವಾರು ಬಾರಿ ಜಾರಿಯಾದ ವಾರೆಂಟ್‌ಗಳನ್ನು ಆರೋಪಿತನಿಗೆ ಜಾರಿ ಮಾಡಿ ಆರೋಪಿತನನ್ನು ದಸ್ತಗಿರಿ ಮಾಡದೇ ಇದ್ದುದ್ದರಿಂದ ಪೊಲೀಸ್ ಮಹಾನಿರೀಕ್ಷಕರು ಬಳ್ಳಾರಿ ವಲಯ . ಬಳ್ಳಾರಿ ರವರು ಮೌನೇಶ್ವರ ಮಾಲಿಪಾಟೀಲ್ ಪಿ.ಐ , ಕೊಪ್ಪಳ ನಗರ ಠಾಣೆ ರವರಿಗೆ ಈ ಪ್ರಕರಣದಲ್ಲಿನ ಆರೋಪಿತನನ್ನು ಕೂಡಲೇ ದಸ್ತಗಿರಿ ಮಾಡುವಂತೆ ಸೂಚಿಸಿದ್ದರು ಸಹ ಸದರಿಯವರು ಈ ಕುರಿತು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಕಾರಣ ಸ್ವತಃ ನಾನೇ ಈ ಕುರಿತು ಮಾಹಿತಿ ಕಲೆ ಹಾಕಿ ವಿಶೇಷ ತಂಡ ರಚಿಸಿ ಸೂಕ್ತ ಮಾರ್ಗದರ್ಶನನೀಡಿ ದಿನಾಂಕ 22-06-2020 ರಂದು ಸಂಜೆ ಆರೋಪಿತನನ್ನು ದಸ್ತಗಿರಿ ಮಾಡಿದ್ದು ಇರುತ್ತದೆ . ಸದರಿ ಪ್ರಕರಣವು ಅತ್ಯಂತ ಗಂಭೀರ ಸ್ವರೂಪದಾಗಿದ್ದರೂ ಸಹಿತ ಪ್ರಕರಣದ ಆರೋಪಿತನನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಮೌನೇಶ್ವರ ಪಾಟೀಲ್ ಪಿ.ಐ. ಕೊಪ್ಪಳ ನಗರ ಠಾಣೆ ರವರು ಕರ್ತವ್ಯ ನಿರ್ಲಕ್ಷತನ ತೋರಿದ್ದು , ಅಲ್ಲದೇ ಮೇಲಾಧಿಕಾರಿಗಳ ಹಾಗೂ ನ್ಯಾಯಾಲಯದ ಆದೇಶಗಳನ್ನು ಪಾಲನೆ ಮಾಡದೆ ಇದ್ದ ಕಾರಣ ಸದರಿಯವರನ್ನು ಅಮಾನತ್ತು ಮಾಡಿ ಅದೇಶ ಹೊರಡಿಸಿದ್ದು ಇರುತ್ತದೆ .

ಜಿಲ್ಲಾ ಪೊಲೀಸ್ ಅಧೀಕ್ಷಕರು , ಕೊಪ್ಪಳ .

ದಿನಾಂಕ : 23-06-2020

Please follow and like us:
error