ಕರೋನಾ ಸೊಂಕಿತ  ಇಬ್ಬರು ಗುಣಮುಖರಾಗಿ  ಕೊಪ್ಪಳ ಆಸ್ಪತ್ರೆಯಿಂದ ಬಿಡುಗಡೆ

ಕೊಪ್ಪಳ : ಕರೋನ ಸೋಂಕಿತ ಇಬ್ಬರು ಕೊಪ್ಪಳ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಕೊಪ್ಪಳ ಜಿಲ್ಲೆಯಲ್ಲಿ ಕರೋನ ಆ್ಯಾಕ್ಟಿವ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಕೋವಿಡ್-19 ಸೋಂಕಿನಿಂದ ಚೇತರಿಕೆಗೊಂಡ ಇಬ್ಬರು ಇಂದು ಬಿಡುಗಡೆಯಾದರು..ಚಪ್ಪಾಳೆ ತಟ್ಟಿ‌ಹಾರೈಸುವ ಮೂಲಕ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದರು…ಕೊಪ್ಪಳ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ..20 ವರ್ಷದ ಯುವತಿ ಪಿ 1174, 25 ವರ್ಷದ ಯುವಕ ಪಿ1175 ಬಿಡುಗಡೆ ಪಿ- 1174 ಮಹಾರಾಷ್ಟ್ರದಿಂದ ಬಂದಿದ್ದರು, ಮೇ 18ರಂದು ಕರೊನಾ ಸೋಂಕು ದೃಢಪಟ್ಟಿತ್ತು. ಪಿ- 1175 ತಮಿಳುನಾಡಿನಿಂದ ಜಿಲ್ಲೆಗೆ ಆಗಮಿಸಿದ್ದರು.. ಈತನಿಗೂ ಮೇ 18ರಂದು ಸೋಂಕು ದೃಢಪಟ್ಟಿತ್ತು.14 ದಿನ ಚಿಕಿತ್ಸೆ ನೀಡಿದ ನಂತರ ಚೇತರಿಕೆ ಆಗಿರೋ ಸೋಂಕಿತರು

 

ಕೋವಿಡ್-19 ಸೋಂಕಿನಿAದ ಗುಣಮುಖರಾಗಿರುವ ಕೊಪ್ಪಳ ಜಿಲ್ಲೆಯ ಇಬ್ಬರನ್ನು ಇಂದು (ಮೇ.29) ಜಿಲ್ಲಾ ಆಸ್ಪತ್ರೆಯಿಂದ ಆರೋಗ್ಯ ಇಲಾಖೆಯ ತಂಡದಿAದ ಚಪ್ಪಾಳೆ ತಟ್ಟುವುದರ ಮೂಲಕ ಬಿಡುಗಡೆ ಮಾಡಲಾಯಿತು.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಶಸ್ತç ಚಿಕಿತ್ಸಕಾ ಎಸ್.ಬಿ ದಾನ್‌ರೆಡ್ಡಿ ಅವರು ಮಾತನಾಡಿ, ಪಿ-1174 ಎಂಬ 20 ವರ್ಷದ ಮಹಿಳೆ ಹೊರ ರಾಜ್ಯವಾದ ಮಹಾರಾಷ್ಟçದಿಂದ ಹಾಗೂ ಪಿ-1175 25 ವರ್ಷದ ಪುರುಷ ಚೆನ್ನೆöÊನಿಂದ ಜಿಲ್ಲೆಗೆ ಆಗಮಿಸಿದ ಕಾರಣ ಇವರಿಬ್ಬರನ್ನು ಕ್ವಾರಂಟೈನ್‌ಗೆ ಒಳಪಡಿಸಿ ಮೇ.15 ರಂದು ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್-19 ಸೊಂಕು ದೃಡಪಟ್ಟಿತ್ತು. ಇವರಿಗೆ 14 ದಿನಗಳ ಕಾಲ ಜಿಲ್ಲಾ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಿ, ಮೇ.27 ರಂದು ಮತ್ತೊಮ್ಮೆ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ವರದಿ ನೆಗೆಟಿವ್ ಬಂದಿದ್ದು ಅವರನ್ನು ಬಿಡುಗಡೆ ಮಾಡಲಾಯಿತು ಎಂದರು.
ಪಿ-1174 ಮತ್ತು ಪಿ-1175 ಕೋವಿಡ್-19 ಸೋಂಕಿನಿAದ ಗುಣಮುಖರಾದ ವ್ಯಕ್ತಿಗಳು ಇಬ್ಬರು ತಮ್ಮ ಮನೆಗಳಿಗೆ ತೆರಳಿದ ನಂತರ 14 ದಿನ ಹೋಂ ಕ್ವಾರಂಟೈನ್‌ನಲ್ಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈ ಕಾಲುಗಳನ್ನು ಸ್ವಚ್ಚಗೊಳಿಸಿಕೊಳ್ಳಬೇಕು ಎಂದು ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೆ ಈ ಇಬ್ಬರು ವ್ಯಕ್ತಿಗಳಿಗೆ ಆಯುಷ್ ಇಲಾಖೆಯಿಂದ ಆರ್ಯುವೇದಿಕ್ ಔಷಧಿಗಳನ್ನು ನೀಡಲಾಗಿದೆ. ಗುಣಮುಖರಾದವರಿಂದ ಸಾರ್ವಜನಿಕರು ಯಾವುದೇ ರೀತಿಯ ಕೀಳರಿಮೆಯಿಂದ ಕಾಣುವುದು ಮಾಡಬಾರದು ಎಂದು ಹೇಳಿದರು.
ಈಗಾಗಲೇ 20 ಸ್ಯಾರಿ (ತೀವ್ರ ಉಸಿರಾಟದ ಸಮಸ್ಯೆ) ಪ್ರಕರಣಗಳು ಬಂದಿದ್ದು, ಅಂತರ ವ್ಯಕ್ತಿಗಳ ಗಂಟಲು ದ್ರವಗಳನ್ನು ಮೂರು ಬಾರಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆ ಮೂರು ಪರೀಕ್ಷೆಗಳಲ್ಲಿನ ವರದಿ ನೆಗೆಟಿವ್ ಅಂತ ಸಾಬೀತು ಆದರೆ ಮಾತ್ರ ಅಂತವರನ್ನು ಮನೆಗೆ ಕಳುಹಿಸಲಾಗುತ್ತದೆ. ಈ ಮೇಲಿನ 20 ಪ್ರಕರಣಗಳಲ್ಲಿ 4 ವ್ಯಕ್ತಿಗಳು ಗುಣಮುಖರಾಗಿದ್ದು, ಇನ್ನೂ 16 ವ್ಯಕ್ತಿಗಳ ವರದಿಯು ಬಾಕಿ ಉಳಿದಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ನೆಗಡಿ, ಕೆಮ್ಮು, ಜ್ವರಗಳಿಗೆ ಜಿಲ್ಲೆಯ ಎರಡು ಸ್ಥಳಗಳಲ್ಲಿ ಫೀವರ್ ಕ್ಲೀನಿಕ್‌ಗಳನ್ನು ತೆರೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಿಮ್ಸ್ ನಿರ್ದೇಶಕ ಡಾ.ವಿಜಯನಾಥ್ ಇಟಗಿ, ಜನರಲ್ ಮೆಡಿಸನ್ ಎಚ್.ಒ.ಡಿ ಡಾ. ಉಮೇಶ್ ರಾಜು ಹಾಗೂ ಜಿಲ್ಲಾ ಆಸ್ಪತ್ರೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Please follow and like us:
error