ಕರೋನಾದಿಂದ ಸಾವು : ಮಹಿಳೆಯ ಶವಸಂಸ್ಕಾರಕ್ಕೆ ಗ್ರಾಮಸ್ಥರ ವಿರೋಧ

ಕೊಪ್ಪಳ: ಕೋವಿಡ್-19ನಿಂದಾಗಿ ಬುಧವಾರ ರಾತ್ರಿ ಮರಣ ಹೊಂದಿದ ಮರಳಿ ಗ್ರಾಮದ ಮಹಿಳೆಯ (P-7105) ಶವಸಂಸ್ಕಾರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಮೃತ ಮಹಿಳೆಯ ಪುತ್ರ ಜಿಂದಾಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಮಗನಿಂದ ತಾಯಿಗೆ ಕೊರೊನಾ ಸೋಂಕು ತಗುಲಿತ್ತು ಎನ್ನಲಾಗಿದೆ. ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಮೃತದೇಹವನ್ನು ಆ್ಯಂಬುಲೆನ್ಸ್‌‌ನಲ್ಲಿ ಗ್ರಾಮಕ್ಕೆ ತರಲಾಗಿದ್ದು, ಮರಳಿ ಗ್ರಾಮದ ಹೊರವಲಯದಲ್ಲಿನ ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಮುಂದಾಗುತ್ತಿದ್ದಂತೆ ಗ್ರಾಮಸ್ಥರು ಜೆಸಿಬಿ ಅಡ್ಡಗಟ್ಟಿ ಎದುರು ಕುಳಿತುಕೊಂಡು ಶವಸಂಸ್ಕಾರ ಮಾಡದಂತೆ ಪಟ್ಟು ಹಿಡಿದಿದ್ದಾರೆ.

ಬೇರೆ ಕಾರಣಗಳಿಂದ ಮೃತಪಟ್ಟಿದ್ದರೆ ವಿರೋಧಿಸುತ್ತಿರಲಿಲ್ಲ. ಕೊರೊನಾ ಕಾರಣದಿಂದ ಮಹಿಳೆ ಮೃತಪಟ್ಟಿದ್ದು, ವೈರಸ್ ಗ್ರಾಮದಲ್ಲಿ‌ ಹರಡಿದರೆ ಗ್ರಾಮವೇ ಸ್ಮಶಾನವಾಗಬೇಕಾದೀತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗಂಗಾವತಿ ತಹಸೀಲ್ದಾರ ಚಂದ್ರಕಾಂತ ಮತ್ತು ಡಿವೈಎಸ್‌ಪಿ ಚಂದ್ರಶೇಖರ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಪ್ರಯೋಜನಕ್ಕೆ ಬರಲಿಲ್ಲ.

ಗ್ರಾಮಕ್ಕೆ ಶಾಸಕ ಬಸವರಾಜ್ ದಢೇಸೂಗೂರು, ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಬರುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

Please follow and like us:
error