You are here
Home > Koppal News > ಕರಾಟೆ ಶಿಕ್ಷಕರ ಜಿಲ್ಲಾ ಸಂಘಕ್ಕೆ  ಜಿಲ್ಲಾಧ್ಯಕ್ಷರಾಗಿ ಮೌನೇಶ ವಡ್ಡಟ್ಟಿ ಆಯ್ಕೆ 

ಕರಾಟೆ ಶಿಕ್ಷಕರ ಜಿಲ್ಲಾ ಸಂಘಕ್ಕೆ  ಜಿಲ್ಲಾಧ್ಯಕ್ಷರಾಗಿ ಮೌನೇಶ ವಡ್ಡಟ್ಟಿ ಆಯ್ಕೆ 

ಕೊಪ್ಪಳ :  ಸ್ಥಳಿಯ ಮಾಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಇಂದು ಕೊಪ್ಪಳ ಜಿಲ್ಲಾ  ಕರಾಟೆ ಶಿಕ್ಷಕರ ಸಂಘದ ಸಭೆ ಏರ್ಪಡಿಸಿದ್ದು ಸಭೆಯಲ್ಲಿ ಕರಾಟೆ ಶಿಕ್ಷಕರ ಸಂಘದ  ಜಿಲ್ಲಾಧ್ಯಕ್ಷರನ್ನಾಗಿ ಅವಿರೋಧವಾಗಿ ಸರ್ವಾನುಮತದಿಂದ ನಗರದ ಅಂತರಾಷ್ಟ್ರೀಯ ಕರಾಟೆ ಪಟು ಹಾಗೂ ಭೂಮಿ ಕರಾಟೆ ಫೌಂಡೆಶನ ಮೌನೇಶ ವಡ್ಡಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಅದೇ  ರೀತಿಯಾಗಿ ಗೌರವ ಜಿಲ್ಲಾಧ್ಯಕ್ಷರನ್ನಾಗಿ ಅಬ್ದುಲ್ ರಜಾಕ್ ಟೈಲರ್,  ಕೊಪ್ಪಳ ಜಿಲ್ಲೆಯ ಎಲ್ಲಾ ಕರಾಟೆ ಶಿಕ್ಷಕರಾದ ಹಿರಿಯ ಕರಾಟೆ ತರಬೇತಿದಾರರಾದ , ಶ್ರೀನಿವಾಸ ಪಂಡಿತ, ಅಶೋಕ ನರಗುಂದ, ರಾಘವೇಂದ್ರ ಅರಕೇರಿ, ಶ್ರೀಕಾಂತ ಕಲಾಲ, ದೇವಪ್ಪ ಕಲ್ಲಣ್ಣನವರ, ಸೈಯದಪಾಷ ಎಚ್, ಕೃಷ್ಣಾ ಜಾಲಿಹಾಳ, ಸೋಮಲಿಂಗ ಡಿ, ವಿಠಲಕುಮಾರ ಎಚ್, ಪ್ರಭು ಘಾಳಿ, ಮಾಹಾಂತೇಶ ಆರ್,ಬಿ, ವಿಜಯಕುಮಾರ ಬಿ,ಎಚ್, ವಂಶಿಕೃಷ್ಣ, ರಾಜು ಬಾಕಳೆ, ಸಂತೋಷ ಆರ್, ಷಣ್ಮುಖಪ್ಪ , ರಾಜಹುಸೇನ, ಚಿರಂಜಿವಿ, ಈ ಎಲ್ಲಾ ಕರಾಟೆ ಶಿಕ್ಷಕರು ಜಿಲ್ಲಾಧ್ಯಕ್ಷರಾಗಿದ್ದಕ್ಕೆ ಅಬಿನಂದನೆ ಸಲ್ಲಿಸಿದರು.

Top