ಕರಾಟೆಯಲ್ಲಿ ಜಯಬೇರಿ


ಕೊಪ್ಪಳ : ಅಗಷ್ಟ ೧೧ ಮತ್ತು ೧೨ ರಂದು ಬೆಂಗಳೂರಿನ ಕೋರಮಂಗಲದ ಇಂಡೋರ್ ಸ್ಟೇಡಿಯಂ ನಲ್ಲಿ ನಡೆದ ಆಲ್ ಇಂಡಿಯಾ ಹಕುಕೈ ಓಪನ್ ಕರಾಟೆ ಚಾಂಪಿಯನ್ ಶಿಫ್ ೨೦೧೮ ರ ಕರಾಟೆ ಸ್ಪರ್ಧೇಯಲ್ಲಿ ಕೊಪ್ಪಳದ ಬಹದ್ದೂರ ಬಂಡಿಯ ಎಸ್.ಸಿ ಆರ್ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳಾದ ಶಾಹೀನಾ ಲಾಠಿ, ಮಂಜುನಾಥ ಕುರಿ, ೧೨ ವರ್ಷದ ಕಟಾ ವಿಭಾಗದಲ್ಲಿ ತೃತಿಯ ಸ್ಥಾನ ಪಡೆದಿದ್ದಾರೆ. ಹಾಗೂ ಸೈಯದ್ ಹುಸೇನ್ ಲಾಠಿ, ಚಂದ್ರಹಾಸ್ ಕೊಪ್ಪಳ ೧೪ ವರ್ಷದ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಸುಹಾನ ಲಾಠಿ, ೭ ವರ್ಷದ ಕಟಾ ಹಾಗೂ ಕುಮಟೇ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾರೆ. ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ೬೫ ಕೆ.ಜಿ ವಿಭಾಗದಲ್ಲಿ ಚಾಂದ್ ಪಾಷಾ ಅವರು ದ್ವೀತಿಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಈ ಎಲ್ಲಾ ಕರಾಟೆ ಪಟುಗಳಿಗೆ ಸಂಸ್ಥೆಯ ಮುಖ್ಯಸ್ಥರಾದ ಸೈಯದ್ ಪಾಷಾ ಎಂ ಹೂಗಾರ, ಕ್ರೀಡಾಭಿಮಾನಿಗಳು ಹಾಗೂ ಗ್ರಾಮದ ಮುಖ್ಯಸ್ಥರು ಅಭಿನಂದಿಸಿರುತ್ತಾರೆ