ಆಪರೇಷನ್ ಕಮಲಕ್ಕೆ “ಕೈ”ಯಿಂದ ರಿಸರ್ವ್ ಆಪರೇಷನ್

ತಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕೈ ಮುಂದೆ ಮುದುಡಿದ ಕಮಲ
ಕೊಪ್ಪಳ : ಭಾರೀ ಕುತೂಹಲ ಕೆರಳಿಸಿದ್ದ 3 ನೇ ಅವಧಿಯ ಗಂಗಾವತಿ ತಾಲೂಕ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಗಂಗಾವತಿಯ ಮಂಥನ ಸಭಾಂಗಣದಲ್ಲಿ ಗುರುವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ನ ಮಹಮ್ಮದ್ ರಫಿ 7 ಮತಗಳು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದ್ರು.ಇನ್ನೂ ಡಣಾಪುರ ಕ್ಷೇತ್ರದ ಕಾಂಗ್ರೆಸ್ನ ತಾಲೂಕ ಪಂಚಾಯತ್ ಸದಸ್ಯರಾಗಿದ್ದ ಫಕೀರಪ್ಪ ಚುನಾವಣೆಗೆ ಮುನ್ನಾ ಬಿಜೆಪಿ ಸೇರ್ಪಡೆಯಾಗಿ ತಮ್ಮದೇ ಪಕ್ಷದ ಅಭ್ಯರ್ಥಿ ವಿರುದ್ದ ಸ್ಪರ್ಧೆ ಮಾಡಿ ಮಹಮ್ಮದ್ ರಫಿ ವಿರುದ್ದ ಕಣಕ್ಕಿ ಇಳಿದು 6 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡ್ರು.. ಇನ್ನೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ನ ಗೀತಾ ಶರಣೆಗೌಡ ಪೊಲೀಸ್ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಹಾಗೂ ಕೊಪ್ಪಳ ಸಹಾಯಕ ಆಯುಕ್ತರಾದ ನಾರಯಣರಡ್ಡಿ ಕನಕರಡ್ಡಿಯವರು ಘೋಷಣೆ ಮಾಡಿದ್ರು..
ಸುಲಭದ ಜಯಕ್ಕೆ ಹೆಣಗಾಡಿ ಕಾಂಗ್ರೆಸ್
ಗಂಗಾವತಿ ತಾಲೂಕನಲ್ಲಿ ಒಟ್ಟು 13 ಜನ ಸದಸ್ಯರಿದ್ದು, ಇದ್ರಲ್ಲಿ 7 ಜನ ಕಾಂಗ್ರೆಸ್ ಸದಸ್ಯರು, 4 ಜನ ಬಿಜೆಪಿ ಸದಸ್ಯರು, 2 ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷಸ್ಥಾನಕ್ಕೆ ಸಾಮಾನ್ಯವರ್ಗ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡಲಾಗಿತ್ತು.. ಗಂಗಾವತಿ ತಾಲೂಕ ಪಂಚಾಯತ್ನಲ್ಲಿ ಏಕೈಕ ಪರಿಶಿಷ್ಟ ಪಂಗಡ ಸದಸ್ಯರಾಗಿದ್ದ ಗೀತಾ ಶರಣೆಗೌಡ ಉಪಾಧ್ಯಕ್ಷರಾಗಿ ಆಯ್ಕೆಯಾದ್ರು. ಆದ್ರೆ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ದೊಡ್ಡ ಹೈಡ್ರಾಮವೇ ನಡೆದುಹೋಯ್ತು. ಬಿಜೆಪಿಗೆ ಅವಕಾಶ ಇಲ್ಲದಿದ್ರೂ ಆಪರೇಷನ್ ಕಮಲ ಮಾಡುವ ಮೂಲಕ ಗದ್ದುಗೆ ಸಮೀಪ ಬಂದು ಮುಗ್ಗರಿಸಿತು. ಡಣಾಪೂರ ಗ್ರಾಮ ಪಂಚಾಯತ್ನ ಕಾಂಗ್ರೆಸ್ ಸದಸ್ಯರಾದ ಫಕೀರಪ್ಪ ಅವರ ಜೊತೆ ಇಬ್ಬರು ಕಾಂಗ್ರೆಸ್ ಸದಸ್ಯರು ಬಿಜೆಪಿ ಜೈ ಅನ್ನೋ ಮೂಲಕ ಕಾಂಗ್ರೆಸ್ಗೆ ನಡುಕ ಹುಟ್ಟಿಸಿದ್ರು. ಒಟ್ಟು 4 ಜನ ಬಿಜೆಪಿ ಸದಸ್ಯರ ಜೊತೆ ಮೂರು ಜನ ಕಾಂಗ್ರೆಸ್ ಸದಸ್ಯರು ಗುರಿತಿಸಿಕೊಂಡ ಹಿನ್ನಲೆಯಲ್ಲಿ ಬಿಜೆಪಿಯೇ ಗೆದ್ದು ಬೀಡ್ತು ಅಂತಾ ಲೆಕ್ಕಚಾರ ಹಾಕಿದ್ರು.. ಕೊನೆಗಳಿಯಲ್ಲಿ ಕಾಂಗ್ರೆಸ್ ಮಾಡಿದ ರಿವರ್ಸ್ ಆಪರೇಷನ್ ಕಮಲವನ್ನೇ ಮುದುಡುವಂತೆ ಮಾಡ್ತು.. ಹೊಸಕೇರಾ ತಾಲೂಕ ಪಂಚಾಯತ್ ಕ್ಷೇತ್ರದ ಬಿಜೆಪಿ ಸದಸ್ಯರಾದ ಆಶಾಬೀ ಕಾಂಗ್ರೆಸ್ ಗೆ ಬೆಂಬಲಿಸುವ ಮೂಲಕ ತಮ್ಮ ಪಕ್ಷಕ್ಕೆ ಶಾಕ್ ನೀಡಿದರು.
7 ಜನರ ಬಲಾಬಲ ಹೊಂದಿದ್ದ ಕಾಂಗ್ರೆಸ್ ನೂತನ ಉಪಾಧ್ಯಕ್ಷೆ ಗೀತಾ ಶರಣೆಗೌಡ ಸಹಿತ ಮೂರು ಜನ ಸದಸ್ಯರನ್ನು ಕಳೆದುಕೊಂಡು 4 ಸಂಖ್ಯೆಗೆ ಕುಸಿಯೋ ಮೂಲಕ ಸೋಲುವ ಭೀತಿಯಲ್ಲಿ ಇತ್ತು. ಆದ್ರೆ ಇಬ್ಬರು ಪಕ್ಷೇತರ ಸದಸ್ಯರ ಬೆಂಬಲ ಹಾಗೂ ಬಿಜೆಪಿಯ ಏಕೈಕ ಸದಸ್ಯೆಯ ಆಪರೇಷನ್ ಮಾಡುವ ಮೂಲಕ ಬಹುಮತ ಸಾಬೀತು ಮಾಡ್ತು..ಇದ್ರಿಂದ ಕಾಂಗ್ರೆಸ್ ಹೆಣಗಾಟ ನಡೆಸಿ ಗೆಲುವು ಸಾಧಿಸ್ತು..