ಕಬ್ಬಿಗೆ ಬೆಂಬಲ ಬೆಲೆ ನೀಡಿ ರೈತರ ಕ್ಷಮೆಯಾಚಿಸಿ : ವಿರುಪಾಕ್ಷಪ್ಪ ಸಿಂಗನಾಳ

ರೈತರ ಕಾಳಜಿವಹಿಿಸದ ನಕಲಿ ಮಣ್ಣಿನ ಮಕ್ಕಳು|

ಕೊಪ್ಪಳ, ನ.೨೧: ಮಾತೆತ್ತಿದರೆ ಮಣ್ಣಿನ ಮಕ್ಕಳು ಎಂದು ಉದ್ದುದ್ದ ಭಾಷಣ ಮಾಡುವ ಜೆಡಿಎಸ್ ಪಕ್ಷದ ನಾಯಕರು ಕಬ್ಬು ಬೆಳೆಯ ರೈತರ ಬೇಡಿಕೆಗೆ ಸ್ಪಂದಿಸಿ ಸಮಸ್ಯೆ ನೀವಾರಿಸುವಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಾಳಜಿವಯಿಸದೇ ನಕಲಿ ಮಣ್ಣಿನ ಮಕ್ಕಳಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ವ್ಯಂಗ್ಯವಾಡಿದರು.
ಅವರು ಭಾರತೀಯ ಜನತಾ ಪಕ್ಷ ಕೊಪ್ಪಳ ವಿಧಾನಸಭಾ ಕ್ಷೇತ್ರ ವತಿಯಿಂದ ಬುಧವಾರದಂದು ನಗರದ ಸಾರ್ವಜನಿಕ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದರು.
ರೈತರನ್ನು ಗುಂಡಾಗಳು, ರೈತ ಮಹಿಳೆಗೆ ಎಲ್ಲಿ ಮಲಗಿದ್ದೆ ಎಂಬ ಶಬ್ದ ಬಳಸಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ಬೆಳಗಾವಿ, ಬಾಗಲಕೋಟ, ವಿಜಾಪುರ, ಹಾಸನ, ಮಂಡ್ಯ ಸೆರಿದಂತೆ ಅನೇಕ ಜಿಲ್ಲೆಗಳ ರೈತರು ತಮ್ಮ ನ್ಯಾಯಸಮ್ಮತವಾದ ಬೇಡಿಕೆ ಈಡೇರಿಕೆಗೆ ಪ್ರತಿಭಟಿಸಲು ಆಗದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಕೂಡಲೇ ಕಬ್ಬಿನ ಬಾಕಿ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡುವಲ್ಲಿ ಕ್ರಮಕೈಗೊಂಡು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಪ್ರಸ್ತುತ ಬೆಲೆ ಅವೈಜ್ಞಾನಿಕವಾಗಿದೆ. ವೈಜ್ಞಾನಿಕವಾಗಿ ಪರಿಶೀಲಿಸಿ ಕಾರ್ಖಾನೆಗಳ ಮಾಲಕರ ಮತ್ತು ರೈತ ಮುಖಂಡರ ಮನವೂಲಿಸಿ ರೈತರ ಹಿತ ಕಾಯುವುದನ್ನು ಬಿಟ್ಟು ಬೇಜವಬ್ಧಾರಿ ಹೇಳಿಕೆಗಳನ್ನು ನೀಡಿ ರಾಜ್ಯದಲ್ಲಿ ಅರಾಜುಕತೆ ಸೃಷ್ಠಿಮಾಡಲು ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿ ಮುಂದಾಗಿರುವುದು ಮೈತ್ರಿ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರೈತಪರ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹಿಳೆಯ ಬಗ್ಗೆ ಯಾವ ರೀತಿ ಪ್ರತಿಕ್ರೀಯಿಸಬೇಕು ಎಂಬ ಸೌಜನ್ಯತೆ ಮುಖ್ಯಮಂತ್ರಿಗಳಿಗೆ ಇಲ್ಲವಾಗಿದೆ. ಇಂತಹ ಬೇಜವಾಬ್ದಾರಿ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಸುಮ್ಮನಿರುವುದು ರೈತ ವಿರೋಧಿಯಾಗಿ ತಮ್ಮ ಹೇಡಿತನವನ್ನು ಪ್ರದರ್ಶಿಸಿದಂತಾಗಿದೆ ಎಂದರು.

ಪಕ್ಷದ ಹಿರಿಯ ಮುಖಂಡ ಕಳಕಪ್ಪ ಜಾಧವ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ನರಸಿಂಗರಾವ್ ಕುಲಕರ್ಣಿ, ರಾಜು ಬಾಕಳೆ, ಶಶಿಧರ ಕವಲಿ, ಸಂಗಮೇಶ ಡಂಬಳ, ನೀಲಕಂಠಯ್ಯ ಹಿರೇಮಠ, ಹಾಲೇಶ ಕಂದಾರಿ, ಮಹೇಶ ಅಂಗಡಿ, ಸುನೀಲ್ ಹೆಸರೂರ, ಪ್ರವೀಣ ಇಟಗಿ, ಮಹೇಶ ಹಾದಿಮನಿ, ಬಿ.ಜಿ ಗದುಗಿನಮಠ, ಅಮಿತ ಕಂಪ್ಲೀಕರ್, ಶಿವಕುಮಾರ ಕುಕನೂರ, ಚಂದ್ರಕಾಂತ ನಾಯಕ, ನಗರಸಭೆ ಸದಸ್ಯರಾದ ರಾಜಶೇಖರಗೌಡ ಆಡೂರ, ಮಲ್ಲಪ್ಪ ಕವಲೂರ, ಸರ್ವೇಶ ಬನ್ನಿಕೊಪ್ಪ, ಸೋಮಣ್ಣ ಹಳ್ಳಿ, ಮಹಿಳಾ ಮೊರ್ಚಾದ ವಾಣಿಶ್ರೀ ಮಠದ, ವೀಣಾ ಬನ್ನಿಗೊಳ, ಶೋಭಾ ನಗರಿ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಅನೇಕರು ಭಾಗವಹಿಸಿದ್ದರು.

Please follow and like us:
error