fbpx

ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದ ವೈದ್ಯಕೀಯ ಸಿಬ್ಬಂದಿ

ಕೊಪ್ಪಳ ತಾಲೂಕಿನ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಯವರು ಕಪ್ಪು ಬಟ್ಟೆ ಧರಿಸಿ ಆರನೇ ದಿನವಾದ ಇಂದು ಕಪ್ಪು ಮಾಸ್ಕ್ ಧರಿಸಿ ಪ್ರತಿಭಟನೆ ನಡೆಸಿದರು ….ಸರಕಾರದಿಂದ ಯಾವುದೇ ಭದ್ರತೆ ಇಲ್ಲದೆ ಕೆಲಸ ಮಾಡುವ ಸ್ಥಿತಿ ಎದುರಾಗಿದ್ದು ಒಟ್ಟು 14ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು ಸಂಘದ ಜಿಲ್ಲಾ ಕಾರ್ಯದರ್ಶಿ ಸಂಗಮೇಶ ಕವಡಿಮಟ್ಟಿ ಇವರು ಮಾತನಾಡಿ ಮುಂದಿನ ದಿನಮಾನಗಳಲ್ಲಿ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರವಾದ ಹೋರಾಟ ಮಾಡುವದಾಗಿ ಎಚ್ಚರಿಸಿದರು ಈ ಸಂದರ್ಭದಲ್ಲಿ ಡಾ.ಮಹೇಶ ಉಮಚಗಿ ,ಸಂದ್ಯಾ ಕೆ.ಆರ್ .ಪ್ರಭುರಾಜ .ಪ್ರಮೋದ.ಸಂತೋಷ.ವಿನೋದ .ವಿದ್ಯಾ.ಶೋಭಾ.ಸರಿತಾ.ಡಾ.ಪ್ರಿಯಾಂಕ.ಡಾ.ಗೀತಾ.ನೀಲಗಂಗಾ .ಸವಿತಾ.ರಾಜೇಶ್ವರಿ.ಉತ್ತಮ.ವಿನೋದ ಹಾಗೂ ಇನ್ನಿತರ ಸಿಬ್ಬಂದಿಗಳು ಬಾಗವಹಿಸಿದ್ದರು

Please follow and like us:
error
error: Content is protected !!