ಕನ್ನಡ ರಾಜ್ಯೊತ್ಸವ : ಜಿಲ್ಲಾ ಮಟ್ಟದ ಪ್ರಶಸ್ತಿಗೆ ಎಂಟು ಜನ ಸಾಧಕರ ಆಯ್ಕೆ


ಕೊಪ್ಪಳ ಅ.  : ವಿವಿಧ ಕ್ಷೆÃತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೊÃತ್ಸವ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯಿಂದ ಎಂಟು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ..
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೊÃತ್ಸವ ಪ್ರಶಸ್ತಿಗೆ ಚಿಲಕಮುಖಿ ಗ್ರಾಮದ ದಾಲ್ ಪಟ ಹಾಗೂ ಮೋಜಿನ ಗೊಂಬೆ ಕಲಾವಿದರಾದ ಸಣ್ಣ ಹನುಮಂತಪ್ಪ ಬಬ್ಬಲ್, ಕೊಪ್ಪಳದ ಹಾರ್ಮೋನಿಯಂ, ತಬಲಾ, ಕೊಳಲು ವಾದ್ಯ ಸಂಗೀತಗಾರರಾದ ಅಂಧ ಕಲಾವಿದ ಅಂಬಣ್ಣ ಕೊಪ್ಪರದ, ಸಮಾಜ ಸೇವಾ ಕ್ಷೆÃತ್ರದ ಸಾಧನೆಗಾಗಿ ಕೊಪ್ಪಳದ ಕೋಮಲಾ ಕುದುರಿಮೋತಿ, ಜಾನಪದ ಸಂಗೀತ ಹಾಗೂ ಕರಡಿ ಮಜಲು ಕ್ಷೆÃತ್ರದ ಕಲಾವಿದರಾದ ಗೊರ್ಲೆಕೊಪ್ಪದ ವೀರಯ್ಯ ಮಲ್ಲಯ್ಯ ಹಿರೇಮಠ, ರಂಗಭೂಮಿ ಕಲಾವಿದೆ ಯಲಬುರ್ಗಾದ ಶಾಂತಮ್ಮ ಪುಟ್ಟಪ್ಪ ಪೂಜಾರ, ವಿಶ್ರಾಂತ ಶಿಕ್ಷಕರಾಗಿ ಸಮಾಜ ಸೇವಾ ಕ್ಷೆÃತ್ರದಲ್ಲಿ ಸಾಧನೆ ಮಾಡಿದ ಕಂದಕೂರದ ಮಳಿಯಪ್ಪ ಮಾನಪ್ಪ ಪತ್ತಾರ, ಡಪ್ಪಿನಾಟ (ಸಣ್ಣಾಟ) ಕಲಾವಿದರಾದ ಹುಲಿಹೈದರ್‌ನ ಕರಿಯಪ್ಪ ಮಾಸ್ತರ, ತಬಲಾ ವಾದಕರಾದ ಗಂಗಾವತಿಯ ರಾಜಾಸಾಬ ಮುದ್ದಾಬಳ್ಳಿ ಇವರನ್ನು ಆಯ್ಕೆ ಮಾಡಲಾಗಿದ್ದು, ನವೆಂಬರ್ 01 ರಂದು ಜಿಲ್ಲಾ ಕ್ರಿÃಡಾಂಗಣದಲ್ಲಿ ನೆರವೇರುವ ಕನ್ನಡ ರಾಜ್ಯೊÃತ್ಸವ ಆಚರಣೆ ಸಂದರ್ಭದಲ್ಲಿ ಇವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಕರ್ನಾಟಕ ರಾಜ್ಯೊÃತ್ಸವ ಸನ್ಮಾನ ಸಮಿತಿ  ತಿಳಿಸಿದೆ.

Please follow and like us:
error