You are here
Home > Koppal News > ಕನ್ನಡ ಭಾಷೆ ಉಳಿಸಿ ಬೆಳೆಸಿ- ಬಿ.ಎಸ್.ಸುರೇಶ

ಕನ್ನಡ ಭಾಷೆ ಉಳಿಸಿ ಬೆಳೆಸಿ- ಬಿ.ಎಸ್.ಸುರೇಶ

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಿ.ಎಸ್.ಸುರೇಶ ಕರೆ

ಕೊಪ್ಪಳ: ಜೀವನ ನಿರ್ವಹಣೆ ಹಾಗೂ ವ್ಯವಹಾರದ ಕಾರಣಿದಿಂದ ಆಂಗ್ಲ ಭಾಷೆ ಸೇರಿದಂತೆ ಬೇರೆ ಬೇರೆ ಭಾಷೆಯ ಅವಶ್ಯಕತೆ ಇದೆ. ಆದರೆ ಕನ್ನಡಿಗರಾದ ನಾವು ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಆ ಮೂಲಕ ಕನ್ನಡ ಭಾಷೆ ಉಳಿಸಿ ಬೆಳೆಸಬೇಕಾಗಿದೆ ಎಂದು ಗಿಣಿಗೇರಾ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಿ.ಎಸ್.ಸುರೇಶ ಹೇಳಿದರು.
ತಾಲೂಕಿನ ಗಿಣಿಗೇರಾ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವಲಯ ಘಟಕ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಗಿಣಿಗೇರಿ ಭಾಗದಲ್ಲಿ ಹಲವಾರು ಕಾರ್ಖಾನೆಗಳು ಸ್ಥಾಪನೆಯಾಗಿರುವುದರಿಂದ ಇಲ್ಲಿ ವಿವಿಧ ರಾಜ್ಯಗಳಿಂದ ಸಾವಿರಾರು ಜನ ಬಂದು ನೆಲೆಸಿದ್ದಾರೆ. ಬೇರೆ ಬೇರೆ ಭಾಷೆ ಮಾತನಾಡುವ ಅವರಿಗೆ ಕನ್ನಡ ಕಲಿಸಬೇಕು. ಅವರ ಭಾಷೆಯನ್ನು ನಾವು ಮಾತನಾಡುವುದಕ್ಕಿಂತ ನಮ್ಮ ಮಾತೃ ಭಾಷೆ ಕನ್ನಡದಲ್ಲೇ ಅವರ ಹತ್ತಿರ ಮಾತನಾಡುವ ಜೊತೆಗೆ ಅವರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಕನ್ನಡ ಭಾಷೆಯ ಉಳಿವು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮಕ್ಕಳಿಗೆ ಯಾವುದೇ ಮಾದ್ಯಮದಲ್ಲಿ ಶಿಕ್ಷಣ ಕೊಡಿಸಿ ಆದರೆ ಕನ್ನಡ ಶುದ್ಧವಾಗಿ ಮಾತನಾಡುವುದನ್ನು ಕಲಿಸಿ. ಮಾತೃ ಭಾಷೆಗೆ ಮೊದಲ ಪ್ರಾಧಾನ್ಯತೆ ನೀಡಿ ಎಂದು ಬಿ.ಎಸ್.ಸುರೇಶ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕರಿಯಪ್ಪ ಮೇಟಿ, ಕಸಾಪ ವಲಯ ಘಟಕದ ಅಧ್ಯಕ್ಷ ಯಮನೂರಪ್ಪ ಘಂಟಿ, ಪ್ರಧಾನ ಕಾರ್ಯದರ್ಶಿ ಕುಬೇರ ಮಜ್ಜಿಗಿ, ಖಜಾಂಚಿ ಪುಟ್ಟಪ್ಪ ವಾರದ, ಗೌರವ ಸಲಹೆಗಾರರಾದ ಡಾ.ಪಿ.ಎಂ.ಬಸವರಾಜ, ಶರಣಪ್ಪ ಹ್ಯಾಟಿ, ಮಂಜುನಾಥ ಪಾಟೀಲ್, ಬಸವರಾಜ ಗದ್ದಿ, ಸೋಮಲಿಂಗಶೆಟ್ಟಿ ಅಂಗಡಿ, ಎಸ್‌ಡಿಎಂಸಿ ಅಧ್ಯಕ್ಷ ಕೊಟ್ರಯ್ಯಸ್ವಾಮಿ, ಮುಖಂಡರಾದ ಗುದ್ನೆಪ್ಪ ಹೊಸೂರ, ಎಸ್.ವಿ.ಶಿರೋಳ, ಮೈಲಾರಪ್ಪ, ಶೇಖಪ್ಪ, ರಮೇಶ, ಯಮನೂರಪ್ಪ ಸೇರಿದಂತೆ ಇತರರು ಇದ್ದರು.

Top