ಕನ್ನಡ ನೆಲದ ಮೂಲ ಸಂಸ್ಕೃತಿ ಬಿಂಬಿಸುವಂತಹ ಸಾಹಿತ್ಯ ಸೃಷ್ಠಿಸಿ : ಡಾ. ಶಂಭು ಬಳಿಗಾರ 

ಕೊಪ್ಪಳ ಜು.  : ಕನ್ನಡ ನೆಲದ ಮೂಲ ಸಂಸ್ಕೃತಿಯನ್ನು ಬಿಂಬಿಸುವಂತಹ ಸಾಹಿತ್ಯಗಳನ್ನು ಸೃಷ್ಠಿಸಿ ಎಂದು ಹಿರಿಯ ಸಾಹಿತಿಗಳಾದ ಡಾ. ಶಂಭು ಬಳಿಗಾರ ಅವರು ಸಾಹಿತ್ಯಾಸಕ್ತರಿಗೆ ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಸ್ವಾತಂತ್ರö್ಯ ಯೋಧ ದಿ. ಶಂಕ್ರಪ್ಪ ಸಿದ್ದಪ್ಪ ಯರಾಶಿ ಮಹಾವೇಧಿಕೆಯಲ್ಲಿ ಶುಕ್ರವಾರದಂದು ಏರ್ಪಡಿಸಲಾದ ಎರಡು ದಿನಗಳ ಕೊಪ್ಪಳ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ, ಆಚಾರ-ವಿಚಾರಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.  ಇದಕ್ಕಾಗಿಯೇ ಕನ್ನಡ ಭಾಷೆಗೆ ಶಾಸ್ತಿçÃಯ ಸ್ಥಾನಮಾನ ಲಭಿಸಿದೆ.  ದಕ್ಷಿÃಣ ಭಾರತದಲ್ಲಿ ಮೊದಲು ಕನ್ನಡದ ಲಿಪಿ ಇತ್ತು.  ಇಂಗ್ಲೀಷ್ ಭಾಷೆ ಕನ್ನಡ ಭಾಷೆಯಷ್ಟು ಹಳೆಯದಲ್ಲವಾದರೂ, ಜಾಗತಿಕವಾಗಿ ಅದರ ಚಿಂತಕರು, ಸಾಹಿತಿಗಳು ಭಾಷೆಯನ್ನು ದೊಡ್ಡಮಟ್ಟದಲ್ಲಿ ಬೆಳೆಸಲು ಕೈಗೊಂಡ ಕ್ರಮದಿಂದಾಗಿ ವ್ಯಾಪಕವಾಗಿದೆ.  ಕದಂಬದಿಂದ ಪ್ರಾರಂಭಗೊಂಡ ಕನ್ನಡದ ಅನೇಕ ರಾಜಮನೆತನಗಳು ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.  ಕನ್ನಡದ ಮೊದಲ ಸಾಮ್ರಾಜ್ಯ ಕದಂಬ ಹಾಗೂ ಮೊದಲ ದೊರೆ ಮಯೂರ ವರ್ಮ.  ಶರಣರ ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯಗಳು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಕೊಡುಗೆಯನ್ನು ನೀಡಿವೆ.  ನಗರೀಕರಣ, ಪಾಶ್ಚಾತ್ಯ ಸಂಸ್ಕೃತಿಯತ್ತ ಆಕರ್ಷಣೆಯಿಂದಾಗಿ ಇಂಗ್ಲೀಷ್ ವ್ಯಾಮೋಹಕ್ಕೆ ಇಂದಿನ ಜನರು ಹಾಗೂ ಯುವ ಪೀಳಿಗೆ ಒಳಗಾಗಿದೆ.  ಹೀಗಾಗಿ ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಕುತ್ತು ಬಂದಿದೆ.  ಕನ್ನಡ ಭಾಷೆಯ ಬಗ್ಗೆ ಕೀಳರಿಮೆಯನ್ನು ಕನ್ನಡಿಗರು ಮೊದಲು ತೊರೆಯಬೇಕು.  ಆದರೆ ಇದರ ಅರ್ಥ ಬೇರೆ ಭಾಷೆಯನ್ನು ಕಲಿಯಬೇಡಿ ಎಂದಲ್ಲ, ಕನ್ನಡದ ಬಗ್ಗೆ ಅಭಿಮಾನ ಹಾಗೂ ಒಲವು ಬೇಕು.  ಎಲ್ಲಾ ಭಾಷೆಯನ್ನು ಒಂದು ಭಾಷೆಯಾಗಿ ಕಲೆಯಬೇಕು ಮತ್ತು ಕನ್ನಡವನ್ನು ಮಾಧ್ಯಮವಾಗಿ ಕಲೆಯಬೇಕು.  ಈ ನಿಟ್ಟಿನಲ್ಲಿ ಇಂದಿನ ದಿನಮಾನಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವುದು ಅತ್ಯವಶ್ಯಕವಾಗಿದೆ.  ಇದೇ ದಿಶೆಯಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಸಾಹಿತ್ಯ ಸಮ್ಮೆÃಳನಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಆಚರಿಸಲಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ.  ಇಂದಿನ ಆಧುನಿಕ ಕೃಷಿ ಪದ್ದತಿಯಲ್ಲಿ ರೈತರು ರಾಸಾಯನಿಕ ಗೊಬ್ಬರ ಮತ್ತು ಬಿಜಗಳನ್ನು ಖರೀದಿಸುವಂತಾಗಿದ್ದು, ಇದರಿಂದ ಕೃಷಿ ಭೂಮಿ ಬಂಜರವಾಗುತ್ತಿದೆ.  ಆದರೆ ಹಿಂದಿನ ಸಾವಯವ ಕೃಷಿ ಪದ್ದತಿಯಲ್ಲಿ ರೈತರು ಬೆಳೆದ ಬೆಳೆಯಲ್ಲಿಯೇ ಬಿಜವನ್ನು ಇಟ್ಟುಕೊಳ್ಳುತ್ತಿದ್ದರು.  ಹಾಗೂ ಕೃಷಿ ಚಟುವಟಿಕೆಗಳ ಜೊತೆ ಜಾನುವಾರುಗಳನ್ನು ಸಾಕಾಣಿಕೆ ಮಾಡಿಕೊಂಡು ಅದರ ಗೊಬ್ಬರವನ್ನು ಬಳಕೆ ಮಾಡುತ್ತಿದ್ದರು.  ಇದರಿಂದ ಕೃಷಿ ಭೂಮಿ ಹೆಚ್ಚು-ಹೆಚ್ಚು ಫಲವತ್ತಾಗುತ್ತಿತ್ತು.  ಈ ಬಗ್ಗೆ ನಾವು ಚಿಂತಿಸಬೇಕಾಗಿದೆ ಎಂದು ಹಿರಿಯ ಸಾಹಿತಿಗಳು ಡಾ. ಶಂಭು ಬಳಿಗಾರ ಅವರು ಹೇಳಿದರು.
ಕೊಪ್ಪಳ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೆÃಳನದ ಸರ್ವಾಧ್ಯಕ್ಷತೆಯನ್ನು ಜಿಲ್ಲೆಯ ಶಿಕ್ಷಣ ತಜ್ಞ ಹಾಗೂ ಸಾಹಿತಿ ಟಿ.ಬಿ. ಮಾಗಳದ ಅವರು ವಹಿಸಿದ್ದರು.  ಜಿಲ್ಲಾ ಪಂಚಾಯತಿ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿರವರು ನಾಡ ದೇವತೆ ಭುವನೇಶ್ವರಿ ಭಾವಚಿತ್ರಕ್ಕೆ ಪುಶ್ಪಾರ್ಪಣೆ ಗೈದರು.  ಧಾರವಾಡ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನರವರು ಸಮ್ಮೆÃಳನಾಧ್ಯಕ್ಷರ ಪರಿಚಯ ಮಾಡಿಕೊಟ್ಟರು.  ಜಿಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಚಂಡೂರ ಹನುಮಂತಗೌಡ ಪಾಟೀಲ್, ತಾ.ಪಂ. ಸದಸ್ಯೆ ಗೌರಮ್ಮ ನಾಗನೂರ, ಬನ್ನಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಉಮಾದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ್, ಎಪಿಎಂಸಿ ಅಧ್ಯಕ್ಷ ಗಡಾದ್    ಸೇರಿದಂತೆ ಕಸಾಪ ತಾಲೂಕು ಘಟಕಗಳ ಅಧ್ಯಕ್ಷರು, ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಸಾಪ ಕೇಂದ್ರ ಸಂಘ ಸಂಸ್ಥೆಯ ಪ್ರತಿನಿಧಿ ಶೇಖರಗೌಡ ಮಾಲಿಪಾಟೀಲ ಪ್ರಾಸ್ತಾವಿಕವಾಗಿ ಮಾಡಿದರು.  ಕಸಾಪ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ ಸರ್ವರನ್ನು ಸ್ವಾಗತಿಸಿದರು.  ಸದಾಶಿವಪಾಟೀಲ್ ತಂಡ ನಾಡಗೀತೆ ಮತ್ತು ರೈತಗೀತೆಯನ್ನು ಪ್ರಸ್ತುತಪಡಿಸಿದರು.  ಸಮಾರಂಭಕ್ಕೂ ಪೂರ್ವದಲ್ಲಿ ವಿವಿಧ ಕಲಾತಂಡಗಳನ್ನು ಒಳಗೊಂಡ ಅದ್ಧೂರಿ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆ ಮೂಲಕ ಸಮ್ಮೇಳನದ ಆವರಣವರೆಗೆ ಸಾಗಿ ಬಂದಿತು.

Please follow and like us:
error