ಕನ್ನಡ ತೇರೆಳೆಯಲು ಎಲ್ಲರ ಸಹಕಾರ ಅಗತ್ಯ

kasapa_koppal
ಕೊಪ್ಪಳ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ತೇರೆಳೆಯಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ಹೇಳಿದರು.
ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮಾರ್ಚ ೨೪, ೨೫ ರಂದು ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ಬಿತ್ತಿಪತ್ರ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಶುಕ್ರವಾರ ಮತನಾಡಿದರು.
ಕನ್ನಡದ ತೇರು ನನ್ನೊಬ್ಬನಿಂದ ಎಳೆಯಲು ಸಾಧ್ಯವಿಲ್ಲ ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಹಿರೇವಂಕಲಕುಂಟಾ ಗ್ರಾಮಸ್ಥರು ಹೆಚ್ಚಿನ ಸಹಕಾರ ನೀಡಬೇಕು. ಜೊತೆಗೆ ಜಿಲ್ಲೆಯ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಯಲಬುರ್ಗಾ ತಾ.ಪಂ ಅಧ್ಯಕ್ಷೆ ಲಕ್ಷ್ಮಿ ದ್ಯಾಮನಗೌಡ್ರ ಬಿತ್ತಿಪತ್ರ ಬಿಡುಗಡೆ ಗೊಳಿಸಿದರು. ಗ್ರಾ.ಪಂ ಸದಸ್ಯ ಮಂಜುನಾಥ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಮಲ್ಲಿಕಾರ್ಜುನ ಹರ್ಲಾಪೂರ, ಡಾ.ಪುರುಶೋತ್ತಮ, ಗಿರಿಜಾ ಎಸ್.ಕರಿ, ಜಯಶ್ರೀ ವಿ. ಮಲಜಿ, ಆನಂದ ಈಳಗೇರ, ವಿಜಯ ತಾಳಕೇರಿ, ಕೃಷ್ಣಾ ಪತ್ತಾರ, ದೇವೆಂದ್ರ ಜಿರ್ಲಿ, ಮಲ್ಲಿಕಾರ್ಜುನ ಗಂಗನಾಳ ಸೇರಿದಂತೆ ಇತರರು ಇದ್ದರು.

Please follow and like us:
error

Related posts

Leave a Comment