ಕನ್ನಡ ಜಾನಪದ ಪರಿಷತ್‍ಗೆ ಸದಸ್ಯತ್ವ ಆಹ್ವಾನ

ಕೊಪ್ಪಳ, ಸೆ. ಕೊಪ್ಪಳ ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪುನಶ್ಚೇತನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಸಮಿತಿಗೆ ಸದಸ್ಯರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕಜಾಪ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊಪ್ಪಳ ಜಿಲ್ಲೆಯ 7 ತಾಲ್ಲೂಕು ಘಟಕ ಮತ್ತು ಜಿಲ್ಲಾ ಘಟಕವನ್ನು ಪುನರ್ ರಚಿಸಿ, ಹೋಬಳಿ ಮಟ್ಟದಲ್ಲಿಯೂ ಉತ್ತಮ ಸಂಘಟನೆ ಕೈಗೊಳ್ಳಲು ಕನ್ನಡ ಜಾನಪದ ಪರಿಷತ್‍ಗೆ ಜಾನಪದ ಕಲಾವಿದರು, ಗಾಯಕರು ಮತ್ತು ಸಾಂಸ್ಕøತಿಕ ಸಂಘಟಕರಿಂದ ಸದಸ್ಯತ್ವ ಆಹ್ವಾನಿಸಲಾಗಿದೆ.
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸದಸ್ಯರಾಗಲು ಅವಕಾಶವಿದ್ದು, ಸದಸ್ಯತ್ವ ಶುಲ್ಕ 50 ರೂ., ಎರಡು ಭಾವಚಿತ್ರ, ವಾಸ ಸ್ಥಳಕ್ಕೆ ಯಾವುದಾದರೂ ಒಂದ ದಾಖಲೆ ಸಮೇತ ಜಿಲ್ಲಾ ಕಾರ್ಯದರ್ಶಿಗಳನ್ನು ಸಂಪರ್ಕಿಸಿ ಸದಸ್ಯರಾಗಬಹುದು. ಸೆಪ್ಟೆಂಬರ್ 15 ರೊಳಗೆ ಸದಸ್ಯತ್ವ ಪಡೆದವರಲ್ಲಿ ನೂತನ ಪದಧಿಕಾರಿಗಳನ್ನು ಆಯ್ಕೆ ಮಾಡಿ ಸಂಘಟನೆ ಮಾಡಲಾಗುವದು.
ಸಂಘಟನೆಯ ಮೊದಲ ಹಂತವಾಗಿ ಜಿಲ್ಲೆಯ ಎಲ್ಲಾ ಮೂಲ ಜನಪದ ಕಲಾವಿದರ ಮಾಹಿತಿ ಸಂಗ್ರಹ ಕಾರ್ಯ, ಜಿಲ್ಲಾ ಮತ್ತು ರಾಜ್ಯಮಟ್ಟದ ಜನಪದ ಗೀತೆ ಸ್ಪರ್ಧೆ, ವಿಶ್ವ ಬುಡಕಟ್ಟು ದಿನಾಚರಣೆ, ವಿಶ್ವ ಜನಪದ ದಿನಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದ್ದಾರೆ. ಆಸಕ್ತರು ಉಮೇಶ ಸುರ್ವೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಜಾಪ ಮೊ : 9480810899 ರನ್ನು ಸಂಪರ್ಕಿಸಬಹುದು.

Please follow and like us:
error