ಕನ್ನಡ ಅಭಿವೃದ್ದಿ ಪ್ರಾಧಿಕಾರ : ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಸಿರಾಜ್ ಬಿಸರಳ್ಳಿ ನೇಮಕ

ಕೊಪ್ಪಳ : ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ರಚಿಸಿರುವ ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರಾಗಿ ಪ್ರಗತಿಪರ ಹೋರಾಟಗಾರ, ಬರಹಗಾರ,ಪತ್ರಕರ್ತ ಸಿರಾಜ್ ಬಿಸರಳ್ಳಿಯವರನ್ನು ನೇಮಕ ಮಾಡಲಾಗಿದೆ.


ಪ್ರಾಧಿಕಾರದ ಕನ್ನಡಪರ ಆಶಯಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿ ಸುವ ಮಹತ್ವದ ಕಾರ್ಯದಲ್ಲಿ ಅಧಿಕಾರೇತರ ಸದಸ್ಯರಾಗಿ ಸಹಯೋಗ ನೀಡಬೇಕೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ನೀಡಿರುವ ಆದೇಶಪತ್ರದಲ್ಲಿ ಕೋರಿದ್ದಾರೆ. ಕಳೆದ ಒಂದೂವರೆ ದಶಕದಿಂದ ನಿರಂತರವಾಗಿ ಕನ್ನಡ ನಾಡುನುಡಿಗಾಗಿ, ಬರಹಗಾರರಾಗಿ, ಪತ್ರಕರ್ತರಾಗಿ , ಪ್ರಗತಿಪರ ಹೋರಾಟಗಳಲ್ಲಿ ತೊಡಗಿಕೊಂಡಿರುವ ಸಿರಾಜ್ ಬಿಸರಳ್ಳಿಯವರನ್ನು ಕನ್ನಡ ಜಾಗೃತಿ ಸಮಿತಿಗೆ ಸದಸ್ಯರಾಗಿ ನೇಮಿಸಿರುವುದಕ್ಕೆ ವಿಠ್ಠಪ್ಪ ಗೋರಂಟ್ಲಿ, ರಾಜಾಬಕ್ಷಿ ಎಚ್.ವಿ., ವಿ.ಬಿ.ರಡ್ಡೇರ್, ಮಹಾಂತೇಶ ಮಲ್ಲನಗೌಡರ, ಅಮರದೀಪ್, ಆದಿಲ್ ಪಟೇಲ್, ರಮೇಶ ಗಬ್ಬೂರ್, ಸಲಿಂ ಮಂಡಲಗೇರಿ,ಮುನೀರ್ ಸಿದ್ದೀಖಿ, ಶಿವಾನಂದ ಹೊದ್ಲೂರ್ ಸೇರಿದಂತೆ ಕೊಪ್ಪಳ ಜಿಲ್ಲೆಯ ಸಾಹಿತಿಗಳು ಬರಹಗಾರರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Please follow and like us:
error