ಕನ್ನಡನೆಟ್.ಕಾಂ ದಶಮಾನೋತ್ಸವ- ಬಹುತ್ವ ಭಾರತ ಪತ್ರಿಕೆ ಬಿಡುಗಡೆ


ಕೊಪ್ಪಳ : ಹೈದ್ರಾಬಾದ್ ಕರ್ನಾಟಕದ ಪ್ರಪ್ರಥಮ ಆನ್ ಲೈನ್ ಕನ್ನಡ ಇ ಪತ್ರಿಕೆ ಕನ್ನಡನೆಟ್ ಡಾಟ್ ಕಾಂ ದಶಮಾನೋತ್ಸವ ಕಾರ್ಯಕ್ರಮ ಹಾಗೂ ಬಹುತ್ವ ಭಾರತ ಮಾಸಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಾಳೆ ನಡೆಯಲಿದೆ. ದಿ. ೪-೧೧-೨೦೧೯ರಂದು ಸಂಜೆ ೪ ಗಂಟೆಗೆ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಉದ್ಘಾಟಕರಾಗಿ ಎಂ.ನಂಜುಂಡಸ್ವಾಮಿ ಐಜಿಪಿ ಬಳ್ಳಾರಿ ವಲಯ,ಬಳ್ಳಾರಿ, ಪತ್ರಿಕೆಯ ಬಿಡುಗಡೆಯನ್ನು ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ ತೋಂಟದಾರ್ಯ ಶಾಖಾ ಮಠ ಮುಂಡರಗಿ ಹಾಗೂ ನಿಷ್ಕಲ ಮಂಟಪ ಬೈಲೂರು ಇವರು ನೆರವೇರಿಸಲಿದ್ದಾರೆ.. ಮುಖ್ಯ ಅತಿಥಿಗಳಾಗಿ ಸಿದ್ದನಗೌಡ ಪಾಟೀಲ್ ಪತ್ರಕರ್ತರು, ಸೈಯದ್ ಗೌಸ್ ಪಾಷಾ ಚಿಂತಕರು, ರಾಜು ಬಿ.ಆರ್, ಪತ್ರಕರ್ತರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋರಾಟಗಾರ ರಜಾಕ್ ಉಸ್ತಾದ್ ವಹಿಸಿಕೊಳ್ಳಲಿದ್ಧಾರೆ.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ವಿಠ್ಠಪ್ಪ ಗೋರಂಟ್ಲಿ , ಸಿದ್ದು ಬಿರಾದಾರ, ಅಹಿರಾಜ್ ಇವರಿಗೆ ಬಹುತ್ವ ಭಾರತೀಯ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪತ್ರಿಕೋಧ್ಯಮ ವಿದ್ಯಾರ್ಥಿಗಳಿಗೆ ಹಾಗೂ ಛಾಯಾಚಿತ್ರ ಸ್ಪರ್ದೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವೂ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಸಂಸ್ಥಾಪಕ ಸಿರಾಜ್ ಬಿಸರಳ್ಳಿ, ಸಂಪಾದಕ ರಾಜಾಬಕ್ಷಿ ಎಚ್.ವಿ ಹಾಗೂ ಪ್ರಕಾಶಕರಾಗಿರುವ ಪ್ರಭುಕುಮಾರ ಗಾಳಿ ಕೋರಿದ್ದಾರೆ.

Please follow and like us:
error