ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಸರಕಾರದಿಂದ ಭತ್ತ ಖರೀದಿ

ಡಿ. ೦೫ ರಿಂದ ರೈತರ ನೊಂದಣಿ ಆರಂಭ : ಪಿ. ಸುನೀಲ್ ಕುಮಾರ್
ಕೊಪ್ಪಳ ಡಿ. ೦೪ : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸರ್ಕಾರವು ರೈತರಿಂದ ಭತ್ತವನ್ನು ಖರೀದಿಸುತ್ತಿದ್ದು, ಭತ್ತ ಮಾರಾಟ ಮಾಡಲು ಇಚ್ಚಿಸುವ ರೈತರು ಆನ್‌ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬೇಕಾಗಿದ್ದು, ಡಿ. ೦೫ ರಿಂದ ನೊಂದಣಿ ಪ್ರಕ್ರೀಯೆ ಆರಂಭವಾಗಲಿದೆ ಎಂದು ಕೊಪ್ಪಳ ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರು ಹೇಳಿದರು.
ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿರುವ ಕುರಿತು ಕೊಪ್ಪಳ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಭತ್ತ ಖರೀದಿ ಪ್ರಕ್ರೀಯೆಯನ್ನು ಚಾಲನೆಗೊಳಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರದಂದು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತವನ್ನು ಖರೀದಿಸುವ ಬಗ್ಗೆ ಸರ್ಕಾರದ ಆದೇಶವು ಗಮನ ಸೆಳೆದಿದ್ದು, ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿಗೆ ರಾಜ್ಯಕ್ಕೆ ೨ ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಲು ಗುರಿ ನಿಗದಿಪಡಿಸಿದ್ದು, ಭತ್ತ ಮಾರಾಟ ಮಾಡಲು ಇಚ್ಚಿಸುವ ರೈತರು ಆನ್‌ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬೇಕು. ಈ ಯೋಜನೆಯಡಿಯಲ್ಲಿ ರೈತರಿಂದ ಭತ್ತವನ್ನು ಖರೀದಿಸಲು ಕೊಪ್ಪಳ ಜಿಲ್ಲೆಗೆ ಕರ್ನಾಟಕ ಆಹಾರ ಮತ್ತು ನಾಗರಿಕರ ಸರಬರಾಜು ನಿಗಮ ನಿಯಮಿತ ಇವರನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ. ಭತ್ತ ಖರೀದಿಗೆ ಸಂಬಂಧಿಸಿದಂತೆ ನೊಂದಣೆ ಮಾಡಲಾದ ಅಕ್ಕಿ ಗಿರಿಣಿಗಳಲ್ಲಿ ಶೇಖರಣೆ, ಸಂಗ್ರಹಣೆ ಹಾಗೂ ಹಲ್ಲಿಂಗ್ ಕಾರ್ಯವನ್ನು ಮಾಡಿಸುವಂತೆ ಸೂಚಿಸಲಾಗಿದ್ದು, ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತವನ್ನು ಮಾರಾಟ ಮಾಡಲು ಇಚ್ಚಿಸುವ ರೈತರು ಆನ್‌ಲೈನ್ ಮೂಲಕ ನೊಂದಾವಣೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಗುಣಮಟ್ಟ ಪರಿಶೀಲನೆಗಾಗಿ ಆಸ್ಸೇಯರ್ ನೇಮಕಾತಿ ಮತ್ತು ತರಬೇತಿ. ಗುಣಮಟ್ಟ ಅಕ್ಕಿ ಗಿರಣಿಗಳ ಹಲ್ಲಿಂಗ್ ಸಾಮಾರ್ಥ ಹಾಗೂ ಭತ್ತ ಸಂಗ್ರಹಣೆ ಸಾಮಾರ್ಥ್ಯದ ವಿವರಗಳನ್ನು ಪಡೆದು ನೊಂದಣೆ ಮಾಡಬೇಕು. ಡಿ. ೦೫ ರಿಂದ ನೊಂದಣೆ ಪ್ರಾರಂಭವಾಗಲಿದ್ದು, ನೊಂದಾಯಿತ ರೈತರಿಂದ ಭತ್ತವನ್ನು ಖರೀದಿಸಿ ಮಿಲ್ಲುಗಳಲ್ಲಿ ಶೇಖರಿಸುವ ಕಾರ್ಯಾರಂಭ ಡಿ. ೧೬ ರಿಂದ. ಈ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಗರಿಷ್ಠ ೪೦ ಕ್ವಿಂಟಲ್ ಭತ್ತವನ್ನು ಖರೀದಿಸಬಹುದಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ, ಕಾರಟಗಿ ಹಾಗೂ ಕೊಪ್ಪಳ ತಾಲೂಕುಗಳಲ್ಲಿ ಖರೀದಿ ಪ್ರಕ್ರೀಯೆಯನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಬೇಕಾಗಿದ್ದು, ಪ್ರಸ್ತುತ ಈ ತಾಲೂಕುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಗಟು ಮಳಿಗೆಗಳಲ್ಲಿ ಅಗತ್ಯ ಸಿಬ್ಬಂದಿ, ಗಣಕ ಯಂತ್ರಗಳ ವ್ಯವಸ್ಥೆ ಮಾಡಿ, ರೈತರು ನೊಂದಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು. ಖರೀದಿ ಕೇಂದ್ರಗಳಲ್ಲಿ ನೊಂದಣೆ ಮಾಡಿದ ರೈತರು ತಂದಂತಹ ಭತ್ತದ ಮಾದರಿಯನ್ನು ವಿಶ್ಲೇಷಣೆ ಮಾಡಿ ವರದಿ ನೀಡಲು ಅಗತ್ಯ ಗ್ರೇಡರ್‌ಗಳನ್ನು ಕೃಷಿ ಇಲಾಖೆಯು ನಿಯೋಜಿಸಬೇಕು. ಅಲ್ಲದೇ ಖರೀದಿ ಕೇಂದ್ರಗಳಿಗೆ ಬರುವ ರೈತರಿಗೆ ನೀರು, ವಸತಿ ಇತರೆ ಅಗತ್ಯ ವ್ಯವಸ್ಥೆ ಮಾಡಲು ಸೂಕ್ತ ಸಿಬ್ಬಂದಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಯವರು ನಿಯೋಜಿಸಬೇಕು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಜಿಲ್ಲಾ ವ್ಯವಸ್ಥಾಪಕರು ರೈತರಿಗೆ ಅನುಕೂಲವಾಗುವಂತೆ ಅಕ್ಕಿ ಗಿರಣಿ ಮಾಲೀಕರು ಆನ್‌ಲೈನ್‌ನಲ್ಲಿ ನೊಂದಣೆ ಮಾಡಿಕೊಳ್ಳಲು ಅಗತ್ಯ ಕ್ರಮ ವಹಿಸಬೇಕು. ನೊಂದಣಿ ಮಾಡಿಕೊಳ್ಳುವ ಸ್ಥಳಕ್ಕೆ ತರುವ ಭತ್ತದ ಮಾದರಿಯನ್ನು ವಿಶ್ಲೇಶಿಸಲು ಅಗತ್ಯವಿರುವ ತೇವಾಂಶ ಮಾಪಕಗಳನ್ನು ಲಭ್ಯವಿರುವಂತೆ ಹಾಗೂ ಎಲ್ಲಾ ಪ್ರಕ್ರೀಯೆಯಲ್ಲಿ ರೈತರಿಗೆ ಅನಗತ್ಯ ಗೊಂದಲ, ತೊಂದರೆ ಉಂಟಾಗದಂತೆ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರು ಹೇಳಿದರು.
ಕೊಪ್ಪಳ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಭಾರ ಉಪನಿರ್ದೇಶಕರು ಆಗಿರುವ ಉಪ ವಿಭಾಗಾಧಿಕಾರಿ ಸಿ.ಡಿ. ಗೀತಾ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ಶಬಾನ ಶೇಖ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ಭತ್ತ ಬೆಳೆಗಾರರು, ಗೋದಾಮು ವ್ಯವಸ್ಥಾಪಕರು ಸೇರಿದಂತೆ ಅನೇಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts