ಕನಿಷ್ಠ ಬೆಂಬಲ ಬೆಲೆಯೋಜನೆಯಡಿ ಭತ್ತ, ರಾಗಿ, ಬಿಳಿಜೋಳ ಖರೀದಿ-ಪಿ.ಸುನೀಲ್ ಕುಮಾರ್

ನೋಂದಣಿ ಮಾಡಲಾದ ಗಿರಣಿಗಳಲ್ಲಿ ಸಂಗ್ರಹಣೆ ಮಾಡಿ : ಪಿ.ಸುನೀಲ್ ಕುಮಾರ್
ಕೊಪ್ಪಳ : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಬಿಳಿಜೋಳ ಖರೀದಿ ಪ್ರಕ್ರಿಯೆ ಅಚ್ಚುಕಟ್ಟಾಗಿ ನಿರ್ವಹಿಸಿ ಹಾಗೂ ನೋಂದಣೆ ಮಾಡಲಾದ ಗಿರಣಿಗಳಲ್ಲಿ ಸಂಗ್ರಹಣೆ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿ ಅಧ್ಯಕ್ಷರಾದ ಪಿ.ಸುನೀಲ್ ಕುಮಾರ್ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
2019-20ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರೈತರಿಂದ ಭತ್ತ, ರಾಗಿ, ಬಿಳಿಜೋಳವನ್ನು  ಖರೀದಿ ಮಾಡುವ ಬಗ್ಗೆ ಇತ್ತೀಚೆಗೆ (ಡಿ.23) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2019-20ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತವನ್ನು ಖರೀದಿಸುವ ಬಗ್ಗೆ ಸರ್ಕಾರವು ಪ್ರಸಕ್ತ ಸಾಲಿಗೆ ರಾಜ್ಯಕ್ಕೆ 2.00 ಲಕ್ಷ ಮೆಟ್ರಿಕ್ ಟನ್ ಭತ್ತ, 2.00 ಲಕ್ಷ ಮೆ.ಟನ್ ರಾಗಿ ಮತ್ತು 1,241 ಮೆ.ಟನ್ ಬಿಳಿಜೋಳವನ್ನು ಖರೀದಿಸಲು ಗುರಿ ನಿಗದಿಪಡಿಸಿದ್ದು, ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ ರೂ. 1,815/-, ಗ್ರೇಡ್-ಎ ಭತ್ತಕ್ಕೆ ರೂ. 1,835/-, ಬಿಳಿಜೋಳ (ಹೈಬ್ರಿಡ್) ರೂ. 2550/-, ಬಿಳಿಜೋಳ (ಮಾಲ್ದಂಡಿ) ರೂ. 2,570/- ಹಾಗೂ ರಾಗಿ ರೂ. 3,150-00 ಗಳನ್ನು ನಿಗದಿಪಡಿಸಿದೆ ಎಂದು ಸರ್ಕಾರದ ಆದೇಶವನ್ನು ಸಭೆಯಲ್ಲಿ ಹಾಜರಿದ್ದ ಎಲ್ಲಾ ಅಧಿಕಾರಿಗಳು ಹಾಗೂ ರೈಸ್ ಮಿಲ್ ಮಾಲೀಕರಿಗೆ ತಿಳಿಸಿದರು.
ಕೊಪ್ಪಳ ಜಿಲ್ಲೆಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಇವರನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದ್ದು, ಭತ್ತ, ರಾಗಿ, ಬಿಳಿಜೋಳ ಖರೀದಿಗೆ ಸಂಬAಧಿಸಿದAತೆ ನೋಂದಾಯಿತ ಅಕ್ಕಿ ಗಿರಣಿಗಳಲ್ಲಿ ಸಂಗ್ರಹಣೆ ಹಾಗೂ ಹಲ್ಲಿಂಗ್ ಕಾರ್ಯವನ್ನು ಮಾಡಿಸುವಂತೆ ಸೂಚಿಸಲಾಗಿದೆ.  ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತವನ್ನು ಮಾರಾಟಮಾಡಲು ಇಚ್ಚಿಸುವ ರೈತರು ಆನ್‌ಲೈನ್ ಮೂಲಕ ನೋಂದಾವಣೆ ಮಾಡಬೇಕಾಗಿದ್ದು, ಜಿಲ್ಲಾ ಮಟ್ಟದಲ್ಲಿ ಗುಣಮಟ್ಟದ ಅಕ್ಕಿ ಗಿರಣಿಗಳ ಹಲ್ಲಿಂಗ್ ಸಾಮರ್ಥ್ಯ ಹಾಗೂ ಭತ್ತ ಸಂಗ್ರಹಣೆ ಸಾಮರ್ಥ್ಯದ ವಿವರಗಳನ್ನು ಪಡೆದು ನೋಂದಣಿ ಕಾರ್ಯ ಕೈಗೊಳ್ಳಲು ಡಿ. 26 ರಿಂದ 2020 ರ ಜನವರಿ. 10 ರವರೆಗೆ ರೈತರಿಂದ ನೋಂದಣಿ ಪ್ರಕ್ರಿಯೆ ನಡೆಯಲಿದೆ.  ಅಕ್ಕಿ ಗಿರಣಿಗಳಿಂದ ನೋಂದಣೆ ವಿವರಕ್ಕನುಗುಣವಾಗಿ ಗಿರಣಿಗಳಿಗೆ ಸಂಗ್ರಹಣೆ ಇತರೆ ವ್ಯವಸ್ಥೆಗಳಿಗೆ ಡಿ. 31 ರವರೆಗೆ ಕಾಲಾವಕಾಶವಿರುತ್ತದೆ.  2020ರ ಜನವರಿ. 01 ರಿಂದ ಮಾರ್ಚ್. 31 ರವರೆಗೆ ನೋಂದಾಯಿತ ರೈತರಿಂದ ಭತ್ತವನ್ನು ಖರೀದಿಸಿ ಮಿಲ್ಲುಗಳಲ್ಲಿ ಶೇಖರಿಸುವ ಮತ್ತು ಪರಿವರ್ತಿಸುವ ಕಾರ್ಯ ಆರಂಭವಾಗಲಿದೆ ಎಂದರು.
ಈ ಯೋಜನೆಯಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಗರಿಷ್ಠ 40 ಕ್ವಿಂಟಾಲ್ ಭತ್ತ, 75 ಕ್ವಿಂಟಾಲ್ ರಾಗಿ ಹಾಗೂ 75 ಕ್ವಿಂಟಾಲ್ ಬಿಳಿಜೋಳವನ್ನು ಖರೀದಿಸಬಹುದಾಗಿದೆ.  ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗೂ ಕಾರಟಗಿ ತಾಲ್ಲೂಕುಗಳಲ್ಲಿ ಭತ್ತದ ಖರೀದಿ ಪ್ರಕ್ರಿಯನ್ನು ಪ್ರ‍್ರಾರಂಭಿಸಲು ಕ್ರಮಕೈಗೊಳ್ಳಬೇಕು. ಹಾಗೂ ರಾಗಿ ಮತ್ತು ಬಿಳಿಜೋಳದ ಖರೀದಿ ಕೇಂದ್ರಗಳನ್ನು ಗಂಗಾವತಿ, ಕೊಪ್ಪಳ, ಯಲಬುರ್ಗಾ, ಕುಷ್ಟಗಿಯಲ್ಲಿ ಪ್ರಾರಂಭಿಸಲಾಗಿದೆ. ಪ್ರಸ್ತುತ ಈ ತಾಲ್ಲೂಕುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಗಟು ಮಳಿಗೆಗಳಲ್ಲಿ ಅಗತ್ಯ ಸಿಬ್ಬಂದಿ ಹಾಗೂ ಗಣಕ ಯಂತ್ರಗಳ ವ್ಯವಸ್ಥೆ ಮಾಡಿ ರೈತರು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಈ ಕುರಿತು ವ್ಯಾಪಕ ಪ್ರಚಾರ ನೀಡುವಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರಿಗೆ ಸೂಚಿಸಿದರು. ಈ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿದ ರೈತರು ತಂದAತಹ ಭತ್ತ, ರಾಗಿ ಹಾಗೂ ಬಿಳಿ ಜೋಳದ ಮಾದರಿಯನ್ನು ವಿಶ್ಲೇಷಣೆ ಮಾಡಿ ವರದಿ ನೀಡಲು ಅಗತ್ಯ ಗ್ರೇಡರ್‌ಗಳನ್ನು ನಿಯೋಜಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು. ರೈತರಿಗೆ ಅನುಕೂಲವಾಗುವಂತೆ ಅಕ್ಕಿ ಗಿರಣಿ ಮಾಲೀಕರು ಆನ್‌ಲೈನ್‌ನಲ್ಲಿ ನೋಂದಣೆ ಮಾಡಿಕೊಳ್ಳಲು ಅಗತ್ಯ ಕ್ರಮ ವಹಿಸುವಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರಿಗೆ ಸೂಚಿಸಿದರು.  ರೈತರು ನೋಂದಣೆ ಮಾಡಿಕೊಳ್ಳುವ ಸ್ಥಳಕ್ಕೆ ತರುವ ಭತ್ತ, ರಾಗಿ ಹಾಗೂ ಬಿಳಿಜೋಳದ ಮಾದರಿಯನ್ನು ವಿಶ್ಲೇಷಿಸಲು ಅಗತ್ಯವಿರುವ ತೇವಾಂಶ ಮಾಪಕಗಳನ್ನು ಲಭ್ಯವಿರುವಂತೆ ಹಾಗೂ ಈ ಎಲ್ಲಾ ಪ್ರಕ್ರಿಯೆಯಲ್ಲಿ ರೈತರಿಗೆ ಅನಗತ್ಯ ಗೊಂದಲ/ತೊAದರೆ ಉಂಟಾಗದAತೆ ಕಾಲಮಿತಿಯಲ್ಲಿ ಕ್ರಮಕೈಕೊಳ್ಳಲು ಸಂಬAಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
ಕೊಪ್ಪಳ ಜಿಲ್ಲೆ ರೈಸ್ ಮಿಲ್ ಮಾಲೀಕರು ನೋಂದಣಿ ಮಾಡಲು ಮುಂದೆ ಬಂದಿದು,್ದ ಕೆಎಫ್‌ಸಿಎಸ್‌ಸಿಯ ಜಿಲ್ಲಾ ವ್ಯವಸ್ಥಾಪಕರು ಡಿ. 26 ರಿಂದ 31 ರೊಳಗಾಗಿ ರೈಸ್ ಮಿಲ್ಲುಗಳಲ್ಲಿ ನೋಂದಣಿ ಮಾಡಿಸಬೇಕು ಎಂದು  ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಎಲ್ಲಾ ಅಧಿಕಾರಿಗಳಿಗೆ  ತಿಳಿಸಿದರು.
ಭತ್ತ ಖರೀದಿಗೆ ಮಾರ್ಗಸೂಚಿಗಳು
ನೋಂದಣಿ ಮಾಡಿದ ರೈತರು ಇಲಾಖೆಯಿಂದ ಕಳುಹಿಸುವ ಎಸ್‌ಎಂಎಸ್ ಆಧಾರದ ಮೇಲೆ ಸಂಬAಧಪಟ್ಟ ಅಕ್ಕಿ ಗಿರಣಿಗಳಿಗೆ ಭತ್ತದ ಮಾದರಿಯನ್ನು ಕಡ್ಡಾಯವಾಗಿ ನೀಡಬೇಕು. ಸಾಮಾನ್ಯ ಭತ್ತವನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಗರಿಷ್ಟ 40 ಕ್ವಿಂಟಾಲ್ ಮೀರದಂತೆ ಖರೀದಿಸಬೇಕು (ಪ್ರತಿ ಎಕರೆಗೆ 16 ಕ್ವಿಂಟಾಲ್‌ನAತೆ). ಅಕ್ಕಿ ಗಿರಣಿ ಮಾಲೀಕರು ರೈತರಿಂದ ಸ್ವೀಕರಿಸಿದ ಭತ್ತದ ಮಾದರಿಯನ್ನು ಸಂಗ್ರಹಣಾ ಏಜೆನ್ಸಿಗಳಿಂದ ನೇಮಕ ಮಾಡುವ ಗುಣಮಟ್ಟ ಪರಿಶೀಲನಾ ಅಧಿಕಾರಿಯ ಮೂಲಕ ಗುಣಮಟ್ಟ ದೃಢೀಕರಣ ಪಡೆದ ನಂತರವೇ ಭತ್ತವನ್ನು ಖರೀದಿಸಿ ಸಂಗ್ರಹಣೆ ಮಾಡಬೇಕು. ಭತ್ತವನ್ನು ರೈತರು ತಮ್ಮ ಚೀಲಗಳಲ್ಲಿ ತಂದು ಅಕ್ಕಿ ಗಿರಣಿಗೆ ಸಲ್ಲಿಸಿದಾಗ ಪ್ರತಿ ಕ್ವಿಂಟಾಲ್ ಚೀಲಕ್ಕೆ ರೂ. 06  ರಂತೆ ಖರೀದಿಸಿ ಏಜೆನ್ಸಿಗಳು ಪಾವತಿ ಮಾಡಬೇಕು. ರೈತರಿಂದ ಭತ್ತವನ್ನು ಪಡೆದ ನಂತರ ಅಕ್ಕಿ ಗಿರಣಿ ಮಾಲೀಕರು ಎಲ್ಲಾ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಬೇಕು. ಹಾಗೆ ನಮೂದಿಸುವಾಗ ಗುಣಮಟ್ಟ ಪರಿಶೀಲನಾ ಅಧಿಕಾರಿ ನೀಡಿರುವ ಒಪ್ಪಿಗೆ ಪತ್ರವನ್ನು ಆನ್‌ಲೈನ್‌ನಲ್ಲಿ ಸ್ಕಾö್ಯನ್ ಮಾಡಿ ಅಪ್‌ಲೋಡ್ ಮಾಡಬೇಕು. ಅಕ್ಕಿ ಗಿರಣಿ ಮಾಲೀಕರಿಂದ ಭತ್ತದ ವಿವರ ಲಭ್ಯವಾದ ತಕ್ಷಣ ಖರೀದಿ ಏಜೆನ್ಸಿಗಳು ಭತ್ತವನ್ನು ಸರಬರಾಜು ಮಾಡಿದ ರೈತನಿಗೆ 3 ದಿನಗಳ ಒಳಗಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಬೇಕು. ಯಾವುದೇ ಜಿಲ್ಲೆಯಲ್ಲಿ ಅಕ್ಕಿ ಗಿರಣಿಗಳು ನೋಂದಾಯಿಸದಿದ್ದಲ್ಲಿ, ಪಕ್ಕದ ಜಿಲ್ಲೆಯ ಅಕ್ಕಿ ಗಿರಿಣಿಗಳನ್ನು ಕೂಡ ರೈತರಿಂದ ಖರೀದಿಗೆ ಹತ್ತಿರವಾಗುವಂತೆ ಗಣನೆಗೆ ತೆಗೆದುಕೊಂಡು ನೋಂದಾಯಿಸಲು ಅವಕಾಶ ನೀಡಬೇಕು.  ಅದರಂತೆ ಅಕ್ಕಿ ಗಿರಣಿಗಳನ್ನು ಗುರುತಿಸಲು ಕ್ರಮವಹಿಸಬೇಕು ಹಾಗೂ ಒಂದು ಅಕ್ಕಿ ಗಿರಣಿಗೆ ಒಂದಕ್ಕಿAತ ಹೆಚ್ಚು ಜಿಲ್ಲೆಯಲ್ಲಿ ನೋಂದಾಯಿಸಲು ಕೂಡ ಅವಕಾಶ ನೀಡಬೇಕು. ಜಿಲ್ಲೆಯಲ್ಲಿ ಯಾವುದೇ ಅಕ್ಕಿ ಗಿರಣಿಗಳು ನೋಂದಣಿ ಮಾಡದಿದ್ದಲ್ಲಿ ಪಕ್ಕದ ಜಿಲ್ಲೆಯ ಹತ್ತಿರದ ಅಕ್ಕಿ ಗಿರಣಿಗೆ ಭತ್ತವನ್ನು ಸಾಗಾಣಿಕೆ ಮಾಡಿದ್ದಲ್ಲಿ, ಅಂತಹ ಸಾಗಾಣಿಕಾ ವೆಚ್ಚವನ್ನು ಸಾರ್ವಜನಿಕ ವಿತರಣಾ ಪದ್ಧತಿಯ ನಿರ್ಧರಿತ ದರದಂತೆಯೇ ಜಿಲ್ಲಾ ಖರೀದಿ ಏಜೆನ್ಸಿಯ ಮೂಲಕ ರೈತರಿಗೆ ಪಾವತಿಸಬೇಕು. ಅಕ್ಕಿ ಗಿರಣಿಗಳಲ್ಲಿ ಖರೀದಿ ಸಂದರ್ಭದಲ್ಲಿ ರೈತರಿಂದ ಬಂದಿರುವ ಭತ್ತದ ಗುಣಮಟ್ಟದಲ್ಲಿ ಯಾವುದೇ ಗೊಂದಲಗಳು ಉದ್ಭವಿಸಿದಲ್ಲಿ ಜಿಲ್ಲಾ ಟಾಸ್ಕ್ ಪೋರ್ಸ್ನ ಗ್ರೇಡರ್ ಮೌಲ್ಯಮಾಪನದ ಮೂಲಕ ಬಗೆಹರಿಸಿಕೊಳ್ಳಬಹುದು ಎಂದರು.
ರಾಗಿ ಮತ್ತು ಬಿಳಿಜೋಳ ಖರೀದಿಗೆ ಮಾರ್ಗಸೂಚಿಗಳು
ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯ ಗ್ರೇಡರ್‌ಗಳನ್ನು ನೇಮಿಸಬೇಕು. ಪ್ರತಿ ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆಯ ಗ್ರೇಡರ್‌ಗಳೊಂದಿಗೆ ಆಹಾರ ಧಾನ್ಯಗಳ ಗುಣಮಟ್ಟವನ್ನು ಜಂಟಿಯಾಗಿ ದೃಢೀಕರಿಸಲು ಮೂರನೇ ವ್ಯಕ್ತಿ ಗುಣಮಟ್ಟ ಪರಿಷ್ಕರಣಾ ಸಂಸ್ಥೆಗಳನ್ನು ನಿಯಮಾನುಸಾರ ನೇಮಿಸಿಕೊಳ್ಳಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಎಲ್ಲಾ ಸಂಗ್ರಹಣಾ ಸಂಸ್ಥೆಗಳ ಪರವಾಗಿ ಅಲ್ಪಾವಧಿ ಟೆಂಡರ್ ಕರೆಯಬೇಕು. ಖರೀದಿ ಏಜೆನ್ಸಿಯ ಹಿರಿಯ ಅಧಿಕಾರಿಗಳು ಸಮಯ ವ್ಯರ್ಥ ಮಾಡದೇ ಮೇಲುಸ್ತುವಾರಿಯಾಗಿ ತಪಾಸಣೆ ಕೈಕೊಳ್ಳಬೇಕು. ಹಾಗೂ ಖರೀದಿ ಏಜೆನ್ಸಿಗಳು ರೈತರಿಂದ ಖರೀದಿಸಿದ ರಾಗಿ ಮತ್ತು ಬಿಳಿಜೋಳವನ್ನು ತುಂಬಿಸಲು 50 ಕೆಜಿ ಸಾಮರ್ಥ್ಯದ ಒಮ್ಮೆ ಉಪಯೋಗಿಸಲ್ಪಟ್ಟ ಉತ್ತಮ ಗುಣಮಟ್ಟದ ಗೋಣಿ ಚೀಲಗಳನ್ನು ನ್ಯಾಯಬೆಲೆ ಅಂಗಡಿಗಳಿAದ ಪ್ರತಿ ಚೀಲಕ್ಕೆ ರೂ. 12 ರ ದರದಲ್ಲಿ ಖರೀದಿಸಿ ಉಪಯೋಗಿಸಬೇಕು. ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಗರಿಷ್ಟ 75 ಕ್ವಿಂಟಾಲ್ ರಾಗಿ ಹಾಗೂ 75 ಕ್ವಿಂಟಾಲ್ ಬಿಳಿ ಜೋಳವನ್ನು ಮಾತ್ರ ಖರೀದಿಸಬೇಕು (ಪ್ರತಿ ಎಕರೆಗೆ 15 ಕ್ವಿಂಟಾಲ್‌ನAತೆ) ಎಂದು ರೈಸ್ ಮಿಲ್ ಮಾಲೀಕರಿಗೆ ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ನೇಹಾ ಜೈನ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ ಶೇಖ್, ಜಿಲ್ಲೆಯ ಎಲ್ಲಾ ರೈಸ್ ಮಿಲ್ ಮಾಲೀಕರು, ಮುಖಂಡರು, ಗಂಗಾವತಿ, ಕೊಪ್ಪಳ, ಕಾರಟಗಿ, ಕುಷ್ಟಗಿ, ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error