’ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ ಆಚರಣೆ

ಎರಡನೂರಾ ಐವತ್ತೂ ದಾಸ ಶ್ರೇಷ್ಟರಲ್ಲಿ ಕನಕದಾಸರು ಅತೀ ಶ್ರೇಷ್ಠರು ಎಂದು ವಿಶ್ರೀಕೃ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀಮತಿ ಸಾವಿತ್ರಿ ಮುಜುಂದಾರ ಹೇಳಿದರು. ಅವರು ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಕನಕದಾಸರ ೫೩೦ನೇ ಜಯಂತ್ಯೋತ್ಸವದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೋಂಡು ಮಾತನಾಡಿದರು. ವಾದಿರಾಜರು, ಪುರಂದರದಾಸರ ಜೊತೆಯಲ್ಲಿ  ಕನಕದಾಸರು ಹೆಸರಾಂತ ತ್ರಿವಳಿ ರತ್ನವಾಗಿ ತ್ರಿವೇಣಿ ಸಂಗಮವೆಂದೆ ಖ್ಯಾತ ನಾಮರಾಗಿದ್ದರು. ರಾಜಾಶ್ರಯದಲ್ಲಿ ತಮಗೆ ದೊರೆಯುತ್ತಿದ್ದ ಎಲ್ಲ ವೈಭೋಗಗಳನ್ನು ತ್ಯಜಿಸಿ ಜನಾಶ್ರಯಕ್ಕೆ ಬಂದ ಮಹಾನ್ ದಾರ್ಶನಿಕ ಸಂತ ಕನಕದಾಸ, ಎಂದು ಹೇಳಿದರು. ತಮ್ಮ ತತ್ವಾದರ್ಶಗಳನ್ನು ದಾಸ ಸಾಹಿತ್ಯಗಳಲ್ಲಿ ಅಳವಡಿಸಿ ಆ ಕಾಲದಲ್ಲೇ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಐದು ಶತಮಾನಗಳು ಸರಿದರು ಅವರ ತತ್ವಾದರ್ಶಗಳು ಇನ್ನು ಜೀವಂತವಾಗಿರುವುದು ಅವರ ಜೀವನಾದರ್ಶಕ್ಕೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಸರ್ಕಾರಗಳು ಮಹಾನ ವ್ಯಕ್ತಿಗಳ ಆಚರಣೆಗಳನ್ನು ಕೇವಲ ಔಪಚಾರಿಕವಾಗಿ ಆಚರಿಸುತ್ತಿಲ್ಲ ಬದಲಾಗಿ ಜೀವನದ ಎಲ್ಲಾ ಕಾಲ ಘಟ್ಟಗಳಲ್ಲಿ ಬುಧ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ, ಕನಕದಾಸರ ಸಾಮಾಜಿಕ ಜೀವನದ ಚಿಂತನೆ ಮತ್ತು ಪರಿಕಲ್ಪನೆಗಳನ್ನು ಎಲ್ಲಾ ಪರಂಪರೆಗೂ ತಿಳಿಸುವ ಪ್ರಯತ್ನವಾಗಿದೆ ಎಂದರು. ಕನಕದಾಸರು ಯಾವೊಂದು ಮತಕ್ಕೂ ಸೀಮಿತವಾಗಿರದೆ ಮನು ಕುಲಕ್ಕೆ ಮಾದರಿಯಾದವರು, ಕನಕದಾಸರು ತಮ್ಮ ದಾಸ ಸಾಹಿತ್ಯದಲ್ಲಿ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಎಂದು ಉತ್ತರಿಸಲಾಗದ ಪ್ರಶ್ನೆ ಕೇಳಿದ್ದಾರೆ ಎಂದರು. ಸಮಾಜದಲ್ಲಿ ಜಾತಿಮತ, ಮೇಲು ಕೀಳು, ವರ್ಗ ಸಂಘರ್ಷ ಗಳಂತಹ ಅನಿಷ್ಠ ರೂಡಿ ಸಂಪ್ರದಾಯಗಳಿಗೆ ಮಂಗಳ ಹಾಡಲು ಪ್ರಯತ್ನಿಸಿದರು. ಪುರುಷನಾದವನಿಗೆ ಉದ್ಯೋಗವೇ ಭೂಷಣ ಎಂದು ತಿಳಿದಿದ್ದ ಅವರು ಕರ್ಮವಿಲ್ಲದ ಗಂಡು ಕರಿ ಒನಕೆಯ ತುಂಡು ಎಂದು ತಮ್ಮ ಸಾಹಿತ್ಯದಲ್ಲಿ ತಿಳಿಸಿದ್ದಾರೆ.  ಸರಳ ಜೀವನ ಶೈಲಿ ದಾನ ಧರ್ಮಗಳ ಪಾಲನೆಯಿಂದ ಕನಕದಾಸರು ಜೀವನ ಸಾರ್ಥಕತೆಯನ್ನು ಕಂಡುಕೊಂಡರು ಎಂದು ಅವರು ಹೇಳಿದರು.  ಕಾರ್ಯಕ್ರಮದ ಮತ್ತೋರ್ವ ಮುಖ್ಯ ಅಥಿತಿಯಾಗಿ ಪಾಲ್ಗೋಂಡು ಮಾತನಾಡಿದ ಮಾನ್ಯ ಸಿಂಡಿಕೇಟ್ ಸದಸ್ಯರಾದ ಅಲ್ಲಾವಲಿ ಭಾಷಾ ಕೋಲ್ಮಿ, ಕನಕದಾಸರು ಮಾದರಿ ಸಮಾಜದ ಕಲ್ಪನೆಯನ್ನು ಶತಮಾನಗಳ ಹಿಂದೆಯೆ ಕಂಡುಕೊಂಡಿದ್ದರು, ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಕಾರ್ಯವಾಗಬೇಕು ಅದರಿಂದ ಆದರ್ಶ ಸಾಮಾಜ ನಿರ್ಮಾಣವಾಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ನೀಲಪ್ಪ ಹುಚ್ಚಣನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಶ್ರೀ.ಕೃ.ವಿ,ವಿ ಸ್ನಾತಕೋತ್ತರ ಕೇಂದ್ರ, ಕೊಪ್ಪಳದ ವಿಶೇಷಾಧಿಕಾರಿಗಳಾದ ಡಾ. ಮನೋಜ್ ಡೊಳ್ಳಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಬಸವರಾಜ ಭೀಮರಾಯ ಸ್ವಾಗತಿಸಿದರು. ಶ್ರೀ ಪಾಂಡುರಂಗನಗೌಡ ಹೊನ್ನಾಲಿ ನಿರೂಪಿಸಿದರು. ಪ್ರಾರ್ಥನಾ ಗೀತೆಯನ್ನು ವಿದ್ಯಾರ್ಥಿನಿ ಕು. ಲಕ್ಷ್ಮೀ ಹಾಡಿದರು, ಪ್ರಸನ್ನ ಮುತ್ತಳ್ಳಿ ವಂದಿಸಿದರು. ವಿವಿಧ ವಿಭಾಗಗಳ ಉಪನ್ಯಾಸಕರಾಧ ತಿಪ್ಪೇಶ್ , ವಿನಾಯಕ್, ಶರಣಪ್ಪ, ಅಡಿವೆಪ್ಪ, ಮುನಿರಾಜು, ಹೆಮಾವತಿ ಮೆಣಸಗಿ, ಶೃತಿ ದೇಸಾಯಿ, ಸಂತೋಷ್ ಚಿನ್ನಣ್ಣನವರ್, ಗ್ರಂಥಪಾಲಕರಾದ ವಿನೋದ್ ರಾಜ್, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Please follow and like us:
error