fbpx

ಕನಕಗಿರಿ ಬಳಿ ಬೈಕ್ ಮುಖಾಮುಖಿ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಕೊಪ್ಪಳ: ಜಿಲ್ಲೆಯ ಕನಕಗಿರಿ ಬಳಿ ಎರಡು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತರನ್ನು ಇಂಗಳದಾಳದ ದ್ಯಾಮಣ್ಣ (೩೩) ಹಾಗೂ ಸಿಂಧನೂರಿನ ಬಂಗಾಳಿಗಿಡದ ಕ್ಯಾಂಪ್‌ನ ಗೋಲಕ್ ಬಿಕೊ (೩೫) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಬಂಗಾಳಿಗಿಡದ ಕ್ಯಾಂಪ್‌ನ ವಿಜಯ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ದ್ಯಾಮಣ್ಣ ಕನಕಗಿರಿಯಿಂದ ಕೊಪ್ಪಳಕ್ಕೆ ಮತ್ತು ಬಂಗಾಳಿಗಿಡದ್ ಕ್ಯಾಂಪ್‌ನ ಇಬ್ಬರು ಕನಕಗಿರಿಗೆ ತೆರಳುವಾಗ ಕನಕಗಿರಿಯ ಹೊರವಲಯದಲ್ಲಿ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ‌ಕನಕಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Please follow and like us:
error
error: Content is protected !!