fbpx

ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ-ಶಂಕರ ಬೆಳ್ಳುಬ್ಬಿ

ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣ ಪಡೆದು ಒಳ್ಳೆಯ ಸಂಸ್ಕಾರ, ಮೌಲ್ಯ ಪಡೆಯುವುದರ ಮೂಲಕ ತಂದೆ ತಾಯಿಯವರಿಗೆ ಉತ್ತಮ ಮಕ್ಕಳಾಗಿ ಬೆಳೆಯಬೇಕು ಅಂದಾಗ ನಮ್ಮ ಬದುಕು ಸಾರ್ಥಕವಾಗುವುದು ಎಂದು ಹುಬ್ಬಳ್ಳಿ ಧಾರವಾಡದ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಶಂಕರ ಬೆಳ್ಳುಬ್ಬಿ ಸಲಹೆ ನೀಡಿದರು. ನಗರದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಜೀವನದರ್ಶನವೆಂಬ ವಿಶೇಷ ಮೌಲ್ಯಾಧಾರಿತ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿ ಉಪನ್ಯಾಸ ನೀಡುತ್ತ ವಿದ್ಯಾರ್ಥಿಗಳ ಉದ್ಧೇಶಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನ ಸದಾ ಅಧ್ಯಯನಶೀಲತೆಯಿಂದ ಕೂಡಿರಬೇಕು. ಉತ್ತಮ ಪ್ರಯತ್ನ ಮತ್ತು ಜ್ಞಾನದ ಹಸಿವು ಇದ್ದಾಗ ಮಾತ್ರ ಉನ್ನತವಾದ ಯಶಸ್ಸು ಗಳಿಸಲು ಸಾಧ್ಯಾವಾಗುವುದು. ನಾವು ಕೇವಲ ಯಶಸ್ಸು ಗಳಿಸಲು ವ್ಯಕ್ತಿಗಳಿಗೆ ಗುಣಗಾನ ಮಾಡುವ ವ್ಯಕ್ತಿಗಳಾಗಿರದೇ ನಾವು ಸಹ ಜೀವನದಲ್ಲಿ ಯಶಸ್ಸು ಗಳಿಸಿ ಪ್ರಶಂಸಗೆ ಒಳಗಾಗುವ ವ್ಯಕ್ತಿಗಳಾಗಬೇಕು. ಬಡತನ ಎಂದೂ ಸಹ ಅಧ್ಯಯನಕ್ಕೆ ಅಡ್ಡಿ ಬರುವುದಿಲ್ಲ. ಬಡತನವನ್ನು ಬಂಡವಾಳವಾಗಿಸಿಕೊಂಡು ನಾವು ಮೆಟ್ಟಿ ನಿಲ್ಲಬೇಕು. ಸ್ವನಂಬಿಕೆ, ಸತತವಾದ ಕಠಿಣ ಪರಿಶ್ರಮದಿಂದ ಎಂತಹ ಯಶಸ್ಸು ಕೂಡ ಸಾಧ್ಯ. ಓದಿನ ಮಾರ್ಗಗಳನ್ನು ಸರಿಯಾಗಿ ಅರಿತು ಸಾಧನೆಗೈಯಬೇಕು. ಎಲ್ಲ ಸೌಲಭ್ಯಗಳಿದ್ದೂ ಸಾಧನೆ ಮಾಡುವುದು ದೊಡ್ಡ ಸಾಧನೆ ಅಲ್ಲ. ಸೌಲಭ್ಯದಿಂದ ವಂಚಿತರಾಗಿದ್ದರೂ ಸಮಸ್ಯೆಗಳನ್ನು ಸ್ವೀಕರಿಸಿ ಸಾಧಿಸುವುದು ನಿಜವಾದ ಸಾಧನೆ ಎಂದರು.
ನಂತರ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಇರುವ ವಿಜೇತ ಸ್ಫರ್ಧಾತ್ಮ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಸ್ಫರ್ಧಾರ್ಥಿಗಳ ಜೊತೆ ಏರ್ಪಡಿಸಿದ ಸಂವಾದದಲ್ಲಿ ಭಾಗವಹಿಸಿ ಸ್ಫರ್ಧಾರ್ಥಿಗಳ ಅನೇಕ ಪ್ರಶ್ನೆಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಂ.ಎಸ್.ದಾದ್ಮಿ, ಪದವಿ ಪೂರ್ವ ಪ್ರಾಚಾರ್ಯ ಬಿ. ಶ್ರೀನಿವಾಸ ಹಾಗೂ ಗವಿಸಿದ್ಧೇಶ್ವರ ಪದವಿ, ಪದವಿ ಪೂರ್ವ, ಬಿ.ಎಡ್, ಶ್ರೀಮತಿ ಶಾರದಮ್ಮ ಕೊತಬಾಳ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಆಯೋಜಕರಾದ ಶರಣಬಸಪ್ಪ ಬಿಳೆಯಲಿ ಅತಿಥಿಗಳ ಪರಿಚಯ ಮಾಡಿದರು. ಡಾ. ಚನ್ನಬಸವ ಜೀವನದರ್ಶನ ಕಾರ್ಯಕ್ರಮದ ಮಾಹಿತಿ ನೀಡಿದರು. ಕು.ವರ್ಷಿಣಿ ಸಂಕಲಾಪೂರ ಪ್ರಾರ್ಥಿಸಿ ಶಾಂತಿ ಮಂತ್ರ ಹೇಳಿದರು. ಡಾ. ನಾಗರಾಜ ದಂಡೋತಿ ಹೆಬ್ಬಾಳ ನಿರೂಪಿಸಿದರು. ಪ್ರಾಧ್ಯಪಕ ಟಿ.ಜಿ.ದೇಸಾಯಿ ವಂದಿಸಿದರು.

Please follow and like us:
error
error: Content is protected !!