ಕಂಬಿ ಇಲ್ಲದೇ ರೈಲು ಬಿಡುವ ರಾಯರಡ್ಡಿ – ಸಂಸದ ಸಂಗಣ್ಣ ಕರಡಿ

ಸೇತುವೆ ಕಾಮಗಾರಿಗೆ ಭೂಮಿ ಪೂಜೆ


ಕೊಪ್ಪಳ: ಯಲಬುರ್ಗಾ ತಾಲೂಕಿನಾದ್ಯಂತ ಪ್ರತಿಯೊಂದು ಗ್ರಾಮಗಳಲ್ಲಿಯೂ ರಾಯರಡ್ಡಿ ಬ್ಯಾನರ್ ಹಾಕಿಸಿಕೊಂಡು ಪ್ರಚಾರ ಗಿಟ್ಟಿಸಿಕೋಳ್ಳುತ್ತಿದ್ದಾರೆ. ಹೋದಲ್ಲೆಲ್ಲ ಕಂಬಿ ಇಲ್ಲದೇ ರೈಲು ಓಡಿಸುವುದು ಇವರ ಕಾಯಕವಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಯಲಬುರ್ಗಾ ತಾಲೂಕಿನ ನಿಟ್ಟಾಲಿ ಕ್ರಾಸ್‌ಬಳಿ ಭಾನಪೂರ-ಗದ್ದನಕೇರಿಯ ರಾಷ್ಟ್ರಿಯ ಹೆದ್ದಾರಿ ೩೬೭ ರಲ್ಲಿ ಹಿರೇಹಳ್ಳ ಸೇತುವೆ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಅನುಧಾನ ಹೊಂದಿರುವ ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮದೇ ಪ್ರಚಾರಕ್ಕೆ ಬಳಸಿಕೋಳ್ಳುತ್ತಿದ್ದಾರೆ. ಯಾವುದೇ ಕಾರ್ಯಕ್ರಮ ಮಾಡಿಕೊಳ್ಳಲ್ಲಿ ಅದಕ್ಕೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಬಂದಿರುವ ಅನುದಾನಗಳ ಮಾಹಿತಿ ಜನರಿಗೆ ತಿಳಿಸಬೇಕು ಎಂದರು.
ಕೇಂದ್ರ ಸರ್ಕಾರ ಕಾಟಾಚಾರಕ್ಕೆ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ. ಪ್ರತಿಯೊಂದು ಕಾಮಗಾರಿಗನ್ನು ದೂರ ದೃಷ್ಠಿ ಇಟ್ಟುಕೊಂಡು ಯೋಜನೆ ರೂಪಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಹೆಚ್ಚಾಗಬಹುದಾದ ಬೇಡಿಕೆಯನ್ನ ಗಮನದಲ್ಲಿಟ್ಟಿಕೊಂಡು ಈಗಲೇ ರೂಪರೇಶ ತಯಾರಿಸಿ ಕಾಮಗಾರಿ ಹಮ್ಮಿಕೋಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾನಪೂರ-ಗದ್ದನಕೇರಿಯ ರಾಷ್ಟ್ರಿಯ ಹೆದ್ದಾರಿ ೩೬೭ ರಲ್ಲಿ ತಳಬಾಳ ಹಾಗೂ ನಿಟ್ಟಾಲಿ ಗ್ರಾಮದ ಬಳಿ ಇರುವ ಸೇತುವೆ ನಿರ್ಮಾಣಕ್ಕೆ ೨೦೧೭-೧೮ ನೇ ಸಾಲಿನ ೨೨ ಕೋಟಿ ರೂ. ಗಳನ್ನು ಸೇತುವೆಕಾಮಗಾರಿಗೆ ಮಂಜೂರು ಮಾಡಲಾಗಿದೆ ಎಂದರು.
ಸಂದರ್ಭದಲ್ಲಿ ನಂತರದಲ್ಲಿ ವಿ.ಪ ಮಾಜಿ ಸದಸ್ಯ ಹಾಲಪ್ಪ ಹಾಚಾರ, ಕುಕನೂರ ಪ,ಪಂ ಸದಸ್ಯರಾದ ಶಂಭು ಜೋಳದ, ಶಿವಕುಮಾರ ನಾಗಲಾಪುರಮಠ, ಪ್ರಭು ಆಚಾರ, ಮಾರುತಿ ಗವರಾಳ, ಬಸವನಗೌಡ ತೊಂಡಿಹಾಳ, ಮಂಜುನಾಥ ನಾಡಗೌಡ್ರು, ಶರಣಪ್ಪ ಬಣ್ಣದಬಾವಿ, ಕಪತಪ್ಪ ಅಂಗಡಿ, ಗ್ರಾ.ಸ ದಸ್ಯರಾದ ಬೀರಪ್ಪ ಕಡೆಗಾರ್, ಈರಪ್ಪ ಅಂಗಡಿ, ಶಿವಣ್ಣ ಮುತ್ತಾಳ, ಯಲ್ಲಪ್ಪ ಅಂಗಡಿ ಸೇರಿದಂತೆ ಇತರರು ಇದ್ದರು.

Please follow and like us:
error