ಕಂಬಳಿಯವರಿಗೆ ಪಿಎಚ್.ಡಿ ಪ್ರಧಾನ


ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ನಿಂಗಪ್ಪ ಕಂಬಳಿಯವರು ಡಾ.ಶರಣಪ್ಪ ಮಾಳಗಿಯವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಅಕ್ಕ ಅನ್ನಪೂರ್ಣತಾಯಿ : ಸಾಹಿತ್ಯಿಕ ಅಧ್ಯಯನ ಮಹಾಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರ್ಗಿ ಕನ್ನಡ ಅಧ್ಯಯನ ಸಂಸ್ಥೆಯಿಂದ ಪಿಎಚ್.ಡಿ ಪದವಿ ಪ್ರಧಾನ ಮಾಡಲಾಯಿತು.
ಹಿರಿಯ ಸಾಹಿತಿಗಳಾದ ಎಚ್.ಎಸ್.ಪಾಟೀಲ, ಅಲ್ಲಮಪ್ರಭು ಬೆಟ್ಟದೂರು, ವಿಠ್ಠಪ್ಪ ಗೋರಂಟ್ಲಿ, ಬಸವರಾಜ ಆಕಳವಾಡಿ, ಎ.ಎಂ.ಮದರಿ, ಈಶ್ವರ ಹತ್ತಿ, ಡಾ.ಮಹಾಂತೇಶ ಮಲ್ಲನಗೌಡರ, ಸಾವಿತ್ರಿ ಮುಜುಂದಾರ, ಡಾ.ಸಿ.ಬಿ.ಚಿಲ್ಕರಾಗಿ, ಡಿ.ಎಂ.ಬಡಿಗೇರ, ವಿ.ಬಿ.ರೆಡ್ಡೆರ, ವೀರಣ್ಣ ನಿಂಗೋಜಿ, ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಿ.ಎಸ್.ಗೋನಾಳ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಾಜಶೇಖರ ಅಂಗಡಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ ಜುಮ್ಮಣ್ಣನವರ್, ಶರಣು ವಿಶ್ವವಚನ ಪೌಂಡೇಶನ್ ಜಿಲ್ಲಾಧ್ಯಕ್ಷರಾದ ಅರುಣಾ ನರೇಂದ್ರ, ರಾಜ್ಯ ವಿಕಲಚೇತನರ ನೌಕರರ ಸಂಘದ ರಾಜ್ಯಾಧ್ಯಕ್ಷರ ಬೀರಪ್ಪ ಅಂಡಗಿ, ಜಿಲ್ಲಾ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿಯರಾದ ಬಿ.ಎಫ್.ಬೀರನಾಯ್ಕರ, ಪೊಲೀಸ್ ಇಲಾಖೆಯ ಅನೀಲ ಕುಮಾರ ಕಂಬಳಿ ಹಾಗೂ ಇನ್ನು ಮುಂತಾದವರು ಅಭಿನಂದಿಸಿದ್ದಾರೆ.

Please follow and like us:
error