ಕಂಕಣ ಸೂರ್ಯಗ್ರಹಣದ ಬಗ್ಗೆ ಬ್ರೇಕ್ ಥ್ರೂ  ಸೈನ್ಸ್  ಸೊಸೈಟಿಯ ಯಿಂದ ಗ್ರಹಣ ವೀಕ್ಷಣೆ. 

Koppal ಕೊಪ್ಪಳದ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನೂರಾರು ವಿದ್ಯಾರ್ಥಿ ಗಳು ಮತ್ತು ಶಿಕ್ಷಕರು    ಸೇರಿ ಗ್ರಹಣ ವನ್ನು ವೀಕ್ಷಿಸಿ ದರು ಮತ್ತು ಗ್ರಹಣ ದ ಸಮಯದಲ್ಲಿ ಇಡ್ಲಿ ತಿನ್ನುವದರ ಮೂಲಕ ಮೂಢನಂಬಿಕೆ ವಿರುದ್ಧ ಚಳುವಳಿಯಾಗಿ ರೂಪಗೊಂಡಿತು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆ ಗಿಣಗೇರಿ ಯ ಹೆಡ್ ಮಾಸ್ಟರ್ ಅದ ಮಹಾಂತೇಶ್ ಚೆನ್ನಿ ನಾಯಕ ರವರು ಮಾತನಾಡಿ “ಇದು ಪ್ರಕೃತಿಯಲ್ಲಿ ನಡೆಯಲಿರುವ ಅಪರೂಪದ ವಿದ್ಯಮಾನ . ಸೌರಮಂಡಲದ ಕೇಂದ್ರವಾಗಿರುವ ಸೂರ್ಯನ ಸುತ್ತ ಭೂಮಿ ಸುತ್ತುವುದು ಹಾಗೆಯೇ ಚಂದ್ರ ಭೂಮಿಯ ಸುತ್ತ ಸುತ್ತುವ ಸಂದರ್ಭದಲ್ಲಿ ಸೂರ್ಯ , ಚಂದ್ರ , ಭೂಮಿ ಒಂದೇ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಉಂಟಾಗುತ್ತದೆ . ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋಗುವಾಗ ಸೂರ್ಯನ ಬೆಳಕನ್ನು ಚಂದ್ರ ತಡೆಯುವುದರಿಂದ ಭೂಮಿಯಲ್ಲಿ ಕತ್ತಲಾವರಿಸುತ್ತದೆ . ಈ ಬಾರಿಯ ಕಂಕಣ ಸುರ್ಯಗ್ರಹಣ ಸೌದಿ ಅರೇಬಿಯಾ , ಖತಾರ್ , ಯುಎಇ , ಒಮಾನ್ , ಭಾರತ , ಶ್ರೀಲಂಕ , ಮಲೇಶಿಯಾ , ಇಂಡೋನೇಶಿಯ , ಸಿಂಗಾಪುರ , ಉತ್ತರ ಮರಿಯಾನ ದ್ವೀಪಗಳು ಮತ್ತು ಗ್ರಾಮ ದೇಶಗಳಲ್ಲಿ ಕಾಣಿಸಲಿದೆ . ವಿಜ್ಞಾನ ಪ್ರಿಯರು ಈ ಘಟನೆಯ ವೀಕ್ಷಣೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ . ದಕ್ಷಿಣ ಭಾರತದಲ್ಲಿ ಶೇ 100 ರಿಂದ ಶೇ 70ರಷ್ಟು ಕಾಣಲಿದೆ . ಗ್ರಹಣ ಬೆಳಗ್ಗೆ 8 . 06ಕ್ಕೆ ಪ್ರಾರಂಭವಾಗಿ 9 . 29ಕ್ಕೆ ಗರಿಷ್ಠ ತಲುಪಿ ಬೆಳಗ್ಗೆ 11 . 11ಕ್ಕೆ ಮುಕ್ತಾಯಗೊಳ್ಳಲಿದೆ ಇದನ್ನು  ವೀಕ್ಷಿಸಬಹುದು .
ಚಂದಗ್ರಹಣವನ್ನು ಬರಿಗಣ್ಣಿನಿಂದ ನೋಡುವಂತೆ  ಸುರಕ್ಷಿತ ಕನ್ನಡಕಗಳ ಮೂಲಕ , ಏನ್ ಹೋಲ್ ಕ್ಯಾಮರ , ಬಾಲ್ ಮಿರರ್ ಮೂಲಕ ಸೂರ್ಯನ ಬೆಳಕನ್ನು ಪರದೆ ಅಥವಾ ಗೋಡೆಯ ಮೇಲೆ ಮೂಡಿಸಿ ಗ್ರಹಣವನ್ನು ವೀಕ್ಷಿಸಬಹುದು” .
ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ಸಂಚಾಲಕರು ಅದ ದೇವರಾಜ ಹೊಸಮನಿ ಮಾತನಾಡಿ
 “
ಗ್ರಹಣದ ವೇಳೆ ಏನನ್ನೂ ಸೇವಿಸಬಾರದು , ನೀರು ಕುಡಿಯಬಾರದು ಎಂಬ ನಂಬಿಕೆಗಳಿವೆ . ಆಹಾರ ವಿಷವಾಗುತ್ತದೆ ಎಂದು ಜನ ನಂಬುತ್ತಾರೆ . ಆದರೆ ಗ್ರಹಣವು ಪ್ರಾಕೃತಿಕವಾಗಿ ನಡೆಯುವ ವಿಧ್ಯಮಾನ . ಇದನ್ನು ಕೌತುಕದಿಂದ ವೀಕ್ಷಿಸಬೇಕೆಂದು , ಅದರಿಂದ ಯಾವುದೇ ಹಾನಿಯಾಗುವುದಿಲ್ಲವೆಂದು ತಿಳುವಳಿಕೆ ಮೂಡಿಸಲೂ ಬ್ರೇಕ್‌ಥ್ ಸೈನ್ಸ್ ಸೊಸೈಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ . ಬ್ರೇಕ್‌ಥ್ಯ ಸೈನ್ಸ್ ಸೊಸೈಟಿಯು ದೇಶದಾದ್ಯಂತ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಿದೆ .
ಕೊಪ್ಪಳ  ಜಿಲ್ಲೆಯಲ್ಲಿ  ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣ ದಲ್ಲಿ  ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು . ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು , ವಿದ್ಯಾರ್ಥಿಗಳು ಭಾಗವಹಿಸಿದ್ದರು,
Please follow and like us:
error