ಔರಂಗಾಬಾದ್‌ ಅಪಘಾತ 17  ವಲಸೆ ಕಾರ್ಮಿಕರ ಸಾವು: ಸರ್ಕಾರಿ ಹತ್ಯೆಗಳು–ಜೆ ಭಾರಧ್ಹಾಜ್‌

 

ಗಂಗಾವತಿ:  ಬೆಳಗಿನ ಜಾವ ಔರಂಗಾಬಾದ್‌-ಜಾಲಣದಲ್ಲಿ ಗೂಡ್ಸ್‌ ರೈಲ್ವೇ ಅಪಘಾತದಲ್ಲ 17 ಜನ ವಲಸೆ ಕಾರ್ಮಿಕರು ಮೃತರಾಗಿದ್ದು, ಇನ್ನೂ ಕೆಲವು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಘಟನೆಗೆ ಕಾರಣ ಕೇಂದ್ರ ಸರ್ಕಾರ. ಈ ಸಾವುಗಳನ್ನು ಅಖಿಲ ಭಾರತ ಪ್ರಜಾ ವೇದಿಕೆ ಸರ್ಕಾರಿ ಹತ್ಯೆಗಳೆಂದೇ ಭಾವಿಸುತ್ತದೆ ಎ೦ದು ಎ.ಐ.ಪಿ.ಎಫ್‌ ಸ೦ಚಾಲಕ ಭಾರಧ್ವಾಜ್‌ ಪ್ರಕಟಣೆಯಲ್ಲ ಆರೋಪಿಸಿದ್ದಾರೆ.

ದಿನಾ೦ಕ: ೦8.೦೮.೨೦೭೦ ರಂದು ಬೆಳಗಿನ ಜಾವ ನೂರಾರು ಕಿಲೋ ಮೀಟರ್‌ ರೈಲ್ಛೇ ಹಳಿಗಳ ಮೇಲೆ ನಡೆದು ಬ೦ದ ವಲಸೆ ಕಾರ್ಮಿಕರು ನಡೆಯಲು ಶಕ್ತಿಯಿಲ್ಲದೇ ಹಳಿಗಳ ಮೇಲೆ ಮಲಗಿದ್ದರು.ಹಳಿಗಳ ಮೇಲೆ ತಾವು ನಡೆಯಬೇಕಾದರೆ. ಯಾವುದೇ ರೈಲುಗಳು ಸಂಚರಿಸದ ಕಾರಣ ದಣಿದು

ಮಲಗಿದ್ದರು.ಕೇಂದ್ರ ಸರ್ಕಾರ ವಲಸೆ ಕಾರ್ಮಿಕರ ಬಗ್ಗೆ ಕಾಳಜಿ ತೋರಿಸದೇ ನೂರಾರು ಜನ ವಲಸೆ ಕಾರ್ಮಿಕರು ತಮ್ಮ ಸ್ವಸ್ಥಳಕ್ಕೆ ಸೇರುವ ನಿಟ್ಟಿನಲ್ಲಿ ರಸ್ತೆಗಳಲ್ಲಿ ಬಿದ್ದು ಸತ್ತಿದ್ದಾರೆ. ವಲಸೆ ಕಾರ್ಮಿಕರ ಸಾವುಗಳು ಕೊರೋನಾ

ಶಂಕಿತರ ಸಾವುಗಳಗಿ೦ತಲೂ ನಾಲ್ಕು ಪಟ್ಟು ಹಾಸ್ತಿಯಾಗಿವೆ. ಇವೆಲ್ಲ ಸಾವುಗಳಿಗೂ ನಮ್ಮನ್ನಾಳುವ ರಾಜ್ಯ ಹಾಗೂ ಕೇಂದ್ರ ಸರ್ಕಾರವೇ ನೇರ ಕಾರಣ. ಈ ಸಾವುಗಳೆಲ್ಲವೂ ಸರ್ಕಾರಿ ಹತ್ಯೆಗಳೆಂದು ಎ.ಐ.ಪಿ.ಎಫ್‌ (ಅಖಿಲ ಭಾರತ ಪ್ರಜಾ ವೇದಿಕೆ) ಸರ್ಕಾರದ ಮೇಲೆ ಮಾನವ ಹಕ್ಕುಗಳ ಆಯೋಗದ ಮುಂದೆ ದೂರು ಸಲ್ಲಿಸಲಿದೆ. ಎಂದು ಜಿಲ್ಲಾ ಸಂಚಾಲಕ ಜೆ.ಭಾರದ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error