ಒಂದೇ ಕುಟಂಬದ ಆರು ಜನ ಆತ್ಮಹತ್ಯೆ

Koppal: ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಕೊಪ್ಪಳದ ಮೇತಗಲ್ ಗ್ರಾಮದಲ್ಲಿ ನಡೆದಿದೆ. ಶೇಖರಯ್ಯ ಬಿಡನಾಳ ಕುಟುಂಬದ ಹೆಂಡತಿ ನಾಲ್ವರು ಹೆಣ್ಣು ಮಕ್ಕಳು ಸಹಿತ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಗೆ ಮಕ್ಕಳಿಗೆ ವಿಷ ಉಣಬಡಿಸಿ ನಂತನ ತಾನೂ ನೇಣಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಪತ್ನಿ ಜಯಮ್ಮ, ಮಕ್ಕಳಾದ ಬಸಮ್ಮ, ಗೌರಮ್ಮ, ಸಾವಿತ್ರಿ, ಪಾರ್ವತಿ ಎಂಬ ಹೆಣ್ಣುಮಕ್ಕಳು ತಾಯಿಯೊಂದಿಗೆ ವಿಷ ಸೇವಿಸಿ ಸಾವಿಗೀಡಾಗಿದ್ದಾರೆ. ನಿನ್ನೆ ಸಂಜೆಯಿಂದ ಮನೆಯ ಬಾಗಿಲು ಹಾಕಿಕೊಂಡಿದ್ದ ಇವರು ಬೆಳಗಾಗುವುದರಲ್ಲಿ ಇಹಲೋಕ ತ್ಯಜಿಸಿದ್ದಾರೆ. ಈ ದುರ್ಘಟನೆ ಕಂಡು ಇಡೀ ಗ್ರಾಮ ಸ್ಮಾಶಾನ ಮೌನವಾಗಿದೆ. ಇನ್ನು ಈ ಘಟನೆಗೆ ನಾಲ್ವರು ಹೆಣ್ಣು ಮಕ್ಕಳ ಪೈಕಿ ಇಬ್ಬರನ್ನ ಮದುವೆ ಮಾಡಿಕೊಡಲಾಗಿತ್ತಂತೆ, ಅತ್ತ ಗಂಡನ ಮನೆಯಲ್ಲಿ ಕಿರಿಕಿರಿ ಇತ್ತು ಎನ್ನಲಾಗುತ್ತಿದೆ. ಇತ್ತ ಊರಲ್ಲಿ ಸಹೋದರರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಅಂತ ಹೇಳಲಾಗುತ್ತಿದೆ. ಮತ್ತೊಂದು ಮಾಹಿತಿ ಪ್ರಕಾರ ಬ್ಯಾಂಕ್ ಹಾಗೂ ಕೈಗಡವಾಗಿ ಐದಾರು ಲಕ್ಷ ಸಾಲ ಮಾಡಿಕೊಂಡಿದ್ರು,ಈ ಎಲ್ಲಾ ಘಟನೆಗಳಿಂದ ಮಾನಸಿಕವಾಗಿ ಜರ್ಜರಿತರಾಗಿ ಈ ರೀತಿ ಮಾಡಿಕೊಂಡಿರಬಹುದು ಎನ್ನಲಾಗಿದೆ. ಸ್ಥಳಕ್ಜೆ ಎಸ್ಪಿ ರೇಣುಕಾ ಸುಕುಮಾರ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದು ಪೊಸ್ಟ್ ಮಾಟಮ್ ರಿಪೋರ್ಟ್ ಬಂದ ನಂತರ ಸತ್ಯ ಸತ್ಯತೆ ಗೊತ್ತಾಗಲಿದೆ ಎನ್ನುತ್ತಿದ್ದಾರೆ.