ಫೋನ್ ಕರೆಗೆ ಸ್ಪಂದಿಸಿದ ಕೊಪ್ಪಳದ Food DD : ಬಡ ವೃದ್ದೆಯರಿಗೆ ಸಿಕ್ಕ ಧಾನ್ಯ

ಇಡಿ ದೇಶವೆ ಲಾಕ್ ಡೌನ್ ಆದ ಸಂದರ್ಭದಲ್ಲಿ ಆಹಾರಕ್ಕೆ ಬಡಜನರ ಗೋಳು ಕೇಳುವವರು ಯಾರು..? ಇಂತಹ ಸಮಯದಲ್ಲಿ ಗಂಗಾವತಿ
ನಗರದ ಶರಣ ಬಸವೇಶ್ವರ ಕ್ಯಾಂಪ್ ಆಶ್ರಯ ಕಾಲೋನಿಯಲ್ಲಿನ ನಿವಾಸಿ ಫಾತಿಮಾ ಎನ್ನುವ ವೃದ್ದೆಗೆ ಆಹಾರ ಇಲಾಖೆಯು ಅವರ ಹೊಸ ಕಾರ್ಡ್ ಅಪ್ಲಿಕೇಶನ್ ಹಾಕಿದ್ದರು ಅದು ನೊಂದಾಯಿತ ವಾಗಿದ್ದರು ಸಹ ಇಲ್ಲಿನ ನ್ಯಾಯಬೆಲೆ ಅಂಗಡಿಯ ಮಾಲೀಕನ ಅಣ್ಣ ಅದು ಇನ್ನೂ ನೊಂದಾವಣೆ ಯಾಗಿರುವುದಿಲ್ಲ ತಮಗೆ ಧಾನ್ಯಗಳನ್ನ ಕೊಡುವುದಿಲ್ಲ ಎಂದು ಹೇಳಿದ್ದ. ಅದನ್ನ ಗಮನಿಸಿದ ಕಾಲೋನಿಯ ನಿವಾಸಿಗಳು ಆಹಾರ ಇಲಾಖೆಯ ಶಿರಸ್ತದ್ದಾರ HA ಬಗಲಿ ಯವರನ್ನ ಸಂಪರ್ಕಿಸಿದರೆ ಅವರು ಸಹ ವೃದ್ದೆಯ ನೆರವಿಗೆ ಬರಲಿಲ್ಲ. ನೇರವಾಗಿ ಆಹಾರ ಇಲಾಖೆಯ ಉಪ ನಿರ್ದೇಶಕರಾದ ನಾರಾಯಣ ರೆಡ್ಡಿಯವರಿಗೆ ದೂರವಾಣಿಯ ಮೂಲಕ ಕರೆ ಮಾಡಿದಾಗ ಆ ಕರೆಗೆ ಸ್ಪಂದಿಸಿದ DD ಯವರು ವೃದ್ದೆಯ ನೆರವಿಗೆ ಬಂದು ಆಹಾರ ಧಾನ್ಯ ಗಳನ್ನ ವಿತರಿಸುವ ಕೆಲಸ ಮಾಡಿದ್ದಾರೆ. DD ಯವರ ಕಾರ್ಯಕ್ಕೆ ಆಶ್ರಯ ಕಾಲೋನಿಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Please follow and like us:
error