ಒಂದು ವರ್ಷದ ನಾಟಕ ಡಿಪ್ಲೊಮಾ ಕೋರ್ಸ್ : ಅರ್ಜಿ ಆಹ್ವಾನ


ಕನ್ನಡ ವಿಶ್ವವಿದ್ಯಾಲಯ ಹಂಪಿ, ಮಾನ್ಯತೆ ಪಡೆದಿರುವ ವಿಸ್ತಾರ್ ರಂಗಶಾಲೆ ಕೊಪ್ಪಳ ೨೦೧೭-೨೦೧೮ರ ಪ್ರಶಿಕ್ಷಣಕ್ಕೆ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಪೂರ್ಣಾವಧಿ ನಾಟಕ ಶಾಲೆಯಲ್ಲಿ ನಟನೆ, ನಿರ್ದೇಶನ, ರಂಗಭೂಮಿಯ ತಾಂತ್ರಿಕ ವಿಷಯಗಳು, ಮುಖವಾಡ ತಯಾರಿಕೆ, ನಾಟಕಗಳ ಪ್ರಾತ್ಯಕ್ಷಿಕೆ, ಪಾರಂಪರಿಕ ರಂಗಪ್ರದರ್ಶನಗಳ ಪ್ರಾತ್ಯಕ್ಷಿಕೆಯೊಂದಿಗೆ ಪಾಶ್ಚಾತ್ಯ ರಂಗಭೂಮಿ ಅಭಿಜಾತಾ ಭಾರತೀಯ ರಂಗಭೂಮಿ, ಭಾರತೀಯ ರಂಗಭೂಮಿ ಮತ್ತು ಕನ್ನಡ ರಂಗಭೂಮಿ ಮುಂತಾದ ವಿಷಯಗಳ ಬಗ್ಗೆ ಪ್ರಾಯೋಗಿಕ ಶಿಕ್ಷಣದ ಮೂಲಕ ವೈಜ್ಞಾನಿಕವಾಗಿ ವಿಷಯಗಳನ್ನು ಮಂಡಿಸಲಾಗುವುದು. ರಂಗಶಾಲೆಯಲ್ಲಿ ನುರಿತ ಅಧ್ಯಾಪಕವರ್ಗ, ತಂತ್ರಜ್ಞವರ್ಗ, ಸಂಪನ್ಮೂಲ ವ್ಯಕ್ತಿಗಳ ವರ್ಗದಿಂದ ಕೂಡಿರುತ್ತದೆ. ಮತ್ತು ರಂಗಶಿಕ್ಷಣಕ್ಕೆ ಬೇಕಾದಂತ ಮೂಲ ಸೌಕರ್ಯಗಳನ್ನು ಸಹ ಹೊಂದಿರುತ್ತದೆ. ಇದರಲ್ಲಿ ರಾಜ್ಯದ ಶೋಷಿತ ಸಮುದಾಯದ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ. ಅಭ್ಯರ್ಥಿಗಳಿಗೆ ಉಚಿತ-ಊಟ & ವಸತಿಯದ್ದಾಗಿರುತ್ತದೆ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು ಕನಿಷ್ಠ ೧೦+೨ ಪಾಸಾಗಿರಬೇಕು. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ, ಅಭ್ಯರ್ಥಿ ಪತ್ರಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.

E Mail : mail@vistar.org                 9535769869

www.vistar.org                 8088492229

9480282791 ಲಕ್ಷ್ಮಣ ಪಿರಗಾರ

 

Please follow and like us:
error

Related posts

Leave a Comment