ಐಟಿ ದಾಳಿ : ಮೋದಿ ವಿರುದ್ದ ಜೆಡಿಎಸ್ ಪ್ರತಿಭಟನೆ

ಚೌಕಿದಾರ್ ಚೋರ್ ಹೈ ಧಿಕ್ಕಾರ ಕೂಗಿದ ಜೆಡಿಎಸ್ ಕಾರ್ಯಕರ್ತರು

ಕೊಪ್ಪಳ : ಬೆಳಗಿನ ಜಾವದಿಂದಲೇ ಜೆಡಿಎಸ್ ಸಚಿವರ ಶಾಸಕ ಹಾಗೂ ಆಪ್ತರ ಮನೆಮೇಲೆ ಐಟಿ ದಾಳಿ ಹಿನ್ನೆಲೆಯಲ್ಲಿ ಇಂದು ಕೊಪ್ಪಳದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಆಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಜೆಡೆಎಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.

ಐಟಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಮೋದಿ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ದಾಳಿ ಮಾಡಿಸಿದ್ದಾರೆ‌ .ಗೆಲ್ಲುವುದಕ್ಕೆ ಆಗೋಲ್ಲ ಅಂತ ಮೋದಿ ಇಂತ ಕೆಳಮಟ್ಟದ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚೌಕಿದಾರ್ ಚೋರ್ ಹೈ ಅಂತ ಘೋಷಣೆ ಕೂಗಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತರು ಉಗ್ರ ಪ್ರತಿಭಟನೆ ಯ ಎಚ್ಚರಿಕೆ ನೀಡಿದರು.

ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಮಂತಯ್ಯನ ಮಠ ಮೌನೇಶ್ ವಡ್ಡಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿಎಂ ಹಿರೇಮಠ, ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್, ಮುಖಂಡರಾದ ಮಂಜುಳಾ ರವಿ ಕುಮಾರ್, ಬಸವರಾಜ ನಾಯಕ, ಶರಣಪ್ಪ ಕರಂಡಿ, ಆಯೋಬ್ ಅಡ್ಡೆವಾಲೆ, ಜಗದೀಶ್ , ಬಸವರಾಜ ನಾಯಕ, ಮಂಜುನಾಥ ಸೊರಟುರ, ವೆಂಕಟೇಶ ಬೆಲ್ಲದ, ಬಶಿರ, ಖಲೀಲ, ಮಂಜುನಾಥ ಹುರಕಡ್ಲಿ, ಅಶೋಕ ನಾಯಕ, ಚೋಟುಹುಸ್ಸೆನ, ಶ್ರೀಧರ, ಫಯಾಜ, ಮಾರುತಿ. ಶಂಕರ ನಾಯಕ ಸೇರಿ ಇತರರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.

Please follow and like us:
error