ಏ. ೦೪ ರಂದು ಕೊಪ್ಪಳದಲ್ಲಿ ಗಾಂಧೀಜಿಯವರ ಕುರಿತ ’ಯುಗಪುರುಷ’ ರೂಪಕ ಪ್ರದರ್ಶನ

mahatma_gandhiಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ವತಿಯಿಂದ ರಾಜ್‌ಚಂದ್ರ ಮಿಷನ್ ಧರಮ್‌ಪುರ್ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇವರ ಸಹಯೋಗದಲ್ಲಿ ಮೋಹನ್‌ದಾಸ್ ಗಾಂಧಿ ಅವರನ್ನು ಮಹಾತ್ಮರನ್ನಾಗಿ ಪರಿವರ್ತಿಸಿದ ಒಂದು ಆಧ್ಯಾತ್ಮಿಕ ಸಂಬಂಧದ ’ಯುಗಪುರುಷ’ ಮಹಾತ್ಮರ ಮಹಾತ್ಮ ಎನ್ನುವ ರೂಪಕ ಏ. ೦೪ ರಂದು ಮಧ್ಯಾಹ್ನ ೧೨ ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾಗಿದೆ.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗ್ರಾಮೀಣ ಜನರಿಗೆ ಮಹಾತ್ಮ ಗಾಂಧೀಜಿಯವರ ಜೀವನ ಶೈಲಿ, ಆದರ್ಶ ತತ್ವಗಳು, ಸ್ವಚ್ಛತೆ, ಶುಚಿತ್ವ ಕುರಿತು ಗಾಂಧೀಜಿಯವರು ನೀಡಿರುವ ಸಂದೇಶಗಳ ಕುರಿತು ಜನರಿಗೆ ಅರಿವು ಮೂಡಿಸಲು ’ಯುಗ ಪುರುಷ’ ಎಂಬ ರೂಪಕ ಪ್ರದರ್ಶನವನ್ನು ಏ. ೦೪ ರಂದು ಕೊಪ್ಪಳದ ಜಿಲ್ಲಾಡಳಿತ ಭವನ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದೆ. ನಿರ್ಮಲ ಕರ್ನಾಟಕದತ್ತ ನಮ್ಮ ಚಿತ್ತ- ಶೌಚಾಲಯಕ್ಕಾಗಿ ಸಮರ ಎನ್ನುವ ಸಂದೇಶದೊಂದಿಗೆ ಈ ರೂಪಕವನ್ನು ಆಯೋಜಿಸಲಾಗಿದೆ. ರಾಜೇಶ್ ಜೋಶಿ ಅವರು ನಿರ್ದೇಶಿಸಿರುವ ಈ ರೂಪಕ ಕಾರ್ಯಕ್ರಮಕ್ಕೆ ಉತ್ತಮ್ ಗಡಾ ಅವರು ಕಥೆ ಬರೆದುಕೊಟ್ಟಿದ್ದಾರೆ. ಸಚಿನ್-ಜಿಗರ್ ಅವರು ಸಂಗೀತ ನೀಡಿದ್ದಾರೆ. ಕೃಷ್ಣ ಹೆಬ್ಬಾಳೆ ಅವರು ಕನ್ನಡಕ್ಕೆ ಅನುವಾದ ಮಾಡಿಕೊಟ್ಟು ನಿರ್ದೇಶನವನ್ನೂ ಮಾಡಿದ್ದಾರೆ.

Leave a Reply