ಏಪ್ರಿಲ್ ೬ಕ್ಕೆ ಜಿಲ್ಲೆಗೆ ಜಿಗ್ನೇಶ್ ಮೇವಾನಿ ಆಗಮನ : ಶೋಷಿತ ಸಮುದಾಯಗಳ ಬೃಹತ್ ಸಮಾವೇಶ


ಕೊಪ್ಪಳ : ದಲಿತ ಸಮುದಾಯದ ಯುವ ನಾಯಕ ಗುಜರಾತ್ ನ ಶಾಸಕ ಜಿಗ್ನೇಶ್ ಮೇವಾನಿ ಏಪ್ರಿಲ್ ೬ರಂದು ಕೊಪ್ಪಳ ಜಿಲ್ಲಗೆ ಆಗಮಿಸಲಿದ್ದಾರೆ. ಸಂವಿಧಾನ ಉಳಿಸಿ ಕರ್ನಾಟಕಮ ವತಿಯಿಂದ ಅಂದು ಗಂಗಾವತಿ ನಗರದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಹೈದ್ರಾಬಾದ್ ಕರ್ನಾಟಕ ವಿಭಾಗಮಟ್ಟದ ದಲಿತ-ಪ್ರಜಾತಂತ್ರವಾದಿಗಳು, ಅಲ್ಪಸಂಖ್ಯಾತ, ಶೋಷಿತ ಸಮುದಾಯಗಳ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾರ‍್ಯಕ್ರಮ ಆಯೋಜಕ, ಹೋರಾಟಗಾರ ಕುಮಾರ ಸಮತಲ ಹೇಳಿದರು.
ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂವಿಧಾನದ ಆಶಯಗಳನ್ನು ಉಳಿಸಬೇಕೆಂದರೆ ಮೊದಲು ಕೋಮುವಾದಿ ಹಾಗು ವಿಚ್ಛಿದ್ರಕಾರಿ ಶಕ್ತಿಗಳನ್ನು ಸೋಲಿಸಬೇಕಿದೆ. ದೇಶದಲ್ಲಿ ಈಗ ಸಂವಿಧಾನ ಬದಲಾಯಿಸುವ ಮಾತುಗಳು ಕೇಳಿ ಬರುತ್ತಿವೆ. ಕೋಮುವಾದಿ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ

ಕೇವಲ ಅವರ ಹೇಳಿಕೆಯಲ್ಲ ಅದು ಬಿಜೆಪಿ ಪಕ್ಷದ ಹೇಳಿಕೆಯಾಗಿದೆ. ದೇಶವನ್ನು ಪ್ರೀತಿಸುವ ಸೌಹಾರ್ಧ ಬಯಸುವ ಎಲ್ಲರೂ ಸಂವಿಧಾನದ ಆಶಯಗಳನ್ನು ಉಳಿಸುವದಕ್ಕಾಗಿ ಒಂದಾಗಿ ಈ ಕೋಮುವಾದಿ ಶಕ್ತಿಗಳ ವಿರುದ್ದ ಹೋರಾಡಬೇಕಿದೆ . ಈಗಾಗಲೇ ೨೧ ರಾಜ್ಯಗಳಲ್ಲಿ ಕೋಮುವಾದಿ ವಿಚ್ಚಿದ್ರಕಾರಿ ಶಕ್ತಿಗಳು ಆಳ್ವಿಕೆ ನಡೆಸುತ್ತಿವೆ. ಕರ್ನಾಟಕದಲ್ಲಿಯೂ ಅಧಿಕಾರಕ್ಕೆ ಬಂದರೆ ಬಲಪಂಥಿಯ ಶಕ್ತಿಗಳು ಬಲಗೊಳ್ಳಲಿವೆ. ಇದರ ವಿರುದ್ದ ಎಲ್ಲ ಪ್ರಗತಿಪರ , ಜೀವಪರ ಸಂಘಟನೆಗಳು ಒಂದಾಗಬೇಕಿದೆ ಎಂದು ಹೇಳಿದರು. ದಲಿತ ಸಂಘರ್ಷ ಸಮಿತಿ, ಸಂವಿಧಾನ ಉಳಿಸಿ ಕರ್ನಾಟಕ ವೇದಿಕೆಯ ವೆಂಕಟೇಶ್, ಇಂದೂದರ್ ಹೊನ್ನಾಪುರ, ಕರ್ನಾಟಕ ಸೌಹಾರ್ಧ ವೇದಿಕೆಯ ಕೆ.ಎಲ್.ಅಶೋಕ ಭಾಗವಹಿಸಲಿದ್ದಾರೆ. ವಿವಿಧ ಸಮುದಾಯಗಳ ಸ್ವಾಮಿಜಿಗಳು ಭಾಗವಹಿಸಲಿದ್ಧಾರೆ. ಕಾರ್ಯಕ್ರಮಕ್ಕೆ ಜೀವಪರ, ರೈತಪರ, ದಲಿತಪರ ಪ್ರಜಾತಂತ್ರವಾದಿಗಳು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಬಸವರಾಜ್ ಶೀಲವಂತರ, ಈಶಣ್ಣ ಕೊರ್ಲಳ್ಳಿ, ಕರಿಯಪ್ಪ,ಖುದ್ದೂಸ್ ಭಾಗವಹಿಸಿದ್ದರು.

Please follow and like us:
error

Related posts