You are here
Home > Koppal News > ಏತ ನಿರಾವರಿ ಹೂಳೆತ್ತುವ ಕಾಮಗಾರಿಯಲ್ಲಿ ಭ್ರಷ್ಟಾಚಾರ ಅಮರೇಶ ಕರಡಿ ಆರೋಪ

ಏತ ನಿರಾವರಿ ಹೂಳೆತ್ತುವ ಕಾಮಗಾರಿಯಲ್ಲಿ ಭ್ರಷ್ಟಾಚಾರ ಅಮರೇಶ ಕರಡಿ ಆರೋಪ

amaresh_karadiಕೊಪ್ಪಳ: ತಾಲೂಕಿನ ಹನಕುಂಟಿ ಸಮೀಪದ ಏತ ನೀರಾವರಿ ಘಟಕಕ್ಕೆ ಬಿಜೆಪಿ ಮುಖಂಡ ಅಮರೇಶ ಕರಡಿ ಭಾನುವಾರ ಬೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕ ಈ ಭಾಗದಲ್ಲಿ ನೀರಾವರಿ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದೆ. ಅದಕ್ಕೆ ಕಾರಣ ಮಳೆಯ ಕೊರತೆ ಮತ್ತು ಕಾಲುವೆಗಳಲ್ಲಿ ಹೂಳು ತುಂಬಿರುವುದರಿಂದ ಜಾಕವೆಲ್ಗೆ ನೀರು ಸರಾಗವಾಗಿ ಹರಿದು ಬರುತ್ತಿಲ್ಲ. ಏತ ನೀರಾವರಿ ಕಾಲುವೆ ಹೂಳೆತ್ತಲು ಈಗಾಗಲೆ ರಾಜ್ಯ ಸರಕಾರ ೬.೫ ಕೋಟಿ ಹಣ ವ್ಯಯಮಾಡಿದ್ದಾರೆ. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಯಾವುದೇ ಕಾಮಗಾರಿಯನ್ನು ಸಮರ್ಪಕವಾಗಿ ಕೈಗೊಂಡಿಲ್ಲ ಎಂದು ಆರೋಪಿಸಿದರು. ತುಂಗಭದ್ರ ಹಿನ್ನಿರು ಬರುವ ಮುಂಚೆ ಕಾಲುವೆಯಲ್ಲಿನ ಹೂಳೆತ್ತುವ ಕುರಿತು ಹನಕುಂಟಿ, ತಿಗರಿ, ಮತ್ತೂರ, ನೀರಲಗಿ, ಕಾತರಕಿ, ಗುಡ್ಲಾನೂರ ಗ್ರಾಮದ ನೂರಾರು ರೈತರೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ವೀರೇಶ ಸಜ್ಜನ, ಮಹಾಂತೇಶ ಪಾಟೀಲ, ಎ.ಪಿ.ಎಮ್. ಸಿ ಸದಸ್ಯ ಬಸವರಾಜ ಈಶ್ವರಗೌಡ್ರ, ಮಂಜುನಾಥ ಹಂದ್ರಾಳ, ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

Leave a Reply

Top