ಏಕಗವಾಕ್ಷಿ ಮಾದರಿ ಯೋಜನೆ : ನ. 22 ರಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಭೆ

ಕೊಪ್ಪಳ ನ. : ಕೊಪ್ಪಳ ಜಿಲ್ಲಾ ಪಂಚಾಯತ್ ವತಿಯಿಂದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಏಕಗವಾಕ್ಷಿ ಮಾದರಿ ಯೋಜನೆಯಡಿ ಸಭೆಯನ್ನು ನ. 22 ರಂದು ಬೆಳಿಗ್ಗೆ 11 ಗಂಟೆಗೆ ಜಿ.ಪಂ. ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿಯು ಜಿಲ್ಲಾ ಮಟ್ಟದಲ್ಲಿ ಏಕಗವಾಕ್ಷಿ ಮಾದರಿ ಯೋಜನೆ (ಸಿಂಗಲ್ ವಿಂಡೋ ಮಾಡೆಲ್) ಅಡಿಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಸ್ಥರುಗಳಿಗೆ ಸಭೆ/ ತರಬೇತಿಯನ್ನು ನೀಡಲು ಸೂಚಿಸಿದ್ದು, ನ. 22 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳ ಜಿ.ಪಂ. ಸ್ಥಾಯಿ ಸಮಿತಿ ಸಭಾಂಗಣದಲ್ಲಿ ತರಬೇತಿಯನ್ನು ನಿಗದಿಪಡಿಸಿದ್ದು, ಎಲ್ಲಾ ಇಲಾಖೆಗಳ ಮುಖ್ಯಸ್ಥರು ಈ ಸಭೆ/ ತರಬೇತಿಗೆ ತಪ್ಪದೇ ಹಾಜರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
=======
ಬೆಳೆ ದರ್ಶಕ್ ಆ್ಯಪ್ ಮುಖಾಂತರ ಕೈಗೊಂಡ ಬೆಳೆ ಸಮೀಕ್ಷೆ ಮಾಹಿತಿ ತಪ್ಪಾದಲ್ಲಿ ಆಕ್ಷೇಪಣೆ ಸಲ್ಲಿಸಿ
ಕೊಪ್ಪಳ ನ. 20 (ಕರ್ನಾಟಕ ವಾರ್ತೆ): “ಬೆಳೆ ದರ್ಶಕ್” ಆ್ಯಪ್ ಮುಖಾಂತರ ರೈತರು ತಮ್ಮ ಜಮೀನಿನಲ್ಲಿ ಕೈಗೊಂಡ ಬೆಳೆ ಸಮೀಕ್ಷೆ ಕಾರ್ಯದಲ್ಲಿ ನಮೂದಿಸಿರುವ ಮಾಹಿತಿಯು ತಪ್ಪು ಎಂದು ಕಂಡುಬಂದಲ್ಲಿ ಆ್ಯಪ್ ಮುಖಾಂತರವೇ ಆಕ್ಷೇಪಣೆ ಸಲ್ಲಿಸಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಬೆಳೆ ವಿಸ್ತೀರ್ಣದ ಅಂದಾಜು ಅಂಕಿ ಅಂಶಗಳ ಕ್ರೋಢೀಕರಣ ಕಾರ್ಯಕ್ರಮವನ್ನು ಗ್ರಾಮಲೆಕ್ಕಿಗರು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಜಲ ಸಂಪನ್ಮೂಲ ಇಲಾಖೆಯ ಕಾರ್ಯ ತನಿಖಾಧಿಕಾರಿ ಈ ತಂಡದವರು ನಿರ್ವಹಿಸಬೇಕಾಗಿದೆ. ಈ ಹಿನ್ನಲೆಯಲ್ಲಿ 2018ರ ಮುಂಗಾರು ಋತುವಿನಲ್ಲಿ ಬೆಳಿ ಸಮೀಕ್ಷೆ ಕಾರ್ಯಕ್ರಮವನ್ನು ಮೊಬೈಲ್ ಆ್ಯಪ್ ಮುಖಾಂತರ ಜಮೀನುಗಳ ಸಮೀಕ್ಷೆ ನಡೆಸಿ ಬೆಳೆಗಳ ಮಾಹಿತಿ ಸಂಗ್ರಹಿಸಿ ಇಂಗೀಕರಿಸುವಂತೆ ಸರ್ಕಾರವು ಆದೇಶಿಸಿದ್ದು, ಈ ಸಂಬಂಧ ಇ.ಡಿ.ಸಿ.ಎಸ್. ನಿರ್ದೇಶನಾಲಯದಿಂದ ರೈತರಿಗೋಸ್ಕರ ಹೊಸದಾಗಿ “ಬೆಳೆ ದರ್ಶಕ್” ಎಂಬ ಹೆಸರಿನ ಮೊಬೈಲ್ ಅಪ್ಲಿಕೇಷನ್ ಅನ್ನು ಅಭಿವೃದ್ಧಿಪಡಿಸಿ ಗೂಗಲ್ ಪ್ಲೇಸ್ಟೋರ್ ಮುಖಾಂತರ ಲಭ್ಯಗೊಳಿಸಲಾಗಿರುತ್ತದೆ.
“ಬೆಳೆ ದರ್ಶಕ್” ಆ್ಯಪ್ ಮುಖಾಂತರ ರೈತರು ಗ್ರಾಮಗಳಲ್ಲಿ ಬೆಳೆ ಸಮಿಕ್ಷೇ ಈಗಾಗಲೇ ಮುಗಿದಿದೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಬೆಳೆ ಸಮೀಕ್ಷೆ ಪೂರ್ಣಗೊಂಡಿದ್ದಲ್ಲಿ ದಾಖಲಾದ ಬೆಳೆ ವಿವರಗಳನ್ನು ಮತ್ತು ಬೆಳೆಗಳ ಪೋಟೋಗಳನ್ನು ವೀಕ್ಷಿಸಬಹುದಾಗಿದೆ. ಪ್ರಸ್ತುತ ರೈತರು ತಮ್ಮ ಜಮೀನಿನಲ್ಲಿ ಕೈಗೊಂಡ ಬೆಳೆ ಸಮೀಕ್ಷೆ ಕಾರ್ಯದಲ್ಲಿ ನಮೂದಿಸಿರುವ ಮಾಹಿತಿಯು ತಪ್ಪು ಎಂದು ಕಂಡುಬಂದಲ್ಲಿ ಈ ಆ್ಯಪ್ ಮುಖಾಂತರವೇ ಆಕ್ಷೇಪಣೆ ಸಲ್ಲಿಸಬಹುದು ಅಥವಾ ತಾಲೂಕು ಕಚೇರಿಯನ್ನು ಸಂಪರ್ಕಿಸಿ ಅಲ್ಲಿಯೂ ಕೂಡ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಆಕ್ಷೇಪಣೆ ಸಲ್ಲಿಸಲು ನ. 30 ಕೊನೆಯ ದಿನವಾಗಿದೆ

Please follow and like us:
error