ಏಂಜೆಲ್ಸ್ ಬಜಾರ್ ಮಕ್ಕಳ ಮಾರ್ಕೆಟ್ ಪ್ರದರ್ಶನ ಮತ್ತು ಮಾರಾಟದ ಕಾರ್ಯಕ್ರಮ

Koppal  ಕೊಪ್ಪಳ ನಗರದ ಲಿಟಲ್ ಏಂಜೆಲ್ಸ್ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಮಾರ್ಕೆಟ್ ಪ್ರದರ್ಶನ ಮತ್ತು ಮಾರಾಟದ ಕಾರ್ಯಕ್ರಮ ಏಂಜೆಲ್ಸ್ ಬಜಾರ್‌ದಲ್ಲಿ ಸ್ವತಃ ಮಕ್ಕಳೇ ವಿವಿಧ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಮನೋರಂಜನಾತ್ಮಕ ಆಟಗಳನ್ನು ಪ್ರದರ್ಶಿಸುವ ಅಂಗಡಿಗಳನ್ನಿಟ್ಟು ಪಾಲಕರ ಹಾಗೂ ವೀಕ್ಷಕರ ಗಮನ ಸೆಳೆದರು. ಏಂಜೆಲ್ಸ್ ಬಜಾರ್ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯರಾದ ಶ್ರೀ ರುದ್ರಸ್ವಾಮಿ ಇವರು ಉದ್ಘಾಟಿಸಿ ಇಂತಹ ಮಕ್ಕಳ ಸಂತೆ ನಮಗೆ ಮಕ್ಕಳ ಜಾತ್ರೆಯ ಹಾಗೆ ವಿಶೇಷ ಅನುಭವವನ್ನು ನೀಡಿತು. ಇಂತಹ ಕಾರ್ಯಕ್ರಮ ಮಕ್ಕಳ ವ್ಯವಹಾರ ಜ್ಞಾನದ ಜೊತೆಗೆ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ, ಇಂತಹ ಅಪರೂಪದ ಕಾರ್ಯಕ್ರಮವನ್ನು ಹಮ್ಮಿಕೊಂಡಂತಹ ಈ ಶಾಲೆಯ ಪ್ರಾಚಾರ್ಯರಿಗೆ ಹಾಗೂ ಶಿಕ್ಷಕರಿಗೆ ತುಂಬು ಹೃದಯದ ಅಭಿನಂದನೆಗಳು ಎಂದು ಹೇಳಿದರು. ಏಂಜೆಲ್ಸ್ ಬಜಾರ್‌ದಲ್ಲಿ ಸ್ವತಃ ಮಕ್ಕಳೇ ತರಕಾರಿ ಅಂಗಡಿ, ಕಿರಾಣಿ & ಫ್ಯಾನ್ಸಿ ಸ್ಟೋರ್, ಜ್ಯೂಸ್ ಸೆಂಟರ್, ಹೋಟಲ್, ಬಟ್ಟೆ ಅಂಗಡಿ, ಪಾನ್‌ಶಾಪ್, ಫುಟ್‌ವೇರ್, ಹೂವಿನ ಅಂಗಡಿ, ದಿನಸಿ ಪದಾರ್ಥಗಳ ಅಂಗಡಿ ಹಾಗೂ ಇತರೆ ಎಲ್ಲಾ ರೀತಿಯ ಅಂಗಡಿಗಳನ್ನಿಟ್ಟು ವಸ್ತುಗಳನ್ನು ಮಾರಾಟ ಮಾಡಿದರು. ಜೊತೆಗೆ ವಿವಿಧ ಮನೋರಂಜನಾತ್ಮಕ ಆಟಗಳನ್ನು ಏರ್ಪಡಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಆಗಮಿಸಿ ಮಕ್ಕಳ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಿ ಹಾಗೂ ಆಟಗಳನ್ನು ಆಡಿ ಮಕ್ಕಳಿಗೆ ಪ್ರೋತ್ಸಾಹಿಸಿದರು. ಈ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಶಾಲೆಯ ಪ್ರಾಚಾರ್ಯರು ಹಾಗೂ ಕಾರ್ಯದರ್ಶಿಗಳಾದ ತನಜಿಮ್ ಜಿಯಾ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಫಕೀರಪ್ಪ ಎನ್.ಇ. ಹಾಗೂ ನಗರಸಭೆ ಸದಸ್ಯರಾದ ಅರುಣ ಅಪ್ಪುಶೆಟ್ಟಿ, ಬಹಾದ್ದರೂ ಖಾನ್, ಫಾರೂಕ್ ಖಾನ್, ಶಿವಪ್ರಸಾದ, ವಿರುಪಾಕ್ಷ ಹೂಗಾರ, ಬಸಯ್ಯ ಹಿರೇಮಠ, ಪಾಲಕರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Please follow and like us:
error