ಎಸ್ . ಟಿ . ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಜೂನ್ 6 ರಂದು ಬೃಹತ್ ಪ್ರತಿಭಟನೆ

ಕೊಪ್ಪಳ ಜೂನ್ . 03 , ಕರ್ನಾಟಕ ರಾಜ್ಯದ ಪಾಲ್ಕನೇ ಅತಿದೊಡ್ಡ ಸಮುದಾಯವಾಗಿವೆ ವಾಲ್ಮೀಕಿ ನಾಯಕ ಸಮುದಾಯ ಶಿಕ್ಷಣ . ಉದ್ಯೊಗ ಹಾಗೂ ಸಾಮಾಜಿಕ ನ್ಯಾಯದ ವಿಷಯದಲ್ಲಿ ಸತತವಾಗಿ ತುಳಿತಕ್ಕೆ ಒಳಗಾಗುತ್ತ ಬಂದಿದೆ . ಸಂವಿಧಾನಬದ್ದವಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ

ಪಡೆಯುವುದು ಶೋಷಿತ ಸಮುದಾಯಗಳ ಹಕ್ಕು ಆಗಿದೆ , ರಾಜ್ಯದಲ್ಲಿ ವಾಲ್ಮೀಕಿ ನಾಯಕ ಸಮುದಾಯ ಸುಮಾರು 60 ಲಕ್ಷಕ್ಕೂ ಅಧಿಕವಿದೆ . ಅಂದರೆ ಬಾರದ ಒಟ್ಟು ಜನಸಂಖ್ಯೆಯಲ್ಲಿ ಶೇ . 8 ಕ್ಕಿಂತಲೂ ಅಧಿಕ ಕಾಲನ್ನು ಹೊಂದಿರುವ ಈ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮಿಸಲಾತಿ ಪ್ರಮಾಣವನ್ನು ಕನಿಷ್ಟ ಶೇ . 7 . 5 ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕೊಪ್ಪಳದಲ್ಲಿ ಜೂನ್ 5 COದು ಬೃಹತ್ ಪ್ರತಿಭಟನಾ ರಾಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಎಸ್ . ಟಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ರ್ಡೊಜ್ಞೆ ಹಾಗೂ ಕೊಪ್ಪಳ ತಾಲ್ಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶರಣಪ್ಪನಾಯಕ ಹೇಳಿದರು . ಈ ಕುರಿತು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು , ಕೇಂದ್ರ ಸರ್ಕಾರ ಈಗಾಗಲೇ ಪರಿಶಿಷ್ಟ ಪಂಗಡಕ್ಕೆ ಶೇ . 7 ರಷ್ಟು ಮೀಸಲಾತಿ ನೀಡಿ ಹಲವು ದಶಕಗಳಲ್ಲಿ ಕಳೆದಿವೆ . ಇದನ್ನು ಆಧರಿಸಿ ರಾಜ್ಯದಲ್ಲಿ ಲೋಕಸಭೆ , ವಿಧಾನಸಭೆ ಪ್ರತಿಕ ನಗರ ಮತ್ತು ಗ್ರಾಮೀ & ಸ್ಥಳ ?ು ಸಂಸ್ಥೆಗಳಲ್ಲಿ ಶೇ . 7 . 5 ರಷ್ಟು ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ . ದುರಂತವೆಂದರೆ ಈ ನೀತಿಯು ಇದುವರೆಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಆನ್ವಯವಾಗುತ್ತೆಲ್ಲ , ರಾಜ್ಯದಲ್ಲಿ ಪರಿಶಿಷ್ಟ ಪಂಗಡ ( ಎಸ್ . ಟಿ ) ಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೇವಲ ಶೇ . 3 ರಷ್ಟು ಮಾತ್ರ ಮೀಸಲಾತಿ ನಿಗದಿಯಾಗಿರುವದನ್ನು ಮರು ಪರಿಷ್ಕರಣೆ ಮಾಡಿಯೇ ಇಲ್ಲ . ಇತದೆ . ಸಮಾಜಗಳನ್ನು ಎಸ್ . ಸಿ . ಗೆ ಸೇರ್ಪಡೆ ಮಾಡಿದರೂ ಸಹ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿಯೇ ಇಲ್ಲ ,

ಕಾಲಕಾಲಕ್ಕೆ ಪರಿಷ್ಕರಿಸುತ್ತ ಮಧ್ಯಪ್ರದೇಶದಲ್ಲಿ ಶೇ . 20 ರಷ್ಟು ಹಾಗೂ ಜಾರ್ಖಂಡ ರಾಜ್ಯದಲ್ಲಿ ಶೇ . 26 ರಷ್ಟು ಮೀಸಲಾತಿ ನೀಡಲಾಗುತ್ತಿದೆ , ಜತೆ ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ನಮಗೆ ಅನ್ಯಾಯವೆಸಗುತ್ತಲೇ ಬಂದಿರುವನ್ನು ಖಂಡಿಸಿ ಜೂನ್ 6 ರಂದು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ರಾಲಿ ಹಮ್ಮಿಕೊಳ್ಳಲಾಗಿದೆ . ಅಂದು ಬೆಳಿಗ್ಗೆ 11 ಗಂಟೆಗೆ ಎಲ್ ಐಸಿ ಹತ್ತಿರದ ವಾಲ್ಮೀಕಿ ಸಮುದಾಯ ಭವನದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗುವುದು , ಆಶೋಕ ವೃತ ಮುಂಡರಗಿ ಭೀಮರಾಯ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ತೆರಳಲಿದೆ , ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಿಮಂತ್ರಿಗಳಿಗೆ ಮನವಿ ಪತ್ರ ಅರ್ಪಿಸಲಾಗುವುದು ,

ಜೊತೆಗೆ ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು . ಪ್ರತಿ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ . ಟಿ . ಕಲ್ಯಾಣ ಇಲಾಖೆಯನ್ನು ವಿಭಜಿಸಿ ಪ್ರತ್ಯೇಕ ಕಚೇರಿ ಶಾಪಿಸಬೇಕು . ಪರ್ವಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿಗಳನ್ನು ಎಲ್ಲ ಜಿಲ್ಲೆಗಳಲ್ಲಿ ಸ್ಥಾಪಿಸಬೇಕು , ನಕಲಿ ಜಾತಿಪ್ರಮಾಣ ಪತ್ರ ತದೆ ; ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳ ವಿತರಣೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರಾಜಾರೋಷವಾಗಿ ನಡೆಯುತ್ತಿದೆ . ಇದರಿಂದ ನೈಜವಾಗಿ ಅನ್ಯಾಯಕ್ಕೊಳಗಾಗಿ ಶೋಷಣೆ ಅನುಭವಿಸುತ್ತಿರುವ ಸಮಾಜಕ್ಕೆ ದೊಡ್ಡ ದೊಷವಾಗುತ್ತಿದೆ . ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಂಡು ಕಂದಾರರು ಇಲಾಖೆಯು ಎಲ್ಲಾ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು . ನಕಲಿ ಜಾತಿ ಪತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಅವುಗಳನ್ನು ವಿತರಿಸಿದ ಅಧಿಕಾರಿಗಳಿಗೆ ಮತ್ತು ಸೌಲಭ್ಯ ಪಡೆದ ಸುಳ್ಳು ಮಂಚಕರಿಗೆ ಶಿಕ್ಷೆ ನೀಡಬೇಕು . ಕನ್ನಡ ಎ . ಎ , ಪ್ರಾಧ್ಯಾಪಕರ ವಿರುದ್ಧ ಆಕ್ರೋಶ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ . ಮೊಗಳ್ಳಿ ಗಣೇಶ ಅವರು , ವಾಲ್ಮೀಕಿ ನಾಯಕ ಸಮುದಾಯದ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ” ಪುಕ್ಕಟ ಊಟವಸತಿ ಸೌಲಭ್ಯ ಪಡೆಯುತ್ತಿರುವ ಕಾಡು ಮೃಗಗಳು ” ಎಂದು ಕರೆದು ಅವಮಾನಿಸಿದ್ದಾರೆ . ಮಾರ್ಗದರ್ಶನ ಬಯಸಿ ಬರುವ ಸಮಾಜದ ವಿದ್ಯಾರ್ಥಿಗಳಿಗೆ ನಿಂದಿಸಿ , ನೋಯಿಸುತ್ತಿದ್ದಾರೆ . ಜವಾಬ್ದಾರಿಯುತ ಸ್ಥಾನದಲ್ಲಿರುವ ಇಂತಹ ಪ್ರಾಧ್ಯಾಪಕರ ವಿರುದ್ಧ ವಿಶ್ವವಿದ್ಯಾಲರು ಮತ್ತು ಸರ್ಕಾರ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು

. ಸುದ್ದಿಗೋಷ್ಟಿಯಲ್ಲಿ ಸುರೇಶ ಡೊಣ್ಷ, ರುಕಗಮಣ್ಣ ಶ್ಯಾವಿ, ಶರಣಪ್ಪ ನಾಯಕ, ಮಲ್ಲಪ್ಪ ಬೇಲೇರಿ, ದೇವೆಂಧ್ರಪ್, ಹನುಮಂತಪ್, ವಿರುಪಾಕ್ಷಗೌಡ ಉಪಸ್ಥಿತರಿದ್ದರು.

Please follow and like us:
error