fbpx

ಎಸ್.ಎಸ್.ಕೆ. ಸಮಾಜದಿಂದ ಜಿ.ಪಂ.ಅಧ್ಯಕ್ಷ ರಾಜಶೇಖರ ಹಿಟ್ನಾಳರವರಿಗೆ ಸನ್ಮಾನ

ಕೊಪ್ಪಳ:೨೮, ಭಾಗ್ಯನಗರ ಗ್ರಾಮದ ಎಸ್.ಎಸ್.ಕೆ. ಸಮಾಜದವರು ಖೋಡೆ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ ಸಮಾಜದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳರವರಿಗೆ ಸನ್ಮಾನಿಸಿ ಈವರೆಗೆ ಶಾಸಕರು ಸಮಾಜದ ಅಭಿವೃದ್ಧಿಗೆ ರೂ.೫೫ ಲಕ್ಷ ಅನುದಾನ ನೀಡಿದ್ದು ಹಾಗೂ ಭಾಗ್ಯನಗರ ಗ್ರಾಮವನ್ನು ಪಟ್ಟಣ ಪಂಚಾಯತಿಯನ್ನಾಗಿ ಮಾಡಿ ಭಾಗ್ಯನಗರ ಪಟ್ಟಣದ ಸರ್ವಾಂಗಿಣ ಅಭಿವೃದ್ಧಿಗೆ ಸುಮಾರು ಅಂದಾಜು ಮೊತ್ತ ರೂ.೩೦ ಕೋಟಿ ಅನುದಾನ ನೀಡಿರುವುದು ಭಾಗ್ಯನಗರ ಪಟ್ಟಣದ ಸುದೈವವಾಗಿದೆ. ತುಂಗಭದ್ರಾ ಹಿನ್ನೀರಿನಿಂದ ಮುಳುಗಡೆಯಾದ ಭಾಗ್ಯನಗರವು ಪುನರ್ವಸತಿ ಗ್ರಾಮವಾಗಿದ್ದು ಇಷ್ಟೊಂದು ಅಭಿವೃದ್ಧಿ ಕಾರ್ಯಗಳು ಶಾಸಕ ರಾಘವೇಂದ್ರ ಹಿಟ್ನಾಳರವರ ಅಧಿಕಾರ ಅವಧಿಯ ೫ ವರ್ಷದಲ್ಲಿ ಅಭಿವೃದ್ಧಿ ಹೊಂದಿದ್ದು ಜನಮೆಚ್ಚುಗೆ ಪಡೆದಿದ್ದು ಎಸ್.ಎಸ್.ಕೆ. ಸಮಾಜದ ಎಲ್ಲಾ ಹಿರಿಯರು, ಯುವಕರು ಈ ಬಾರಿ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅವರ ಕೈಬಲಪಡಿಸುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ ಗುಪ್ತಾ, ಪ್ರಸನ್ನ ಗಡಾದ, ತುಕಾರಾಮಪ್ಪ ಗಡಾದ, ಸತೀಶ ಮೇಘರಾಜ, ಅರ್ಜುನಸಾ ಕಾಟವಾ, ಅರ್ಜುನಸಾ ಕಟಾರೆ, ಯುವ ಕಾಂಗ್ರೆಸ್ ಅಧ್ಯಕ್ಷ ರವಿ ಕುರುಗೋಡ, ಲಕ್ಷ್ಮಣ ನಿರಂಜನ್, ರಾಜು ಪವಾರ, ಶ್ರೀಕಾಂತ ದಲಬಂಜನ್, ದಿನೇಶ ಪವಾರ, ಎನ್.ಆರ್.ಕಟಾರೆ, ಹನುಮೇಶ ಹೊಸಳ್ಳಿ ಹಾಗೂ ಪಕ್ಷದ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error
error: Content is protected !!