ಎಸ್ ಎಸ್ ಎಲ್ ಸಿ : ವಿವಿಧ ಶಾಲೆಗಳ ಸಾಧನೆ

ಕೊಪ್ಪಳ:೨೦೧೬-೧೭ನೇ ಸಾಲಿನ ೧೦ನೇ ತರಗತಿಯ ಪರೀಕ್ಷೆಯಲ್ಲಿ ನಗರದ ಟ್ರಿನಿಟಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದು ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ವೈಷ್ಣವಿ ರಾಠಿ-೬೧೫ಅಂಕ ೯೮.೪೦%,ಸಂತೋಷ ಹೊಟ್ಟಿ-೬೧೦ಅಂಕ ೯೭.೦೬%,ಸಾಗರ ಬೆಳವಿನಾಳ-೬೦೨ಅಂಕ ೯೬.೩೨%,ಸ್ಪೂರ್ತಿ ಬಣಗಾರ-೫೯೬ಅಂಕ ೯೫.೩೬%,ಶ್ವೇತಾ ಮಾಲಿಪಾಟೀಲ-೫೮೯ಅಂಕ ೯೪.೨೪%,
ಸೈಯದ ಜುನೈದ ಅಹ್ಮದ-೫೯೦ಅಂಕ ೯೪.೪೦%,ಶುರ್ಜಿಲ್ ಹುಸೇನ-೫೮೩ಅಂಕ ೯೩.೨೮%,ವಿನಯ ಯರಗುಪ್ಪಿ-೫೮೧ಅಂಕ ೯೨.೯೬%,ನಯಿಮುದ್ದೀನ-೫೭೧ಅಂಕ ೯೧.೩೬%

 

ಕಲಮ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ.೮೯% ಫಲಿತಾಂಶ
ಕೊಪ್ಪಳ : ನಗರದ ಕಲಮ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಪ್ರಸಕ್ತ ೨೦೧೬-೧೭ ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.೮೯% ಫಲಿತಾಂಶ ಪಡೆದಿದೆ. ಪರಿಕ್ಷೆಗೆ ೧೮ ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ ೦೪ ಡಿಸ್ಟಿಂಕ್ಷನ್, ೦೯ ಪ್ರಥಮ ದರ್ಜೆ, ೦೩ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಶಾಲೆಯ ಒಟ್ಟು ಫಲಿತಾಂಶ ಶೇ. ೮೯% ರಷ್ಟಾಗಿದೆ ೬೨೫/೬೦೩ ಅತಿ ಹೆಚ್ಚು ಅಂಕ ಪಡೆದು ವೈಯಕ್ತಿಕ ೯೬.೪೮ ರಷ್ಟು ಫಲಿತಾಂಶ ಗಳಿಸಿರುವ ಸೌಮ್ಯ ತಂದೆ ನಾಗರಾಜ ಕಮ್ಮಾರ ಪ್ರಥಮ, ಹಸೀನಾ ತಂದೆ ಮರ್ದಾನ ಸಾಬ್ ೬೨೫/೫೪೮ ೮೭.೬೮% ಪಡೆದು ದ್ವಿತಿಯ ಹಾಗೂ ಜೀನತ್ ಬೇಗಂ ೬೨೫/೫೪೭ ಶೇ.೮೭.೫೨% ತೃತೀಯ ಸ್ಥನಾ ಪಡೆದಿದ್ದಾರೆ.
ಉತ್ತಮ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಸಹಕರಿಸಿದ ಪಾಲಕರಿಗೆ ಮತ್ತು ಮುಖ್ಯೋಪಾದ್ಯಾಯರು ಹಾಗೂ ಶಿಕ್ಷಕ ವೃಂದಕ್ಕೆ ಶಾಲೆಯ ಸಂಸ್ಥೆಯ ಅಧ್ಯಕ್ಷರಾದ ಮಹ್ಮದ್ ಅಲೀಮುದ್ದೀನ್ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ

 

ನ್ಯಾಷನಲ್ ಆಂಗ್ಲ ಮಾಧ್ಯಮ ಸಂಯುಕ್ತ ಪ್ರೌಢ ಶಾಲೆ, ಭಾಗ್ಯನಗರ

೨೦೧೭ರ ಎಪ್ರಿಲ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ ೧೦೦ ರಷ್ಟು ಫಲಿತಾಂಶಗಳಿಸುವ ಮೂಲಕ ; ಸತತ ೫ ನೇ ವರ್ಷ ಈ ಸಾಧನೆಗೈದ ಹೆಗ್ಗಳಿಕೆ .ಪರೀಕ್ಷೆಗೆ ಹಾಜರಾದ ಒಟ್ಟು ೬೭ ವಿದ್ಯಾರ್ಥಿಗಳಲ್ಲಿ ೪೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ೧೯ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಕುಮಾರ ವೆಂಕಟೇಶ ಅಂದಾನಪ್ಪ ಬೆಟಗೇರಿ ೯೭.೧೨ % (೬೦೭ ಅಂಕಗಳು) ರಷ್ಟು ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನದಲ್ಲಿದ್ದಾನೆ.
ದ್ವಿ.ಭಾ. ಕನ್ನಡ, ತೃ.ಭಾ. ಹಿಂದಿ ಹಾಗೂ ಗಣಿತ ವಿಷಯಗಳಲ್ಲಿ ವಿದ್ಯಾರ್ಥಿಗಳು ೧೦೦ ಕ್ಕೆ ೧೦೦ ಅಂಕಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹಿಸಿದ ಪಾಲಕ/ಪೋಷಕರಿಗೆ ಆಡಳಿತ ಮಂಡಳಿಯ ಕಾರ್ಯದರ್ಶಿ  ಪಹ್ಲಾದ ಅಗಳಿ, ಪ್ರಾಚಾರ್ಯರಾದ ಆರ್. ಬಸವರಾಜ ಹಾಗೂ ಶ್ರೀಮತಿ ವನಿತಾ ಗಡಾದ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

 

ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ನ್ಯೂ ಆಕ್ಸ್‌ಫರ್ಡ ಆಂಗ್ಲ ಮಾಧ್ಯಮ ಶಾಲೆ ಜಿಲ್ಲೆಗೆ ದ್ವಿತೀಯ
ಕೊಪ್ಪಳ : ೨೦೧೬-೧೭ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನ್ಯೂ ಆಕ್ಸ್ ಫರ್ಡ ಆಂಗ್ಲ ಮಾಧ್ಯಮ ಕೊಪ್ಪಳ ಈ ಶಾಲೆಯಿಂದ ಒಟ್ಟು ೫೧ ವಿದ್ಯಾರ್ಥಿಯ ಪೈಕಿ ೧೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ.
ಅದರಲ್ಲಿ ಶ್ರೀ ಪ್ರೀಯಾ ಎಸ್ ಆರ್ ೬೨೫/೬೧೭ ಅಂಕ ಪಡೆದು ಶೇ.೯೮.೭೨% ಫಲಿತಾಂಶದೊಂದಿಗೆ ಜಿಲ್ಲೆಗೆ ದ್ವಿತೀಯ ಸ್ಥಾನವನ್ನ ಪಡೆದಿದ್ದಾಳೆ.
ಮಕ್ಕಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷವೃಂದವರು ಅಭಿನಂದನೆ ಸಲ್ಲಿಸಿದ್ದಾರೆ.

 

೨೦೧೭ರ ಎಪ್ರಿಲ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ ೧೦೦ ರಷ್ಟು ಫಲಿತಾಂಶಗಳಿಸುವ ಮೂಲಕ ; ಸತತ ೧೦ ನೇ ವರ್ಷ ಈ ಸಾಧನೆಗೈದ ಹೆಗ್ಗಳಿಕೆ ನಮ್ಮದಾಗಿದೆ.
ಪರೀಕ್ಷೆಗೆ ಹಾಜರಾದ ಒಟ್ಟು ೧೫ ವಿದ್ಯಾರ್ಥಿಗಳಲ್ಲಿ ೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ೧೧ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ದ್ವಿತೀಯ ದರ್ಜೆಯಲ್ಲಿ ೨ ಪಾಸಾಗುವ ಮೂಲಕ ವಸತಿ ನಿಲಯಕ್ಕೆ ಕೀರ್ತಿ ತಂದಿದ್ದಾರೆ.
ಕುಮಾರ ಶೇಖಪ್ಪ ಹೆಚ್ ಮಾಲಿಗೌಡ ೮೬.೦೨ % (೫೪೦ ಅಂಕಗಳು), ಕುಮಾರ ವೀರಣ್ಣ ದ್ಯಾಮಣ್ಣವರ ೮೫.೭೦ (೫೩೬) ಅಂಕಗಳಿಸಿ ವಸತಿ ನಿಲಯಕ್ಕೆ ಕೀರ್ತಿ ತಂದಿದ್ದಾರೆ.

ಎಸ್.ಎಸ್.ಎಲ್.ಸಿ ಯಲ್ಲಿ ನಿವೇದಿತಾ ಪ್ರೌಢ ಶಾಲೆಗೆ ಶೇ ೯೦.೬೨
ಕೊಪ್ಪಳ : ನಗರದ ನಿವೇದಿತಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯು ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ಒಟ್ಟು ೯೦.೬೨% ಶೇ ಪಡೆದಿದೆ. ಶಾಲೆಯಲ್ಲಿ ಒಟ್ಟು ೦೭ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು ೨೨ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಸಿಂಧು ಎಸ್ ಜ್ಞಾನಮೋಠೆ, ೬೨೫/೬೧೪, (೯೮.೨೪%) ರಶ್ಮಿ ಬಾರಕೇರ್ ೬೨೫/೫೯೯ (೯೫.೮೪%) ಅಮೃತ ಹಿರೇಮಠ ೬೨೫/೫೯೬ ೯೫.೩೬%, ಸಚಿನ್ ೬೨೫/೫೮೧ (೯೨.೯೬%) ಸಚಿನ್ ೬೨೫/೫೬೯ (೯೧.೦೪%) ಶಿವಕುಮಾರ ಪೂಜಾರಿ ೬೨೫/೫೬೯ (೯೧.೦೪%) ಪೂಜಾ ೬೨೫/೫೬೬ (೯೦.೫೬%) ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರಿಮತಿ ಶಾರದಾಬಾಯಿ.ವಿ.ಪುಲಸ್ಕರ್, ಕಾರ್ಯದರ್ಶಿಗಳಾದ ವೆಂಕಟೇಶ ಪುಲಸ್ಕರ್ ಹಾಗೂ ಶಾಲಾ ಅಡಳಿತ ಮಂಡಳಿ ಅಭಿನಂದನೆ ತಿಳಿಸಿದ್ದಾರೆ.

 

ಎಸ್.ವಿ.ಇ.ಎಂ. ಶಾಲೆ : ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ. ೯೮:
ವರ್ಷಾ ಭೀಮರೆಡ್ಡಿ ೬೨೦ ಅಂಕಗಳು:

ಕೊಪ್ಪಳ, ೧೨ : ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಈ ಸಲದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೯೮ ಪ್ರತಿಶತದೊಂದಿಗೆ ಉತ್ತಮ ಫಲಿತಾಂಶ ಪಡೆದಿದೆ.
ಕು. ವರ್ಷಾ ಭೀಮರೆಡ್ಡಿ ೬೨೦ ಅಂಕಗಳೊಂದಿಗೆ ಶೇ. ೯೯.೨೦% ಪ್ರತಿಶತದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈ ಮೂಲಕ ಶಾಲೆಯ ಇತಿಹಾಸದಲ್ಲಿ ಅತಿ ಹೆಚ್ಚು ಅಂಕ ಪಡೆದ ದಾಖಲೆಯನ್ನು ಮಾಡಿದ್ದಾಳೆ. ಕು. ಆಫೀಯಾ ನಾಝ್ ೬೧೭ ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಹಾಗೂ ಕು. ಪೂಜಾ ರಕರೆಡ್ಡಿ ಮತ್ತು ಕು. ಅಖೀಲಾ ೬೦೮ ಅಂಕಗಳೊಂದಿಗೆ ಮೂರನೇ ಸ್ಥಾನವನ್ನು ಪಡೆದಿದ್ದಾರೆ.
ಒಟ್ಟು ೫೯ ಡಿಸ್ಟಿಂಕ್ಷನ್, ೩೮ ಪ್ರಥಮ ದರ್ಜೆ, ೦೨ ದ್ವೀತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಶಾಲಾ ಆಡಳಿತ ಮಂಡಳಿಯವರು, ಪ್ರಾಚಾರ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದಾರೆ.

ವಿದ್ಯಾವಿಕಾಸ ಪ್ರೌಢ ಶಾಲೆ ಭಾಗ್ಯನಗರ ೨೦೧೭ ರ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ ೮೦% ರಷ್ಟು
ಕೊಪ್ಪಳ : ೨೦೧೭ ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಫಲಿತಾಂಶ ಶೇ ೮೦% ರಷ್ಟು ಪಡೆದಿದ್ದು ೬ ವಿದ್ಯಾರ್ಥಿ/ವಿದ್ಯಾರ್ಥಿನಿಯರ ೫೦೦ ಕ್ಕೂ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.
ಕು. ಅಕ್ಷತಾ ಪಾಟೀಲ ೬೨೫ ಕ್ಕೆ-೫೪೧ ಶೇ ೮೬.೫೬%, ಕಾವ್ಯ ಪೊಲಿಸ್ ಪಾಟೀಲ್ ೬೨೫ ಕ್ಕೆ -೫೧೮ ಶೇ ೮೨.೮೮%, ವಿಜಯಕುಮಾರ ಬುಡ್ಡನಗೌಡ್ರು ೬೨೫ ಕ್ಕೆ -೫೧೩ ಶೇ ೮೨.೦೮%, ನೇತ್ರಾವತಿ ಬಾಯಿ ೬೨೫ ಕ್ಕೆ -೫೧೦ ಶೇ. ೮೧.೬%, ಅಕ್ಷತಾ ಐಲಿ ೬೨೫ ಕ್ಕೆ -೫೦೪ ಶೇ ೮೦.೬೪%, ವಿದ್ಯಾಸಾಗರ ಹಿರೇಮಠ ೬೨೫ ಕ್ಕೆ -೫೦೩ ಶೇ ೮೦.೪೮% ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ ಈ ವಿದ್ಯಾರ್ಥಿನಿಯರಿಗೆ ಹಾಗೂ ಶಿಕ್ಷಕ ವೃಂದಕ್ಕೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಘವೇಂದ್ರ ಪಾನಘಂಟಿಯವರು ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.

Please follow and like us:

Leave a Reply