ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾಹಿತಿ

ಕೊಪ್ಪಳ : ವಸತಿ ನಿಲಯದಲ್ಲಿದ್ದು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಬಯಸುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಾಹನದ ವ್ಯವಸ್ಥೆಯನ್ನು ಮಾಡಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪಾಲಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್-19 ಪ್ರಸರಣವನ್ನು ತಡೆಗಟ್ಟಲು ಒಟ್ಟು 45 ವಸತಿ ನಿಲಯಗಳನ್ನು ಹಾಗೂ ಶಾಲೆಗಳನ್ನು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲಾಗಿತ್ತು. ಕೆಲವು ಕೇಂದ್ರಗಳಲ್ಲಿ ದೇಶದ ಬೇರೆ ಬೇರೆ ರಾಜ್ಯ ಮತ್ತು ಬೇರೆ ಬೇರೆ ಜಿಲ್ಲೆಗಳ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಿಗಳು, ಪ್ರವಾಸಿಗರು ಮುಂತಾದವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.
ಪ್ರಸ್ತುತ ಜೂನ್ 25 ರಿಂದ ಜುಲೈ 04 ರವೆರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 63 ಪರೀಕ್ಷಾ ಕೇಂದ್ರಗಳು ಮತ್ತು 17 ಉಪ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗಿದ್ದು, ಈ ಪರೀಕ್ಷಾ ಕೇಂದ್ರಗಳನ್ನು ಹತ್ತಿರದ ವಿವಿಧ ಇಲಾಖೆಯ ವಸತಿ ನಿಲಯಗಳೊಂದಿಗೆ ಮ್ಯಾಪಿಂಗ್ ಮಾಡಲಾಗಿದ್ದು, ಒಟ್ಟು- 110 ವಸತಿ ನಿಲಯಗಳನ್ನು ಗುರುತಿಸಿ ನಿಗದಿಪಡಿಸಲಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈ ಹಿಂದೆ ಅಥವಾ ಪ್ರಸ್ತುತ ಕ್ವಾರಂಟೈನ್ ಮಾಡಿದ್ದ ವಸತಿ ನಿಲಯಗಳನ್ನು/ ಶಾಲೆಗಳನ್ನು ಪರೀಕ್ಷಾ ಕೇಂದ್ರದ ಅಥವಾ ವಸತಿ ಉದ್ದೇಶಕ್ಕಾಗಿ ಬಳಸಿಕೊಂಡಿರುವುದಿಲ್ಲ. ಹಾಗಾಗಿ ಪಾಲಕರು/ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೆ ನಿರ್ಭಯವಾಗಿ ಪರೀಕ್ಷೆಗೆ ಹಾಜರಾಗಬಹುದಾಗಿದೆ.
ಆದ್ದರಿಂದ ವಸತಿ ನಿಲಯದಲ್ಲಿದ್ದು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಈ ಹಿಂದೆ ದಾಖಲಾಗಿದ್ದ ವಸತಿ ನಿಲಯ ವಾರ್ಡನ್‌ಗಳನ್ನು ಸಂಪರ್ಕಿಸಿ ಪರಿಷ್ಕೃತಗೊಂಡಿರುವ ವಸತಿ ನಿಲಯಗಳ ವಿವರವನ್ನು ಪಡೆಯಬಹುದು. ಈ ಕುರಿತು ಯಾವುದೇ ಗೊಂದಲಗಳಿದ್ದಲ್ಲಿ ಜಿಲ್ಲಾ ಸಹಾಯವಾಣಿ ಸಂಖ್ಯೆ: 08359-225001 ಅಥವಾ ಉಪನಿರ್ದೇಶಕರ ಕಚೇರಿಯ ಸುಜಾತಾ ಮೊ.ಸಂ: 9448973573, ನೀಲಕಂಠಪ್ಪ ಮೊ.ಸಂ: 9483698135, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊಪ್ಪಳ-9480695279, ಗಂಗಾವತಿ-9480695278, ಕುಷ್ಟಗಿ-9480695280, ಯಲಬುರ್ಗಾ-9480695281 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು .

Please follow and like us:
error