ಎಸ್‌ಎಫ್‌ಐ ಅಖಿಲ ಭಾರತ ಸಮ್ಮೇಳನಕ್ಕೆ ಆಯ್ಕೆ

Gangavati :   ಹಿಮಾಚಲ ಪ್ರದೇಶದ ಸಿಮ್ಲಾದಲ್ಲಿ ಅಕ್ಟೋಬರ ೩೦ ರಿಂದ ನವ್ಹಂಬರ ೦೨ ರ ವರಗೆ ನಡೆಯಲಿರುವ ಎಸ್‌ಎಫ್‌ಐನ ೧೬ನೇ ರಾಷ್ಟ್ರ ಸಮ್ಮೇಳನಕ್ಕೆ ಎಸ್‌ಎಫ್‌ಐನ ಜಿಲ್ಲಾಧ್ಯಕ್ಷ ಅಮರೇಶ ಕಡಗದ ಆಯ್ಕೆಯಾಗಿದ್ದಾರೆ.
ಕೋಮುವಾದ ಸೋಲಿಸಿ, ಶಿಕ್ಷಣ ಉಳಿಸಿ ದೇಶ ಉಳಿಸಿ ಎಂಬ ಪ್ರಮುಖ ಘೋಷಣೆ ಅಡಿಯಲ್ಲಿ ಶಿಕ್ಷಣ ರಾಷ್ಟ್ರೀಕರಣಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳ ಹಕ್ಕುಗಳ ಉಳುವಿಗಾಗಿ ದೇಶದ ಎಲ್ಲಾ ವಿವಿಗಳಲ್ಲಿ ಚುನಾವಣೆಗಾಗಿ ಆಗ್ರಹಿಸಿ, ರಾಷ್ಟ್ರವನ್ನು ತಲ್ಲಣಗೊಳಿಸುತ್ತಿರುವ ಭಯೋತ್ಪಾದನೆ, ಕೋಮುವಾದ, ಭ್ರಷ್ಟಾಚಾರ, ನಿರುದ್ಯೋಗ, ಬಡತನ ಹಲವಾರು ವಿಷಯಗಳು ಸೇರಿದಂತೆ ವಿಚಾರ ಸಂಕಿರ್ಣ ಚರ್ಚಾಗೋಷ್ಠಿ ನಡೆಯುತ್ತಿದ್ದು ನಾಲ್ಕು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ಖಾಸಗೀಕರಣ, ವ್ಯಾಪಾರಿಕರಣ, ಭ್ರಷ್ಟಾಚಾರ, ಖಾಸಗೀ ವಿದೇಶ ವಿಶ್ವವಿದ್ಯಾಲಯಗಳು ದೇಶಕ್ಕೆ ಆಗಮಿಸುತ್ತಿರುವುದನ್ನು ವಿರೋಧಿಸಿ, ಅಲ್ಲದೇ ವಿದ್ಯಾರ್ಥಿಗಳು ಎದುರಿಸುತ್ತಿರುವ ಜ್ವಾಲಂತ ಸಮಸ್ಯಗಳ ಪರಿಹಾರದ ಕುರಿತು ದೇಶದ ವಿವಿಧ ರಾಜ್ಯಗಳಿಂದ ಹಾಗೂ ವಿಶ್ವವಿದ್ಯಾಲಯಗಳಿಂದ ಬಂದಂತಹ ವಿದ್ಯಾರ್ಥಿ ಮುಖಂಡರುಗಳೊಂದಿಗೆ ಚರ್ಚೆ ನಡೆಯಲಿದ್ದು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ಶಿಕ್ಷಣ ತಜ್ಞರು ಈ ಒಂದು ಸಮ್ಮೇಳನದಲ್ಲಿ ಮಾರ್ಗದರ್ಶನ ಮಾಡುತ್ತಿದ್ದು ಈ ಸಮ್ಮೇಳನಕ್ಕೆ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಅಮರೇಶ ಕಡಗದ ಆಯ್ಕೆಯಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿರುವ ಸಮ್ಮಸ್ಯಗಳನ್ನು ಚರ್ಚೆಸಿ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಿ ಸಂಘಟನೆಯನ್ನು ಬಲಪಡಿಸಲು ಜಿಲ್ಲೆಗೆ ಅನೂಕೂಲವಾಗಿದೆ ಎಂದು ಎಸ್‌ಎಫ್‌ಐನ ರಾಜ್ಯ ಸಮಾವೇಶದಲ್ಲಿ ಭಾಗವಹಿಸಿದ ವಿರೇಶ ಹಿರೇಮಠ, ಖಾಸಿಂಸಾಬ್, ಸಮೀರ್, ನಾಗರಾಜ, ಅಮರೇಶ ಎಮ್ಮಿ, ರವಿಕುಮಾರ, ಶ್ರೀಧರ, ಯಮನೂರ ವಿದ್ಯಾರ್ಥಿ ಮುಖಂಡರುಗಳು  ತಿಳಿಸಿದ್ದಾರೆ

Please follow and like us:
error