ಎಸ್ಸಿ, ಎಸ್ಟಿ ನೌಕರರ ಒಕ್ಕೂಟದ ರಾಜ್ಯಮಟ್ಟದ ಸಭೆ

ಕೊಪ್ಪಳ:  ಕೊಪ್ಪಳ ಜಿಲ್ಲಾ ಎಸ್ಸಿ, ಎಸ್ಟಿ ನೌಕರರ ಒಕ್ಕೂಟದ ರಾಜ್ಯಮಟ್ಟದ ಸಭೆ ಇದೇ ರವಿವಾರ ದಿನಾಂಕ ೨೦.೫.೨೦೧೮ ರಂದು ಬೆಳಿಗ್ಗೆ ೧೦:೩೦ ಘಂಟೆಗೆ, ಕೊಪ್ಪಳ ನಗರದ ಸರ್ಕಾರಿ ನೌಕರರ ಭವನದಲ್ಲಿ ಜರುಗಲಿದೆ.

ರಾಜ್ಯ ಮಟ್ಟದ ಸಭೆಗೆ ಎಸ್ಸಿ,ಎಸ್ಟಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷರು ಆಗಿರುವ ಹಿರೇಹಳ್ಳಿ ಮಲ್ಲಿಕಾರ್ಜುನ ಮತ್ತು ಅವರೊಂದಿಗೆ ಎಲ್ಲಾ ಜಿಲ್ಲೆಗಳಿಂದ ಅಧ್ಯಕ್ಷರು, ಪದಾಧಿಕಾರಿಗಳು ಆಗಮಿಸಲಿದ್ದಾರೆ.ಸಭೆಯಲ್ಲಿ ನಮ್ಮ ಮುಂದಿನ ಹೋರಾಟಗಳ ಬಗ್ಗೆ ಚರ್ಚಿಸಲಾಗುವುದು.

ಈ ಸಭೆಗೆ ನಿವೃತ್ತ ನೌಕರರ ಒಕ್ಕೂಟ, ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಗೆ ಕೊಪ್ಪಳ ಜಿಲ್ಲಾ ಸಮಸ್ತ ಎಸ್ಸಿ,ಎಸ್ಟಿ ನೌಕರರು ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಧನಂಜಯ ಮಾಲಗಿತ್ತಿ, ಡಾ ಪ್ರಭುರಾಜ ನಾಯಕ ತಿಳಿಸಿದ್ದಾರೆ.

Please follow and like us:
error