ಎಸ್ಪಿ ಅನೂಪ್ ಶೆಟ್ಟಿ ಬಿಜೆಪಿಯವರೊಂದಿಗೆ ಶಾಮೀಲಾಗಿದ್ದಾರೆ- ಇಕ್ಬಾಲ್ ಅನ್ಸಾರಿ

ಕೊಪ್ಪಳ : ಸಂಘಪರಿವಾರದ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪ್ರಚೋದನಕಾರಿ ಹೇಳಿಕೆ ಹಿನ್ನಲೆಯಲ್ಲಿ ಕೊಪ್ಪಳ ಎಸ್ಪಿ ವಿರುದ್ದ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವಾಗ್ದಾಳಿ ನಡೆಸಿದ್ದಾರೆ. ಗಂಗಾವತಿಯಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಸ್ಪಿ ಅನೂಪ್ ಶೆಟ್ಟಿ ಸಂಪೂರ್ಣ ವಿಫಲವಾಗಿದ್ದು, ಬಿಜೆಪಿ ಪರ ಕೆಲಸ ಮಾಡ್ತಾ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಚೈತ್ರಾ ಕುಂದಾಪುರ ಸೇರಿದಂತೆ ಕೆಲವರು , ಗಂಗಾವತಿಯಲ್ಲಿ ಕೋಮು ಪ್ರಚೋದನೆ ಭಾಷಣ ಮಾಡಿ ಅಶಾಂತಿ ವಾತವರಣ ಸೃಷ್ಠಿ ಮಾಡ್ತಾ ಇದ್ದಾರೆ. ಇಷ್ಟೇಲ್ಲಾ ದೂರು ಕೇಳಿಬಂದ್ರು ಕುಂದಾಪುರ ವಿರುದ್ದ ಎಸ್ಪಿ ಕ್ರಮ ತೆಗೆದುಕೊಳ್ತಾ ಇಲ್ಲ.ಕೋಮು ಗಲಭೆ ಸೃಷ್ಠಿಸಲು ಗುಪ್ತವಾಗಿ ಸಭೆ ನಡೆಸಿದ ಚೈತ್ರಾ ವಿರುದ್ದ ಕ್ರಮ ತೆಗೆದುಕೊಳ್ಳೋ ಬದಲು ಸಣ್ಣ ಪುಟ್ಟ ಅಪರಾಧಿಗಳನ್ನು ಹಿಡಿದು ಪೋಟೋ ತೆಗೆಸುಕೊಳ್ಳುತ್ತಾ ಮಹಾಸಾಧನೆ ಎಂದು ಬಿಂಬಿಸ್ತಾ ಇದ್ದಾರೆ. ಕೊಪ್ಪಳ ಎಸ್ಪಿ ಅನೂಪ್ ಶೆಟ್ಟಿ ಬಿಜೆಪಿ ಪರವಾಗಿ ಕೆಲಸ ಮಾಡ್ತಾ ಇದ್ದಾರೆ..ಪಕ್ಷಪಾತ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಗಂಗಾವತಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಕೊಪ್ಪಳ ಎಸ್ಪಿ ಅನೂಪ್ ಶೆಟ್ಟಿ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಕೋಮು ಪ್ರಚೋದನೆ ಯ ಭಯೋತ್ಪಾದನೆಯ ಕೆಲಸ ಮಾಡುತ್ತಿರುವ ಚೈತ್ರಾ ಕುಂದಾಪುರ ವಿರುದ್ಧ ಕ್ರಮಕೈಗೊಳ್ಳಲು ವಿಫಲರಾಗಿದ್ದಾರೆ.. ಅಮಿತ್ ಷಾ ಬಂದು ಹೋದ ನಂತರ ಎಸ್ಪಿಗೆ ಚೈತ್ರಾ ಕುಂದಾಪುರ ಳ ಕೋಮು ಪ್ರಚೋದನೆ, ಕೋಮು ಗಲಭೆಗೆ ಕುಮ್ಮಕ್ಕು ನೀಡುವ ಸಭೆ ನಡೆಸಿದ ಗುಪ್ತಚರ ಮಾಹಿತಿ ಇದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಇದುವರೆಗೆ ಯಾಕೆ ಸುಮೊಟೋ ಕೇಸ್ ದಾಖಲು ಮಾಡಿಲ್ಲ?ಓಸಿ ಆಡುವವರನ್ನ, ಬ್ರಾಂಡಿ ಬಾಟಲ್ ಗಳನ್ನ ಹಿಡಿದು ಮಹಾನ್ ಸಾಧನೆ ಮಾಡಿದವರಂತೆ ವರ್ತಿಸುತ್ತಿದ್ದಾರೆ.ಅಮಾಯಕರ ಮೇಲೆ ಕೇಸ್ ಹಾಕುವ ಎಸ್ಪಿ ಇದುವರೆಗೆ ಯಾಕೆ ಕ್ರಮಕೈಗೊಂಡಿಲ್ಲ.ಮೊನ್ನೆ ನಡೆದ ಗಲಾಟೆಗೆ ಸಂಬಂದಿಸಿದಂತೆ ಸಣ್ಣ ಸೆಕ್ಷನ್ ಗಳನ್ನು ಹಾಕಿದ್ದಾರೆ.. ಎಸ್ಪಿ ಬಿಜೆಪಿಯವರ ಜೊತೆ ಶಾಮೀಲಾಗಿದ್ದಾರೆ ಪಕ್ಷಪಾತ ಮಾಡುತ್ತಿದ್ದಾರೆ..ಮೇಲೆ ನಿಷ್ಠಾವಂತ ಎಂದು ತೋರಿಸಿಕೊಳ್ಳುವ ಎಸ್ಪಿ ವಿರುದ್ದ ಚುನಾವಣೆಯ ನಂತರ ಧ್ವನಿ ಎತ್ತುತ್ತೇವೆ ಎಂದು ಹೇಳಿಕೆ.

Please follow and like us:
error