ಎಲ್ ಐ ಸಿ ಪ್ರತಿನಿಧಿಗಳಿಂದ ಲೀಯಾಫಿ ದಿನಾಚರಣೆ

ಕೊಪ್ಪಳ : ಎಲ್ ಐ ಸಿ ಎಟಿಸಿ ಹಾಲ್ ನÀÀÀಲ್ಲಿ ಎಲ್‍ಐಸಿ ಪ್ರತಿನಿಧಿಗಳ ಸಂಘದಿಂದ ಲಿಯಾಫಿ ದಿನಾಚರಣೆ ಆಚರಿಸಲಾಯಿತು. ಜೊತೆಗೆ ಮಹಾತ್ಮ ಗಾಂಧಿಜೀ ಮತ್ತು ಲಾಲ್‍ಬಹದ್ಧೂರ್ ಶಾಸ್ತ್ರೀ ಅವರ ದಿನಾಚರಣೆಯನ್ನು ಈ ಕಾರ್ಯಕ್ರಮದಲ್ಲಿ ಆಚರಿಸಲಾಯಿತು. ಹಿರಿಯ ಶಾಖಾಧಿಕಾರಿ ಶ್ರೀಮತಿ ಸಂಧ್ಯಾರಾಣಿ ಅವರು ಮಾತನಾಡಿ ಸಂಘಟನೆ ಅವಶ್ಯಕ, ಸಂಘಟನೆಯಿಂದ ಮಾತ್ರ ಪ್ರತಿನಿಧಿಗಳ ಬೇಡಿಕೆ ಇಡೇರಲು ಸಾಧ್ಯ ಹಾಗೂ ಹೋರಾಟದ ಫಲವಾಗಿ ಎಷ್ಟೋ ಬೇಡಿಕೆಗಳು ಈಡೇರುತ್ತಾ ಬಂದಿದೆ ಎಂದು ಪ್ರತಿನಿಧಿ ಬಾಂಧವರಿಗೂ ಲಿಯಾಫಿ ಡೇ ಶುಭಾಶಯ ತಿಳಿಸಿದರು. ಲಿಯಾಫಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಪಂಡಿತ ಮಾತನಾಡಿ ಎಲ್‍ಐಸಿ ಪ್ರತಿನಿಧಿಗಳಿಗಾಗಿ 1964 ರಲ್ಲಿ ಲಿಯಾಫಿ ಸಂಘಟನೆ ಹುಟ್ಟಿ ಕೊಂಡಿತು ಎಲ್‍ಐಸಿ ಪ್ರತಿನಿಧಿಗಳ ಒಳಿತಿಗಾಗಿ ಅವರ ಹಕ್ಕುಗಳಿಗಾಗಿ ದೇಶಾದ್ಯಂತ ಶ್ರೀ ದೇವ ಮೂಡಬಿದರಿ ರವರು ಸಂಘಟನೆ ಮಾಡಿದರು ಮತ್ತು ಎಲ್ ಐ ಸಿ ಏಕೀಕರಣದ ನಂತರ ಕಾನೂನುನಲ್ಲಿ ಏಜೆಂಟ್ ಆ್ಯಕ್ಟ್ ತರುವಲ್ಲಿ ಕೂಡಾ ಪ್ರಮುಖ ಪಾತ್ರವಹಿಸಿ, ಲಿಯಾಫಿ ಸಂಘಟನೆಗಾಗಿ ಶ್ರಮಿಸಿದ ಎಸ್.ಎಸ್.ಅಲಿ ಮತ್ತು ದೇವ ಮೂಡಬಿದರಿ ಅವರನ್ನು ಸ್ಮರಿಸಿದರು. ಶ್ರೀ ಬಿ,ಸುರೇಶ ಮಾತನಾಡಿ ಗಾಂಧಿಜೀಯವರ ಅಹಿಂಸಾವಾದಿ ಆಗಿದ್ದರು ಮತ್ತು ಶಾಂತಿಯಿಂದ ಏನನ್ನಾದರು ಜಯಿಸಬಹುದು ಹಾಗೂ ಅವರ ಆದರ್ಶಗಳನ್ನು ನಾವು ಪಾಲಿಸೋಣ ಎಂದರು. ಮತ್ತು ಸ್ವಾತಂತ್ರ್ಯ ಪೂರ್ವದಿಂದಲು ಲಿಯಾಫಿ ಸಂಘಟನೆಯು ಹೋರಾಟಮಾಡುತ್ತಾ ಬಂದಿದ್ದು, ಇತ್ತೀಚೆಗೆ ನಿಧನರಾದ ರಾಯಚೂರ ಡಿವಿಜನ್ ಅಧ್ಯಕ್ಷ ಉಮೇಶ ಬಳಿಗಾರ ಅವರು ಪ್ರತಿನಿಧಿಗಳ ಒಳಿತಿಗಾಗಿ ಹೋರಾಟ ಮಾಡುತ್ತಿದ್ದ ಹಾದಿಯನ್ನು ಸ್ಮರಿಸಿದರು. ಉಪಶಾಖಾಧಿಕಾರಿ ಶ್ರೀ ನರಸಯ್ಯ ಮಾತನಾಡಿ ರಾಷ್ಟ್ರ ಕಂಡ ಅಪರೂಪದ ಪ್ರಧಾನಿ ಲಾಲ್‍ಬಹದ್ಧೂರ ಶಾಸ್ತ್ರೀ ಅವರು ಕೇವಲ 17 ತಿಂಗಳು ದೇಶದ ಪ್ರಧಾನಿ ಆಗಿದ್ದರು. ಮೃದು ಸ್ವಭಾವದ ಸರಳ ವ್ಯಕ್ತಿತ್ವ ಹೊಂದಿದ್ದ ಅವರು ನಮ್ಮ ದೇಶದ ವಿಚಾರವಾಗಿ ಅವರ ಪ್ರಾಮಾಣಿಕ ಆಡಳಿತಕ್ಕೆ ಯಾರೂ ಸರಿದುಗÀಲಾರರು. ಮತ್ತು ಜೈ ಜವಾನ್ ಜೈ ಕಿಸಾನ್ ಎಂಬ ಹೊಸ ಮಂತ್ರ ಘೋಷಣೆಯ ಮುಖಾಂತರ ನಮ್ಮ ರಾಷ್ಟ್ರದ ಅಭಿವೃದ್ಧಿಗಾಗಿ ಶ್ರಮಿಸಿದವರು ಎಂದು ಮಾತನಾಡಿದರು. ವೆದಿಕೆಯಲ್ಲಿ ಶ್ರೀ ವೆಂಕಟೇಶ, ಜೆ.ಸುರೇಶ, ಹಿರಿಯ ಪತಿನಿಧಿ ಶ್ರೀ ಶಂಕ್ರಗೌಡ್ರ, ಶ್ರೀನಿವಾಸ ಪಂಡಿತ ಉಪಸ್ಥಿತರಿದ್ದರು. ತೇಜಪ್ಪ ಸ್ವಾಗತಿಸಿದರು, ಭೀಮಸೇನ ಸಿದ್ಧಾಂತಿ ವಂದಿಸಿದರು.

Please follow and like us:
error