ಎಲ್ಲಾ ಬಟವಾಡೆ ಅಧಿಕಾರಿಗಳು ಜಿ.ಎಸ್.ಟಿ ಕಾಯ್ದೆಯಡಿ ನೊಂದಣಿ ಪಡೆಯುವುದು ಕಡ್ಡಾಯ

ಕೊಪ್ಪಳ ಸೆ.  : ಎಲ್ಲಾ ಬಟವಾಡೆ ಅಧಿಕಾರಿಗಳು ಹಾಗೂ ಟಿ.ಡಿ.ಎಸ್. ಪ್ರಾಧಿಕಾರಿಗಳು ಜಿ.ಎಸ್.ಟಿ ಕಾಯ್ದೆಯಡಿಯಲ್ಲಿ ನೊಂದಣಿ ಪಡೆಯುವುದು ಕಡ್ಡಾಯ ಎಂದು ಕೊಪ್ಪಳ ವಾಣಿಜ್ಯ ತೆರಿಗೆಗಳ (ಎಲ್.ಜಿ.ಎಸ್.ಟಿ.ಓ-೫೧೦) ಸಹಾಯಕ ಆಯುಕ್ತರಾದ ಎಂ.ಎಸ್. ಹನಮಸಾಗರ ಅವರು ಹೇಳಿದರು.
ಜಿ.ಎಸ್.ಟಿ ಕಾಯ್ದೆ-೨೦೧೭ ರ ಪ್ರಕರಣ ೫೧ ರ ಪ್ರಕಾರ ಟಿ.ಡಿ.ಎಸ್. ಕುರಿತು ಜಿಲ್ಲೆಯ ಕೊಪ್ಪಳ, ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಗಳ ಎಲ್ಲಾ ಟಿ.ಡಿ.ಎಸ್. ಪ್ರಾಧಿಕಾರಿಗಳು ಮತ್ತು ಬಟವಾಡೆ ಅಧಿಕಾರಿಗಳಿಗೆ ನಗರದ ಫಾರ್ಥ ಇಂಟರ್‌ನ್ಯಾಷನಲ್ ಹೊಟೆಲ್‌ನ ಸಿಂಧೂರ ಹಾಲ್‌ನಲ್ಲಿ ಇತ್ತಿಚೇಗೆ ಹಮ್ಮಿಕೊಳ್ಳಾದ ಮಾಹಿತಿಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಬಟವಾಡೆ ಅಧಿಕಾರಿಗಳು ಹಾಗೂ ಟಿ.ಡಿ.ಎಸ್. ಪ್ರಾಧಿಕಾರಿಗಳು ಜಿ.ಎಸ್.ಟಿ ಕಾಯ್ದೆಯಡಿಯಲ್ಲಿ ನೊಂದಣಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಆದರೆ, ನೊಂದಾಯಿತ ವರ್ತಕರಿಂದ ಮಾಡಿಕೊಂಡ ಕರಾರು ಅಥವಾ ಒಪ್ಪಂದದ ಮೊತ್ತ ೨.೫ ಲಕ್ಷಕ್ಕಿಂತ ಮೇಲ್ಪಟ್ಟಲ್ಲಿ ಮಾತ್ರ ಜಿ.ಎಸ್.ಟಿ (ಎಸ್.ಜಿ.ಎಸ್.ಟಿ ೧% & ಸಿ.ಜಿ.ಎಸ್.ಟಿ ೧%) ಕಟಾವಣೆ ಮಾಡಬೇಕಾಗುತ್ತದೆ ಎಂದು ಕೊಪ್ಪಳ ವಾಣಿಜ್ಯ ತೆರಿಗೆಗಳ (ಎಲ್.ಜಿ.ಎಸ್.ಟಿ.ಓ-೫೧೦) ಸಹಾಯಕ ಆಯುಕ್ತರಾದ ಎಂ.ಎಸ್. ಹನಮಸಾಗರ ಅವರು ಹೇಳಿದರು.  
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕರಾದ ಹರಿನಾಥಬಾಬ ಅವರು ಮಾತನಾಡಿ, ಜಿ.ಎಸ್.ಟಿ. ಅಡಿ ಟಿ.ಡಿ.ಎಸ್. ಮಾಡಿದ ಮೊತ್ತವನ್ನು ಖಜಾನೆ ಮೂಲಕ ಇಲಾಖೆಗೆ ಪಾವತಿಸುವಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡುತ್ತಾ ಖಜಾನೆ ಇಲಾಖೆಯು ಎಲ್ಲಾ ಡಿ.ಡಿ.ಓ.ಗಳ ನೆರವಿಗೆ ಸದಾಸಿದ್ಧ ವಿರುತ್ತದೆ ಎಂದರು.
ಕಾರ್ಯಾಗಾರದಲ್ಲಿ ಟಿ.ಡಿ.ಎಸ್. ನೊಂದಣಿ ಹಾಗೂ ಮಾಸಿಕ ನಮೂನೆಯ ಬಗ್ಗೆ ಮಾಹಿತಿಯನ್ನು ವಾಣಿಜ್ಯ ತೆರಿಗೆ ಇಲಾಖೆಯ ಬಸವರಾಜ ಹೆಚ್. ಅವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸುತ್ತಾ ಪ್ರತಿಯೊಬ್ಬ ಬಟವಾಡೆ ಅಧಿಕಾರಿಗಳು ಟಿ.ಡಿ.ಎಸ್. ಮಾಡಿದ ಮೊತ್ತವನ್ನು ಕಡ್ಡಾಯವಾಗಿ ಇಲಾಖೆಗೆ ಪ್ರತಿತಿಂಗಳು ೧೦ನೇ ತಾರಿಕಿನೊಳಗಾಗಿ ಪಾವತಿಸಬೇಕು ತಪ್ಪಿದ್ದಲ್ಲಿ, ದಿನವೊಂದಕ್ಕೆ ರೂ.೨೦೦ ರಂತೆ ರೂ. ೧೦,೦೦೦/-ರವರೆಗೆ ದಂಡ ತೆರಬೇಕಾಗುತ್ತದೆ ಎಂದರು.
ಜಿ.ಎಸ್.ಟಿ. ಅಡಿ ಟಿ.ಡಿ.ಎಸ್. ಮಾಡಿದ ಮೊತ್ತವನ್ನು ಏ೨ ಅಡಿಯಲ್ಲಿ ಹೇಗೆ ಇಲಾಖೆಗೆ ಜಮೆಮಾಡಬೇಕು ಎನ್ನುವುದರ ಕುರಿತು ೬ ಹಂತಗಳ ಪ್ರಕ್ರೀಯೆಯನ್ನು ಪಾತ್ಯಕ್ಷಿಕೆಯ ಮೂಲಕ ಧಾರವಾಡ ಜಿಲ್ಲಾ ಖಜಾನೆ ಇಲಾಖೆಯ ಅಮಿತಕುಮಾರ ಪಿ. ಕಲ್ಯಾಣ ಶೆಟ್ಟರ್‌ರವರು ವಿವರಿಸಿದರು.
ಗಂಗಾವತಿ ವಾಣಿಜ್ಯತೆರಿಗೆಗಳ ಸಹಾಯಕ ಆಯುಕ್ತ (ಎಲ್.ಜಿ.ಎಸ್.ಟಿ.ಓ-೫೧೫) ಎಂ.ಹೆಚ್. ರುದ್ರಯ್ಯ, ಬಳ್ಳಾರಿ ವಿಭಾಗದ ವಾಣಿಜ್ಯ ತೆರಿಗೆ ಅಧಿಕಾರಿ ನಾಗರಾಜ್, ಕೊಪ್ಪಳ ವಾಣಿಜ್ಯ ತೆರಿಗೆ ಅಧಿಕಾರಿ ಎಸ್.ಎ. ನಾಡಗೌಡರ್ ಸೇರಿದಂತೆ ಖಜಾನೆ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗವಿಸಿದ್ದಪ್ಪ ಅವರು ಕೊನೆಯಲ್ಲಿ ವಂದಿಸಿದರು.

Please follow and like us:
error